ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲೆನಾಡು ಸೀಮೆಯ ಜನಪ್ರಿಯ ವಾಹಿನಿ ರೇಡಿಯೋ ಶಿವಮೊಗ್ಗ 90.8 ಎಫ್’ಎಮ್ #Shivamogga 90.8FM ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಆರ್’ಜೆ ಹಂಟ್ ನಡೆಸಿತು. ಇದರಲ್ಲಿ ವಿವಿಧ ಪದವಿ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಪರಿಸರ ಕೇಂದ್ರದ ಪದಾಧಿಕಾರಿ, ಸಹ್ಯಾದ್ರಿ ವಿಜ್ಞಾನ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಪ್ರೊ. ಎ.ಎಸ್. ಚಂದ್ರಶೇಖರ್ ರೇಡಿಯೋ ಮಹತ್ವ, ವಿದ್ಯಾರ್ಥಿಗಳು ಇದನ್ನು ಸದಾವಕಾಶವಾಗಿಸಿಕೊಳ್ಳುವ ಬಗೆಯನ್ನು ವಿಸ್ತೃತವಾಗಿ ತಿಳಿಸಿದರು.

Also read: ಚೋರಡಿ | ಬೀದಿ ನಾಯಿಗಳ ದಾಳಿಗೊಳಗಾಗಿದ್ದ ಜಿಂಕೆ ರಕ್ಷಣೆ
ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯೆ ಡಾ. ರಾಜೇಶ್ವರಿ ಮಾತನಾಡಿ, ರೇಡಿಯೋ ಶಿವಮೊಗ್ಗದ ಉತ್ಸಾಹಿ ತಂಡ ಕಾಲೇಜಿಗೆ ಬಂದಿರುವುದು ಸಂತಸ ತಂದಿದೆ. ವಿವಿಧ ಕಾಲೇಜಿನ ವಿದ್ಯಾರ್ಥಿಗಳಿಗೆ ಅಪೂರ್ವ ಅವಕಾಶ ದೊರೆಯಲಿದೆ. ದೊರೆತ ಅವಕಾಶವನ್ನು ಉಪಯೋಗಿಸಿಕೊಂಡು, ಬದುಕಿನಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಳ್ಳಬೇಕೆಂದು ಶುಭಾಶಿಸಿದರು.

ಉಪನ್ಯಾಸಕ ಪರಿಸರ ನಾಗರಾಜ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು, ಸಹಕರಿಸಿದರು. ಈ ಆಡಿಷನ್ ಆಯೋಜನೆಯಲ್ಲಿ ಕೊಡಚಾದ್ರಿ ಇಂಟಿಗ್ರೆಟೆಡ್ ಡೆವೆಲೆಪ್ ಮೆಂಟ್ ಸೊಸೈಟಿ, ಪರಿಸರ ಅಧ್ಯಯನ ಕೇಂದ್ರವು ಸಹಭಾಗಿಗಳಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 










Discussion about this post