ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹತ್ತಿದ ಏಣಿಯನ್ನು ಒದೆಯುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ ಎಂದು ಯಾರ ಹೆಸರು ಹೇಳದೆ ಬಿಜೆಪಿ ಸಂಸದ ಅಭ್ಯರ್ಥಿ ಬಿ.ವೈ. ರಾಘವೇಂದ್ರ B Y Raghavendra ಹೇಳಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಕೆ.ಎಸ್.ಈಶ್ವರಪ್ಪ K S Eshwarappa ಅವರು ಬಂಡಾಯ ಅಭ್ಯರ್ಥಿಯಾಗಿ ಘೋಷಿಸಿ ಎರಡು ವಾರಗಳೇ ಆಗಿವೆ. ರಾಷ್ಟ್ರದ ಮತ್ತು ರಾಜ್ಯದ ನಾಯಕರು ಅವರ ನಡೆಯನ್ನು ನೋಡುತ್ತ ಇದ್ದಾರೆ. ಖಂಡಿತ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ರಾಜಕೀಯ ಅನೇಕ ಮುಖಂಡರು ಹತ್ತಿದ ಏಣಿಯನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈಶ್ವರಪ್ಪನವರು ಬಿ.ಎಸ್. ಯಡಿಯೂರಪ್ಪನವರೇ B S Yadiyurappa ಶಿವಮೊಗ್ಗ ಕ್ಷೇತ್ರಕ್ಕೆ ಕಾಂಗ್ರೆಸ್‍ನಿಂದ ಡಮ್ಮಿ ಅಭ್ಯರ್ಥಿಯನ್ನು ಹಾಕಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಗೆ ಆ ಗತಿ ಇನ್ನೂ ಬಂದಿಲ್ಲ. ರಾಷ್ಟ್ರದ ಯಾವ ಮೂಲೆಯಲ್ಲೂ ನಾವು ಡಮ್ಮಿ ಅಭ್ಯರ್ಥಿಯನ್ನು ಹಾಕಿಸುವಂತಹ ಕೆಲಸ ಮಾಡುವುದಿಲ್ಲ. ಹೊಂದಾಣಿಕೆ ರಾಜಕೀಯ ಬಿಜೆಪಿಗೆ ಅಗತ್ಯ ಇಲ್ಲ ಎಂದರು.
Also read: ಕಲರ್ ಫುಲ್ ರಾಘಣ್ಣ | ಹೋಳಿಯಲ್ಲಿ ಮಿಂದೆದ್ದು ಅಪ್ಪು ಹಾಡಿಗೆ ಸ್ಟೆಪ್ ಹಾಕಿದ ಶಿವಮೊಗ್ಗ ಸಂಸದ
ಕೇಂದ್ರದ ಮೋದಿಯವರ Modi ಸಾಧನೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗದಲ್ಲಿಯಾದ ಅಭಿವೃದ್ಧಿ, ಹಿಂದೂಪರ ಚಿಂತನೆ ಇವೆಲ್ಲವೂ ನಮ್ಮನ್ನು ಗೆಲ್ಲಿಸುತ್ತವೆ. ಯಾರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ಯಾರಿಗೆ ಮತ ಕೊಡಬೇಕು, ಯಾರು ಅಭಿವೃದ್ಧಿ ಮಾಡುತ್ತಾರೆ ಎಂದು ಮತದಾರರಿಗೆ ಗೊತ್ತಿದೆ ಎಂದರು.
ನಟ ಶಿವರಾಜ್‍ಕುಮಾರ್ Shivarajkumar ಹೋದೆಡೆಯಲ್ಲ ಭರ್ಜರಿ ಜನರು ಸೇರುತ್ತಾರೆ ಎಂಬ ಪ್ರಶ್ನೆಗೂ ಉತ್ತರಿಸಿದ ಅವರು ಯಾವುದೇ ಒಬ್ಬ ಸಿನಿಮಾ ನಟನನ್ನು ಜನರು, ಯುವಕರು ನೋಡಲು ಸೇರುವುದು ಸಹಜವಾದುದು. ಈ ರಾಜ್ಯದಲ್ಲಿ ಬೇಕಾದಷ್ಟು ಈ ರೀತಿಯ ಉದಾಹರಣೆಗಳು ಇವೆ. ಆದರೆ, ಅವೆಲ್ಲವೂ ಮತಗಳಾಗಿ ಪರಿವರ್ತನೆಯಾಗಲ್ಲ. ನಟನನ್ನು ನೋಡುವುದು ಅಪೇಕ್ಷೆ ಮಾತ್ರ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post