ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಧಾನ ಪರಿಷತ್‍ನ ಪದವೀಧರ ಕ್ಷೇತ್ರದ ಚುನಾವಣೆಯ ಪಾವಿತ್ರ್ಯತೆಯನ್ನೇ ಹಾಳುಮಾಡುತ್ತಿರುವ ದುಷ್ಟ ಪರಂಪರೆಗೆ ಕಡಿವಾಣ ಹಾಕಲೇ ಬೇಕಾಗಿದೆ ಎಂದು ನೈರುತ್ಯ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆಯನೂರು ಮಂಜುನಾಥ್ #Ayanuru Manjunath ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಅಭ್ಯರ್ಥಿ ಪದವೀಧರರ ಪಾವಿತ್ರ್ಯತೆಯನ್ನೇ ಹಾಳುಮಾಡಲು ಹೊರಟಿದ್ದಾರೆ. ವಿದ್ಯಾವಂತರ ಮತಗಳನ್ನು ಖರಿದಿಸುತ್ತಿದ್ದಾರೆ. ಹಣ ಮತ್ತು ಹೆಂಡದ ವ್ಯವಸ್ಥೆಯನ್ನು ನಿರಂತರವಾಗಿ ಮಾಡುತ್ತ ಬಂದಿದ್ದಾರೆ. ವಿದ್ಯಾವಂತರ ಕ್ಷೇತ್ರವನ್ನು ಅಪಕೀರ್ತಿಗೊಳಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಕಳೆದ 40 ವರ್ಷಗಳಿಂದ ನಾನು ಹಲವು ಚುನಾವಣೆಗಳನ್ನು ಮಾಡಿದ್ದೇನೆ. ಆದರೆ, ಈ ಪರಿಷತ್‍ನ ಚುನಾವಣೆ ಇಷ್ಟೊಂದು ಹೀನವಾಗಿರುವುದನ್ನು ನಾನು ಕಂಡಿರಲಿಲ್ಲ ಎಂದರು.
ಅನಾಚರದ ಹಣ ಆಚಾರವನ್ನೇ ಕಸಿದುಕೊಂಡಿದೆ. ಬಿಜೆಪಿ ಅಭ್ಯರ್ಥಿಯವರು ತಮ್ಮ ವೈದ್ಯಕೀಯ ಕ್ಷೇತ್ರವನ್ನು ಉದ್ಯಮವನ್ನಾಗಿ ಮಾಡುತ್ತೇನೆ. ಕರಪತ್ರದಲ್ಲಿಯೇ ಹಾಕಿಕೊಂಡಿದ್ದಾರೆ ಎಂದರೆ ಇದು ಎಷ್ಟರಮಟ್ಟಿಗೆ ಸತ್ಯ ಎಂಬುವುದನ್ನು ಮತದಾರರೇ ಊಹಿಸಬೇಕಾಗುತ್ತದೆ. ಹೇಳಿಕೇಳಿ ವೈದ್ಯಕೀಯ ಕ್ಷೇತ್ರ ಸೇವೆಗೆ ಸಂಬಂಧಪಟ್ಟಿದ್ದು, ಕೊರೋನ ಸಂದರ್ಭದಲ್ಲಿಅವರೆಷ್ಟು ಫಲಾನುಭವಿಗಳು ಎಂಬುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದರು.
Also read: ಚಳ್ಳಕೆರೆ ಬಳಿ ಭೀಕರ ಅಪಘಾತ | ಇಬ್ಬರು ಸ್ಥಳದಲ್ಲೇ ಸಾವು
ನಾನು ಮತಕ್ಕೆ ಮೌಲ್ಯ ನೀಡುವೆ, ಬಿಜೆಪಿ ಈ ಹಿಂದೆ ಕೆಸರಿನಲ್ಲಿ ಕಮಲ ಅರಳಿತು. ಆದರೆ ಈಗ ಅರಳಿದ ಕಮಲದಲ್ಲಿ ಕೆಸರು ಮೆತ್ತಿಕೊಳ್ಳಲಾಗುತ್ತಿದೆ. ಅವರಲ್ಲಿ ಹಣವಿದೆ. ನನಗೆ ಛಲವಿದೆ. ನಾನು ಎಂದು ಭ್ರಷ್ಟಚಾರ ಮಾಡಲಿಲ್ಲ. ಆದರೆ ಹೋರಾಟವನ್ನೇ ಮಾಡಿಕೊಂಡು ಬಂದಿದ್ದೇನೆ. ಯಾವುದೇ ಸಂದರ್ಭದಲ್ಲಿ ನಾನು ಹೋರಾಟವನ್ನು ಬಿಟ್ಟುಕೊಟ್ಟಿಲ್ಲ. ನಿಷ್ಕಳಂಕದಿಂದ ರಾಜಕಾರಣವನ್ನು ಹೋರಾಟವನ್ನು ಮಾಡಿಕೊಂಡು ಬಂದಿದ್ದೇನೆ. ಮತದಾರರಿಗೆ ನನ್ನ ಬಗ್ಗೆ ನಂಬಿಕೆ ವಿಶ್ವಾಸವಿದೆ. ಎದುರಾಳಿಗಳಿಗೆ ಯಾವ ಹೋರಾಟ ಹಿನ್ನಲೆಯೂ ಇಲ್ಲ. ವಾತಾವರಣ ಕಾಂಗ್ರೆಸ್ ಪರವಾಗಿದೆ. ನಾನು ಗೆದ್ದೇ ಗೆಲ್ಲುತ್ತೇನೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಡಾ.ಶ್ರೀನಿವಾಸ ಕರಿಯಣ್ಣ, ವೈ.ಹೆಚ್.ನಾಗರಾಜ್, ಡಾ.ಟಿ.ನೇತ್ರಾವತಿ, ಶಾಂತವೀರನಾಯಕ, ದೀರರಾಜ್, ಹಿರಣ್ಣಯ್ಯ, ಶಿ.ಜು.ಪಾಶ, ಜಿ.ಪದ್ಮನಾಬ್, ಸೈಯ್ಯದ್ ಅಡ್ಡು, ಸುರೇಶ್ ಕೋಟೇಕರ್, ಚಾಮರಾಜ್, ಲಕ್ಷ್ಮಣಪ್ಪ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post