ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮೈಸೂರು, ಬೆಂಗಳೂರು ಜಂಕ್ಷನ್’ಗಳಲ್ಲಿ ಒತ್ತಡ ಹೆಚ್ಚಾಗಿದ್ದು ಮಂದಿನ ದಿನಗಳಲ್ಲಿ ಪ್ರಮುಖ ರೈಲುಗಳನ್ನು ಶಿವಮೊಗ್ಗಕ್ಕೆ ತಿರುಗಿಸುವ ನಿಟ್ಟಿನಲ್ಲಿ ಈಗಾಗಲೆ ಯೋಜನೆಯ ಸಿದ್ದಗೊಳ್ಳುತ್ತಿದೆ.
-ಬಿ.ವೈ. ರಾಘವೇಂದ್ರ
ಅರಸಾಳುನಿಂದ ತೀರ್ಥಹಳ್ಳಿ, ಶೃಂಗೇರಿ-ಚಿಕ್ಕಮಗಳೂರು ಲಿಂಕ್ ಮಾಡಿ ಅಲ್ಲಿಂದ ಹಾಸನಕ್ಕೆ ಮೂಲಕ ಮಂಗಳೂರಿಗೆ ರೈಲ್ವೆ ಸಂಪರ್ಕ ವಿಐಎಸ್’ಎಲ್ ಈಗ ಡಿಸ್ ಇನ್ವೆಸ್ಟ್’ಮೆಂಟ್ ಸ್ಥಿತಿಯಲ್ಲಿದ್ದರೂ ಸೈಲ್ ನಿಮದ ಹಂತ ಹಂತವಾಗಿ ಬಂಡವಾಳ ಹೂಡಿಕೆ ಮಾಡಿ ಮುನ್ನಡೆಸಲು ತೀರ್ಮಾನಿಸಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಅರಸಾಳುನಿಂದ ತೀರ್ಥಹಳ್ಳಿ, ಶೃಂಗೇರಿ-ಚಿಕ್ಕಮಗಳೂರು ಲಿಂಕ್ ಮಾಡಿ ಅಲ್ಲಿಂದ ಹಾಸನಕ್ಕೆ ಮೂಲಕ ಮಂಗಳೂರಿಗೆ ರೈಲ್ವೆ ಸಂಪರ್ಕ ವಿಐಎಸ್’ಎಲ್ ಈಗ ಡಿಸ್ ಇನ್ವೆಸ್ಟ್’ಮೆಂಟ್ ಸ್ಥಿತಿಯಲ್ಲಿದ್ದರೂ ಸೈಲ್ ನಿಮದ ಹಂತ ಹಂತವಾಗಿ ಬಂಡವಾಳ ಹೂಡಿಕೆ ಮಾಡಿ ಮುನ್ನಡೆಸಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಕೈಗಾರಿಕಾ ಸಚಿವರಾದ ನಮ್ಮ ರಾಜ್ಯದವರೆ ಆದ ಎಚ್.ಡಿ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಡಿಸೆಂಬರ್ ವೇಳೆಗೆ ಕಾರ್ಖಾನೆ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಭದ್ರಾವತಿ, ಚನ್ನಗಿರಿ ಮೂಲಕ ಚಿಕ್ಕಜಾಜೂರಿಗೆ ರೈಲ್ವೆ ಸಂಪರ್ಕ ಕಲ್ಪಿಸುವ ಯೋಜನೆಯೂ ಸಿದ್ದವಾಗುತ್ತಿದೆ ಎಂದರು.
ಕೋಟೆ ಗಂಗೂರಿನಲ್ಲಿ 100 ಕೋ.ರೂಗಳ ರೈಲ್ವೆ ಕೋಚಿಂಗ್ ಕೆಲಸ ನಡೆಯುತ್ತಿದೆ. ಇದರಿಂದ ಪ್ರಮುಖ ರೈಲುಗಳು ಈ ಡಿಪೋದಿಂದಲೇ ಓಡಾಡುವ ಮತ್ತು ಶಿವಮೊಗ್ಗಕ್ಕೆ ಸಂಪರ್ಕ ಪಡೆಯಲಿವೆ. ಮೈಸೂರು, ಬೆಂಗಳೂರು ಜಂಕ್ಷನ್’ಗಳಲ್ಲಿ ಒತ್ತಡ ಹೆಚ್ಚಾಗಿದ್ದು ಮಂದಿನ ದಿನಗಳಲ್ಲಿ ಪ್ರಮುಖ ರೈಲುಗಳನ್ನು ಶಿವಮೊಗ್ಗಕ್ಕೆ ತಿರುಗಿಸುವ ನಿಟ್ಟಿನಲ್ಲಿ ಈಗಾಗಲೆ ಯೋಜನೆಯ ಸಿದ್ದಗೊಳ್ಳುತ್ತಿದೆ ಎಂದು ತಿಳಿಸಿದರು.
ವಿಶೇಷವಾಗಿ ತಾಳಗುಪ್ಪ-ಹೊನ್ನಾವರ, ತಾಳಗುಪ್ಪ-ಸಿದ್ದಾಪುರ ನಡುವೆ ರೈಲು ಮಾರ್ಗಕ್ಕೆ ಸರ್ವೆ ಆಗಿ, ವರದಿಯೂ ಬಂದಿದೆ. ತಾಳುಗುಪ್ಪ-ಸಿದ್ದಾಪುರ ನಡುವಿನ ಮಾರ್ಗ ವಾಣಿಜ್ಯ ದೃಷ್ಟಿಯಿಂದ ಶೇ. 80 ರಷ್ಟು ಕಾರ್ಯಸಾಧುವಾಗಿದ್ದರೆ. ತಾಳಗುಪ್ಪ-ಹೊನ್ನಾಪುರ ಶೇ 8 ಮೈನಸ್ ತೋರಿಸುತ್ತಿದೆ ಎಂದರು.
ತಾಳಗುಪ್ಪ-ಹೊನ್ನಾವರ ಮಾರ್ಗ ನಿರ್ಮಾಣ ವೆಚ್ಚ ಹೆಚ್ಚಾದರೂ ಅದನ್ನು ಮಾಡಲೇಬೇಕು ಎಂದು ನಾನು ಮತ್ತು ವಿಶ್ವೇಶ್ವರ ಹೆಗಡೆ (ಉತ್ತರಕನ್ನಡ ಸಂಸದ) ರೈಲ್ವೆ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ. ಈ ಸಂಬಂಧ ರೈಲ್ವೆ ಅಧಿಕಾರಿಗಳು ಹೋಂ ವರ್ಕ್ ಮಾಡುತ್ತಿದ್ದಾರೆ. ಶಿವಮೊಗ್ಗ- ಹರಿಹರ ರೈಲ್ವೆ ಮಾರ್ಗಕ್ಕೆ ರಾಜ್ಯ ಸರ್ಕಾರದ ಅಸಹಕಾರದಿಂದ ರದ್ದುಗೊಳಿಸುವುದಾಗಿ ರೈಲ್ವೆ ಸಚಿವರು ಹೇಳಿದ್ದಾರೆ ಎಂದರು.
ನಾನು ರಾಜ್ಯ ಸರ್ಕಾರದ ಸಂಪರ್ಕದಲ್ಲಿದ್ದೇನೆ. ಕೇಂದ್ರ ಸಚಿವರಿಗೆ ಮನವೊಲಿಸಿ ಈ ಯೋಜನೆ ಕಾರ್ಯಗತಗೊಳಿಸಲಾಗುವುದು. ಶಿಕಾರಿಪುರ -ರಾಣೆಬೆನ್ನೂರು ರೈಲು ಮಾರ್ಗಕ್ಕೆ 25 ಕೋ.ರೂ ಬಿಡುಗಡೆ ಆಗಿದೆ. ಇನ್ನೂ ಬಾಕಿ 75 ಕೋ ರೂ.ಗಳಿ ಬರಬೇಕಿದೆ. ಅದನ್ನು ತರುವಲ್ಲಿ ಪ್ರಯತ್ನ ಮಾಡುತ್ತಿದ್ದೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post