Read - 2 minutes
ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವೃಂದಾವನ ಹಿಂದೂ ಸಮಾಜದ ವೇದಿಕೆಯಾಗಿದ್ದು, ಎಲ್ಲಾ ಸಮುದಾಯದವರು ಕೂಡ ಇದರಲ್ಲಿ ಪಾಲ್ಗೊಳ್ಳುವ ಮೂಲಕ ಇದನ್ನು ಬೆಳೆಸಬೇಕಿದೆ ಎಂದು ಶ್ರೀ ಸುಬುಧೇಂದ್ರತೀರ್ಥ ಸ್ವಾಮೀಜಿ ಹೇಳಿದರು.
ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠದ ವತಿಯಿಂದ ಬೊಮ್ಮನ ಕಟ್ಟೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ
ವೃಂದಾವನ ಪ್ರತಿಷ್ಠಾಪನೆ ಹಾಗೂ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಗುರುವಾರ ಆಶೀರ್ವಚನ ನೀಡಿದರು.
ವಿಶೇಷವಾಗಿ ರಾಘವೇಂದ್ರ ಸ್ವಾಮೀ ಇಲ್ಲಿ ವಿರಾಜಮಾನರಾಗಲಿದ್ದರೆ. ಮುಂದಿನ ದಿನಗಳಲ್ಲಿ ಇಲ್ಲಿಯೇ ರಾಯರ ದರ್ಶನ ಪಡೆಯಬಹುದಾಗಿದೆ. ಇದು ಸರ್ವ ಸಮಾಜದ ಆಸ್ತಿಯಾಗಲಿದೆ ಎಂದರು.
ನೆರೆ ಬಂದು ರಾಘವೇಂದ್ರ ಸ್ವಾಮಿ ಮಠಕ್ಕೆ ಹಾನಿಯಾಗಿದ್ದಾಗ ಅಂದಿನ ಸಿಎಂ ಯಡಿಯೂರಪ್ಪನವರು B S Yadiyurappa 12 ಕೋಟಿ ರೂ. ನೀಡಿ ಮಠ ನಿರ್ಮಾಣ ಮತ್ತು ತುಂಗಾಭದ್ರ ನದಿಗೆ ಹೊಸ ಸೇತುವೆ ನಿರ್ಮಾಣ ಮಾಡಿ ಕೊಟ್ಟಿದ್ದು ಅವರ ದೊಡ್ಡ ಗುಣವಾಗಿದೆ ಎಂದರು.
ಸಭೆಯಲ್ಲಿ ಪಾಲ್ಗೊಂಡ ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಮನಸ್ಸಿಗೆ ಹಿತ ನೀಡುವಲ್ಲಿ ರಾಘವೇಂದ್ರ ಸ್ವಾಮಿ ಮಠ ಅತೀ ಮುಖ್ಯವಾಗಿದೆ. ಇಲ್ಲಿ ಶ್ರೀ ಮಠದ ಪ್ರತಿರೂಪವಾಗಿ ನಿರ್ಮಾಣ ಮಾಡಲಾಗಿದೆ. ಅಲ್ಲಿನ ಮಠಕ್ಕೆ ಹೋಗಲು ಸಾಧ್ಯವಾಗದವರು ಈ ಮಠದಲ್ಲಿಯೇ ದರ್ಶನ ಪಡೆಯಬಹುದಾಗಿದೆ ಎಂದರು.
ಶಾಸಕ ಕೆ.ಎಸ್. ಈಶ್ವರಪ್ಪ ಮಾತನಾಡಿ, ಹಿಂದೂ ಸಮಾಜ ಒಂದಾಗಬಾರದೆಂದು ಅಲ್ಲೊಬ್ಬರು ಇಲ್ಲೊಬ್ಬರು ಹುಳಿ ಹಿಂಡುವ ಕೆಲಸ ಮಾಡುತ್ತಿದ್ದಾರೆ. ಸ್ವಾಮೀಜಿಯವರು ದಲಿತ ಕೇರಿಗೆ ಹೋಗಬೇಕೆಂದು ಕೇಳಿದಾಗ ಅದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲೂ ಕೊಂಕು ಹುಡುಕುವ ಕೆಲಸ ಒಬ್ಬ ಟಿವಿ ವರದಿಗಾರನಿಂದ ನಡೆದಿತ್ತು ಎಂದರು.
ಹಿಂದೂ ಸಮಾಜ ಒಂದು ಮಾಡುವ ಕೆಲಸ ಈ ಮಠದಿಂದಲೇ ಆಗಲಿದೆ ಎಂಬ ಆಶಯವಿದೆ. ಹಳೇ ಬೊಮ್ಮನಕಟ್ಟೆ, ಹೊಸಬೊಮ್ಮನ ಕಟ್ಟೆ, ದೇವಂಗಿ ಬಡಾವಣೆ ಸೇರಿಸಿಕೊಂಡು ರಾಘವೇಂದ್ರ ಬಡಾವಣೆ ಎಂದು ನಾಮಕರಣ ಮಾಡಲಾಗುತ್ತದೆ ಎಂದರು.
ಶಾಸಕರಾದ ಎಸ್. ರುದ್ರೇಗೌಡ ಮುಖಂಡರಾದ ಬಿ.ವೈ. ವಿಜಯೇಂದ್ರ, ಕೆ.ಸಿ.ನಟರಾಜ್ ಭಾಗವತ್, ಉಮಾಪತಿ, ಸುಭಾಷ್, ವಿಶ್ವಾಸ್, ವೀರಭದ್ರಪ್ಪ ಪೂಜಾರ್, ಎನ್. ಡಿ. ಸತೀಶ್, ಕೆ.ಇ. ಕಾಂತೇಶ್ ಮೊದಲಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post