ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ನಾಡು ರಕ್ಷಣಾ ವೇದಿಕೆಯ ದಶಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಮಲೆನಾಡು ಉತ್ಸವ, ಡಾ. ಪುನೀತ್ ರಾಜ್‍ಕುಮಾರ್ #Puneeth Rajkumar ಸವಿನೆನಪಿನಲ್ಲಿ ಕರ್ನಾಟಕ ರಾಜ್ಯಪ್ರಶಸ್ತಿ ವಿಜೇತರು ಹಾಗೂ ಕನ್ನಡಕ್ಕಾಗಿ ಸಾಧನೆ ಮಾಡಿರುವ ಮಹನೀಯರಿಗೆ ಸನ್ಮಾನ ಸಮಾರಂಭವನ್ನು ಫೆ.20ರ ಸಂಜೆ 4.30ಕ್ಕೆ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ದಿನೇಶ್ ಎಸ್.ಎಂ. ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ಶಿವಮೊಗ್ಗದಲ್ಲಿ ವೇದಿಕೆ ಅಸ್ತಿತ್ವಕ್ಕೆ ಬಂದಿದ್ದು, ಪ್ರತೀ ವರ್ಷವೂ ಸಮಾಜಮುಖಿ ಸೇವೆ ಹಾಗೂ ಹೋರಾಟಗಳನ್ನು ನಡೆಸುತ್ತಾ ಬರಲಾಗುತ್ತಿದೆ ಎಂದರು.
ಅಂದು ಮಧ್ಯಾಹ್ನ 3.30ಕ್ಕೆ ಸೈನ್ಸ್ ಮೈದಾನದಿಂದ ಭುವನೇಶ್ವರಿ ದೇವಿಯ ರಾಜಬೀದಿ ಉತ್ಸವವಿದ್ದು, ನಂತರ ನಡೆಯುವ ಸಮಾರಂಭದ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಹೊನ್ನಾಳಿ ತಾಲೂಕಿನ ರಾಂಪುರದ ಬೃಹನ್ಮಠದ ಶ್ರೀ ಸದ್ಗುರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶ್ರೀಕ್ಷೇತ್ರ ದಿಂಡದಹಳ್ಳಿಯ ಶ್ರೀ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ವಹಿಸಲಿದ್ದು, ಅಧ್ಯಕ್ಷತೆಯನ್ನು ವೇದಿಕೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಪ್ರಸನ್ನಗೌಡ್ರು ವಹಿಸಲಿದ್ದಾರೆ ಎಂದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮಾಜಿ ಶಾಸಕ ಕೋಣಂದೂರು ಲಿಂಗಪ್ಪ, ನಿವೃತ್ತ ಪ್ರಾಧ್ಯಾಪಕ ಪ್ರೊ.ರಾಜೇಂದ್ರ ಚೆನ್ನಿ, ಹಿರಿಯ ಜನಪದ ಕಲಾವಿದ ಬಿ.ಟಾಕಪ್ಪ ಕಣ್ಣೂರು, ಶಿವಮೊಗ್ಗದ ತಬಲ ವಾದಕ ಆರ್.ತುಕಾರಾಂ ರಾವ್ ರಂಗದೋಳ್, ಯೋಗಾಚಾರ್ಯ ಜೆ.ನಾಗರಾಜ್, ನಟನಂ ಬಾಲನಾಟ್ಯ ಕೇಂದ್ರದ ನಿರ್ದೇಶಕ ವಿದ್ವಾನ್ ಡಾ.ಎಸ್.ಕೇಶವಕುಮಾರ್ ಪಿಳ್ಳೈ, ವಯಲಿನ್ ವಿದ್ವಾಂಸಕ ಹೊಸಳ್ಳಿ ಕೆ.ವೆಂಕಟರಾವ್, ಶಿಕ್ಷಕ ಸಿ.ಹೆಚ್.ಹನುಮಂತಪ್ಪ, ಯಕ್ಷಗಾನ ಕಲಾವಿದ ಪರಮೇಶ್ವರ ಹೆಗಡೆ ಹಾಗೂ ಎಸ್.ವಿ.ಚಂದ್ರಕಲಾ ಇವರನ್ನು ಸನ್ಮಾನಿಸಲಾಗುವುದು ಎಂದರು.
ಸಮಾರಂಭವನ್ನು ಚಿತ್ರನಟ ಡಾ. ಶಿವರಾಜ್‍ಕುಮಾರ್ #Shivarajkumar ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಆರಗ ಜ್ಞಾನೇಂದ್ರ, ಶಾರದಾ ಪೂರ್ಯಾನಾಯ್ಕ, ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್, ಎಂಐಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ರಾಜ್ಯಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಚಲನಚಿತ್ರ ನಟರಾದ ಧರ್ಮಕೀರ್ತಿರಾಜ್, ರಘುರಾಜ್ ಮಲೆನಾಡು, ಭಾಸ್ಕರ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕುಬೇರ್, ಸಚಿನ್ ಗೌಡ, ಬಾಹುದ್ದಿನ್, ಸಂಕೇತ್ ಎನ್.ಶೇಟ್, ಸುಬ್ರಹ್ಮಣ್ಯ ನಾಗರಾಜ್ ನಾಯ್ಕ್, ಪ್ರವೀಣ್‍ಕುಮಾರ್, ಶಿವು ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















