ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೈಲ್ವೇ ಸೇವೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಅಗತ್ಯವಿರುವ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ Ashwin Vaishnav ಮನವಿ ಸಲ್ಲಿಸಲಾಯಿತು.
ಬೀರೂರು-ಶಿವಮೊಗ್ಗ ನಡುವಿನ ಡಬ್ಲಿಂಗ್ ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಶಿವಮೊಗ್ಗ-ಭುವನೇಶ್ವರ್ ರೈಲು ಸಂಚಾರಕ್ಕೆ ಅನುಮತಿ ಇದ್ದರೂ ಇನ್ನೂ ಕಾರ್ಯ ಆರಂಭ ಮಾಡಿಲ್ಲ. ಕೂಡಲೇ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಅತಿ ಹೆಚ್ಚು ಬೇಡಿಕೆ ಇರುವ ಶಿವಮೊಗ್ಗ-ಕಾಚಿಗೊಡ ( ಚಿತ್ರದುರ್ಗದ ಮೂಲಕ ) ಸಂಚಾರ ಮಾರ್ಗ ಆರಂಭಿಸಬೇಕು ಎಂದು ಆಗ್ರಹಿಸಿದರು.

Also read: ಪಿಎಫ್‌ಐ ಜೊತೆ ಭಜರಂಗದಳ ಹೋಲಿಸಿ ಮಾತನಾಡಿದ್ದು ಅಪರಾಧ: ಯಡಿಯೂರಪ್ಪ
ಶಿವಮೊಗ್ಗ ಚೆನ್ನೈ ರೈಲು ಸಂಚಾರವನ್ನು ಬೆಂಗಳೂರಿನ ಮೂಲಕ ತೆರಳುವಂತೆ ರೈಲಿನ ವ್ಯವಸ್ಥೆ ಕಲ್ಪಿಸಬೇಕು. ತಾಳಗುಪ್ಪ-ಹುಬ್ಬಳ್ಳಿ ರೈಲ್ವೇ ಮಾರ್ಗದ ಬಗ್ಗೆಯು ಸೂಕ್ತ ಕ್ರಮ ವಹಿಸಬೇಕು. ಶಿವಮೊಗ್ಗ ಜಿಲ್ಲೆಯಲ್ಲಿ ಅಗತ್ಯವಿರುವ ರೈಲ್ವೇ ಸೇವೆ ಹಾಗೂ ಸೌಕರ್ಯಗಳನ್ನು ಶೀಘ್ರದಲ್ಲಿ ಈಡೇರಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.











Discussion about this post