ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೇಡಿಯೋ ಶಿವಮೊಗ್ಗ 90.8 ಮೆಗಾಹರ್ಟ್ಸ್ ಸಮುದಾಯ ಬಾನುಲಿ ಶೀಘ್ರದಲ್ಲಿಯೇ ಪ್ರಸಾರ ಆರಂಭಿಸಲಿದೆ. ಈಗ ಬನ್ನಿ ಮಾತನಾಡೋಣ ಎಂಬ ಸ್ಪರ್ಧೆಯನ್ನು ತಂದಿದೆ. ವಿಡಿಯೋ ಮುಖಾಂತರ ಭಾಷಣ ಮಾಡುವ ಸ್ಪರ್ಧೆ ಇದಾಗಿದೆ.
“ನಮ್ಮೂರ ಬಗ್ಗೆ ಹೇಳ್ತೀನಿ’ ಎಂಬ ವಿಷಯ ಕುರಿತು ಶಿವಮೊಗ್ಗ ಜಿಲ್ಲೆಯಲ್ಲಿರುವ ನಿಮ್ಮ ಊರು, ಗ್ರಾಮದ ಇತಿಹಾಸ/ವಿಶೇಷತೆ/ಜಾನಪದ/ಜನಜೀವನ…ಹೀಗೆ ಯಾವುದರ ಬಗ್ಗೆ ಬೇಕಾದರೂ ಮಾತನಾಡಬಹುದು.
ಸ್ಪರ್ಧಾ ನಿಯಮಗಳು ಹೀಗಿವೆ:
ನ.1-ನ.30ರವರೆಗೆ ಈ ಸ್ಪರ್ಧೆ ಜಾರಿಯಲ್ಲಿರುತ್ತದೆ. ವಯೋಮಿತಿಯ ನಿರ್ಬಂಧವಿಲ್ಲ. ವಿಡಿಯೋದಲ್ಲಿ ಸ್ವತಃ ನೀವು ಮಾತನಾಡಬೇಕು. ಊರನ್ನು ತೋರಿಸಬೇಡಿ. ಅದರ ಬಗ್ಗೆ ಹೇಳಿ. ವಿಡಿಯೋ ಅವಧಿ ಗರಿಷ್ಟ 120 ಸೆಕಂಡ್ ( ಎರಡು ನಿಮಿಷ).
ಒಬ್ಬರು ಒಂದೇ ವಿಡಿಯೋ ಕಳುಹಿಸಬೇಕು. ಒಂದಕ್ಕಿಂತ ಹೆಚ್ಚು ಕಳುಹಿಸಿದರೆ ಸ್ಪರ್ಧೆಗೆ ಪರಿಗಣಿಸಲಾಗುವುದಿಲ್ಲ. ವಿಡಿಯೋವನ್ನು ಸೂಚಿಸಲಾಗಿರುವ ಸಂಖ್ಯೆಗೆ ವಾಟ್ಸಪ್ ಮಾಡಬೇಕು. ಈ ವಿಚಾರದಲ್ಲಿ ಕಾಲ್ ಮಾಡಬಾರದು. ವಿಡಿಯೋ ಆರಂಭದಲ್ಲಿ ನಿಮ್ಮ ಹೆಸರು, ವಯಸ್ಸು, ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ಊರನ್ನು ತಿಳಿಸಿ. ಜೊತೆಗೆ ಬನ್ನಿ ನಮ್ಮೂರ ಬಗ್ಗೆ ಮಾತನಾಡೋಣ ಸ್ಪರ್ಧೆಗೆ ಎಂಬುದನ್ನೂ ಹೇಳಿ. ಆಯ್ದ ಐದು ವಿಡಿಯೋಗಳಿಗೆ ಬಹುಮಾನವಿರುತ್ತದೆ.
ಎಫ್ ಎಂ ಪ್ರಸಾರ ಆರಂಭವಾದ ನಂತರ ಬಹುಮಾನ ಘೋಷಣೆ, ವಿತರಣೆ ನಡೆಯಲಿದೆ. ಈ ವಿಚಾರದಲ್ಲಿ ವಾಟ್ಸಪ್, ಕಾಲ್ ಬೇಡ. ತೀರ್ಪುಗಾರರ ತೀರ್ಮಾನವೇ ಅಂತಿಮ. ಸ್ಪರ್ಧಿಗಳು ವಿಡಿಯೋ ಕಳುಹಿಸಬೇಕಾದ ವಾಟ್ಸಪ್ ಸಂಖ್ಯೆ (ಮೊ: 7259176279).
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post