ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈತರು ಕೃಷಿಯನ್ನು ಕೇವಲ ಭಾವನಾತ್ಮಕವಾಗಿ ನೋಡಿದರೆ ಸಾಲದು, ಅದನ್ನು ಉದ್ಯಮವಾಗಿ ಪರಿಗಣಿಸಿದಾಗ ಮಾತ್ರ ಕೃಷಿಯಲ್ಲೂ ಲಾಭ ಪಡೆಯಲು ಸಾಧ್ಯ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ #DC Gurudatta Hegade ಕರೆ ನೀಡಿದರು.
ರೈತ ಉತ್ಪಾದಕ ಕಂಪನಿಗಳ ಒಕ್ಕೂಟಗಳ ಪಾತ್ರ ಕುರಿತು ಜಿಲ್ಲಾ ಪಂಚಾಯತ್ ಸಭಾಂಗದಲ್ಲಿ ಇಂದು ಜಿಲ್ಲಾ ಪಂಚಾಯಿತಿ, ಸಹೋದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಲಿಮಿಟೆಡ್, ಕೃಷಿ ಇಲಾಖೆ ಹಾಗೂ ಚೈತನ್ಯ ರೂರಾಲ್ ಡೆವಲಪ್ ಮೆಂಟ್ ಸೊಸೈಟಿ ಸೇರಿದಂತೆ ವಿವಿಧ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಬಹುದೊಡ್ಡ ಸಮೂಹಕ್ಕೆ ಕೃಷಿಯೇ ಪ್ರಮುಖ ವೃತ್ತಿಯಾಗಿದೆ.ದುರಂತ ಅಂದ್ರೆ ಇಲ್ಲಿಯೇ ಹೆಚ್ಚು ತೊಂದರೆಗಳಿವೆ. ಅನಿಶ್ಚಿತ ತೆಯಲ್ಲಿ ರೈತರು ಬೆಳೆ ಬೆಳೆಯುತ್ತಿದ್ದಾರೆ. ಬೆಳೆದ ಬೆಳಗೆ ಸರಿಯಾದ ಬೆಳೆ ಸಿಗದ ಪರಿಸ್ಥಿತಿಗಳಿವೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕೆನ್ನುವ ಪ್ರಯತ್ನ ಹಲವಾರು ವರ್ಷಗಳಿಂದಲೂ ನಡೆದಿದೆ. ಆದರೂ ಅದಕ್ಕೆ ಪರಿಹಾರ ಸಿಗದಂತಾಗಿದೆ. ಈ ಹಿನ್ನೆಲೆಯಲ್ಲಿ ಕೃಷಿಯನ್ನು ಕೇವಲ ಭಾವನಾತ್ಮಕವಾಗಿ ನೋಡದೆ , ಅದನ್ನು ಉದ್ಯಮವಾಗಿ ಪರಿಗಣಿಸಬೇಕಿದಾಗ ಮಾತ್ರ ಬೇರೆಯವ ಸಹಾಯಕ್ಕೆ ನೀವು ಕಾಯದೆ, ತಮ್ಮಿಂದ ಇತರರಿಗೆಸಹಾಯ ಮಾಡಲು ಸಾಧ್ಯವಾಗಲಿದೆ ಎಂದರು.
ಕೃಷಿ ಉತ್ಪನ್ನಗಳಿಗೆ ಈಗ ಮಾರುಕಟ್ಟೆ ಸಮಸ್ಯೆ ಯಿದೆ. ಇದನ್ನು ನಿಭಾಯಿಸಲು ಸರ್ಕಾರ ಹಲವು ರೀತಿ ಪ್ರಯತ್ನ ನಡೆಸುತ್ತಿರುವುದರ ನಡುವೆಯೇ ಸಹಕಾರಿ ಕ್ಷೇತ್ರವೂ ಕೂಡ ಪ್ರಯತ್ನ ನಡೆಸಿದೆ.ಆದರೆ ಸಹಕಾರಿ ಕ್ಷೇತ್ರದಲ್ಲಿ ಒಂದಷ್ಟು ಲೋಪದೋಷಗಳು ಆಗಿದ್ದನ್ನುನಾವು ನೋಡಿದ್ದೇವೆ. ಇಂತಹ ಸಂದರ್ಭದಲ್ಲಿ ರೈತ ಉತ್ಪಾದಕಕಂಪನಿಗಳ ಪಾತ್ರ ದೊಡ್ಡದಿದೆ. ಇಲ್ಲಿ ರೈತರಿಗೆ ಸಮರ್ಥವಾಗಿ ನ್ಯಾಯ ಕೊಡಿಸಲು ಸಾಧ್ಯವಾಗಲಿದೆ ಎಂದರು.
ಜಿಲ್ಲೆಯಲ್ಲಿ ರೈತ ಉತ್ಪಾದಕ ಕಂಪನಿಗಳ ಸ್ಥಾಪನೆ ಮತ್ತು ಉತ್ತೇಜನಕ್ಕೆ ಸಹೋದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಮತ್ತು ಚೈತನ್ಯ ರೂರಲ್ ಡೆವೆಲಪ್ಮೆಂಟ್ ಸೊಸೈಟಿ ಬಹಳ ಒಳ್ಳೆಯ ಕೆಲಸ ಮಾಡುತ್ತಿವೆ. ಇಂತಹ ಪ್ರಯತ್ನಗಳ ಮೂಲಕ ರೈತರು ಸಂಘಟಿತರಾಗಿ ಕೆಲಸ ಮಾಡಿದರೆ ರೈತರ ಉತ್ಪನ್ನಗಳಿಗೆ ಒಳ್ಳೆಯ ಬೆಲೆ ಪಡೆಯಲು ಸಾಧ್ಯವಾಗಲಿದೆ. ಸರ್ಕಾರಿ ವ್ಯವಸ್ಥೆಯಲ್ಲಿ ರೈತ ಉತ್ಪಾದಕ ಕಂಪನಿಗಳಿಗೆ ನೆರವು ಅಗತ್ಯವಿದ್ದರೆ ಅದನ್ನು ಕಲ್ಪಿಸಿಕೊಡಲಾ ಗುವುದು ಎಂದುಭರವಸೆ ನೀಡಿದರು.
ಸರ್ಕಾರದ ಸೌಲಭ್ಯಗಳನ್ನು ಹಂಚಿಕೆ ಮಾಡುವಾಗ ಎಸ್ಟಿ ಎಸ್ಟಿಗೆ ಇಷ್ಟು, ಮಹಿಳೆಯರಿಗೆ ಇಷ್ಟು, ಎಎಲ್ ಎ, ಎಂಪಿ ಕೋಟಾ ಇಷ್ಟು ಎಂದು ಹಂಚಿಕೆ ಮಾಡುವ. ಪದ್ದತಿ ಹಾಗೆಯೇ ಇದೆ.ಇದರಿಂದ ಎಷ್ಟು ಪ್ರಯೋಜನ ಆಗಿದೆ ಎಂದು ಅಧಿಕಾರಿಗಳು ಸೇರಿ ಯಾರು ಕೂಡ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ, ಇನ್ನಾದರೂ ಕೂಡ ಅಧಿಕಾರಿಗಳ ಮನೋಭಾವ ಬದಲಾಗ ಬೇಕಿದೆ.ಅವರು ಕೂಡ ಹೊಸತನ್ನು ಕಲಿಯಬೇಕಿದೆ. ಒಬ್ಬರಿಗೆ ಎನ್ನುವ ಬದಲಿಗೆಇಂತಹ ರೈತ ಉತ್ಪಾದಕ ಕಂಪನಿಗಳ ಮೂಲಕ ಸೌಲಭ್ಯ ನೀಡಿದರೆ ದೊಡ್ಡ ರೈತ ಸಮುದಾಯಕ್ಕೆ ಅನುಕೂಲವಾಗಲಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದರು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯಾ ನಿರ್ವಹಣಾಧಿಕಾರಿ ಎನ್.ಹೇಮಂತ್ ಮಾತನಾಡಿ, ರೈತರ ಉತ್ಪನ್ನಗಳ ಮಾರುಕಟ್ಡೆಗೆ ಕಿಸಾನ್ ಮಾಲ್,ರೈತ ಮಾರ್ಕೆಟ್ ಮಾಡುವ ಪ್ರಸ್ತಾಪ ಇಟ್ಟಿದ್ದೀರಿ, ಇದನ್ನು ಹೇಗೆ ಮಾಡಬೇಕು, ನಿರ್ವಹಣೆ ಹೇಗೆ ಎನ್ನುವುದನ್ನು ಆಲೋಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತ ಉತ್ಪಾದಕ ಕಂಪನಿಗಳ ಒಕ್ಕೂಟದ ತಜ್ಞ ನಿರ್ದೇಶಕ ಭದ್ರೀಶ್ ಮಾತನಾಡಿ, ಜಿಲ್ಲೆಯಲ್ಲಿಒಟ್ಟು 49 ಕಂಪನಿಗಳಿವೆ. ಅವುಗಳನ್ನು ಸೇರಿಸಿ ರೈತ ಉತ್ಪಾದಕ ಕಂಪನಿಗಳಒಕ್ಕೂಟ ರಚಿಸಲಾಗಿದೆ. ಇದರ ಮೂಲಕ ರೈತರಿಗೆ ಕೃಷಿ ಪರಿಕರಗಳನ್ನು ಕಡಿಮೆ ಬೆಲೆಗೆ ತಲುಪಿಸುವುದು, ರೈತ ಉತ್ಪನ್ನಗಳಿಗೆ ನ್ಯಾಯ ಯುತ ಬೆಲೆ ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ಡಾ.ಕಿರಣ್ ಕುಮಾರ್, ನಬಾರ್ಡ್ ಡಿಡಿಎಂ ಶರತ್ ಪಿ. ಗೌಡ,
ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಎ. ಬಾಬುರತ್ನ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ ,ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕಿ ಶಿವಕುಮಾರ್, ಸಹೋದಯ ರೈತ ಉತ್ಪಾದಕ ಕಂಪನಿಗಳ ಒಕ್ಕೂಟದ ಅಧ್ಯಕ್ಷ ಅನುಪ್. ಬಿ. ಹಾಗೂ ಉಪಾಧ್ಯಕ್ಷ ಸತೀಶ್ ಇದ್ದರು. ಜಿಲ್ಲೆಯ ವಿವಿಧೆಡೆಗಳಿಂದ ಬಂದಿದ್ದ ನೂರಾರು ರೈತರು ಕಾರ್ಯಾಗಾರದಲ್ಲಿ ಪಾಲ್ಗೊಂಡರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post