ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದ್ವಿತೀಯ ಪಿಯುಸಿ ಫಲಿತಾಂಶ #SecondPUCResult ಇಂದು ಪ್ರಕಟಗೊಂಡಿದ್ದು, ಜಿಲ್ಲೆಯ ಪ್ರತಿಷ್ಠಿತ ಡಿವಿಎಸ್ ಸ್ವತಂತ್ರ ಪಿಯು ಕಾಲೇಜಿನ #DVSPUCollege ವಿದ್ಯಾರ್ಥಿನಿ ಎಚ್.ಎಂ. ಚುಕ್ಕಿ ರಾಜ್ಯಕ್ಕೇ ನಾಲ್ಕನೇ ರ‍್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತೀ ತಂದಿದ್ದಾರೆ.
600ಕ್ಕೆ 593 ಅಂಕಗಳನ್ನು ಗಳಿಸುವ ಮೂಲಕ ನಾಲ್ಕನೇ ರ‍್ಯಾಂಕ್ ಗಳಿಸಿ, ಕಾಲೇಜು ಹಾಗೂ ಜಿಲ್ಲೆಯ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿನಿ ಶಿವಮೊಗ್ಗದ ಪತ್ರಕರ್ತ ಹಾಗೂ ಕನ್ನಡ ಮೀಡಿಯಂ ಚಾನಲ್ ಸಂಪಾದಕ ಹೊನ್ನಾಳಿ ಚಂದ್ರಶೇಖರ್ ಮತ್ತು ವಕೀಲರಾದ ಪೂರ್ಣಮಾ ಎಚ್.ಎಂ ಅವರ ಪುತ್ರಿ.
ಚುಕ್ಕಿಯನ್ನು ಹಾಗೂ ಡಿವಿಎಸ್ ಆಡಳಿತ ಮಂಡಳಿಯನ್ನು ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post