ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನ ಎರಡನೇ ಅಲೆಗೆ ಸ್ಥಗಿತಗೊಂಡಿದ್ದ ರೈಲುಗಳು ನಿಧಾನವಾಗಿ ಆರಂಭಗೊಳ್ಳುತ್ತಿವೆ. ರಾತ್ರಿ 11 ಗಂಟೆಗೆ ಶಿವಮೊಗ್ಗ ಮತ್ತು ಬೆಂಗಳೂರಿನ ನಡುವೆ ಇದ್ದ ಒಂದು ರೈಲುಗಳನ್ನ ಹೊರತುಪಡಿಸಿ ಎಲ್ಲಾ ರೈಲುಗಳು ಸ್ಥಗಿತಗೊಂಡಿದ್ದವು. ಸ್ಥಗಿತಗೊಂಡಿದ್ದ ಶಿವಮೊಗ್ಗ ಮತ್ತು ಬೆಂಗಳೂರಿನ ನಡುವಿನ ರೈಲುಗಳು ಜೂ.18 ರಿಂದ ಆರಂಭಗೊಳ್ಳುತ್ತಿವೆ.
ಜೂ.18 ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರು ರೈಲ್ವೆ ನಿಲ್ದಾಣವನ್ನು ಬಿಡಲಿರುವ ಎಕ್ಸ್‌ಪ್ರೆಸ್ ರೈಲು ಸಂಜೆ 7:40ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣ ತಲುಪಲಿದ್ದು, ರಾತ್ರಿ 9:30 ಕ್ಕೆ ತಾಳಗುಪ್ಪ ತಲುಪಲಿದೆ. ಮರುದಿನ ಬೆಳಿಗ್ಗೆ 5 ಗಂಟೆಗೆ ತಾಳಗುಪ್ಪ ರೈಲ್ವೆ ನಿಲ್ದಾಣವನ್ನು ಬಿಡಲಿದ್ದು, ಬೆಳಿಗ್ಗೆ 7 ಗಂಟೆ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 12ಕ್ಕೆ ಬೆಂಗಳೂರು ತಲುಪಲಿದೆ.
ಅದರಂತೆ ಜನಶತಾಬ್ದಿ ರೈಲು ಸಹ ಜೂ.18ರಿಂದ ಆರಂಭವಾಗಲಿದೆ. ಅಂದು ಸಂಜೆ 5:15ಕ್ಕೆ ಸಂಗೊಳ್ಳಿ ರಾಯಣ್ಣ ಬೆಂಗಳೂರು ರೈಲ್ವೆ ನಿಲ್ದಾಣವನ್ನು ಬಿಡಲಿದ್ದು, ರಾತ್ರಿ 9:55ಕ್ಕೆ ಶಿವಮೊಗ್ಗ ತಲುಪಲಿದೆ. ಮರುದಿನ ಅಂದರೆ ಜೂ.19 ಬೆಳಿಗ್ಗೆ 5:15ಕ್ಕೆ ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಡಲಿರುವ ರೈಲು ಬೆಳಿಗ್ಗೆ 10ಕ್ಕೆ ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣ ತಲುಪಲಿದೆ. ರೈಲ್ವೆ ನಿಲ್ದಾಣಗಳಲ್ಲಿ ಇವುಗಳಿಗೆ ಟಿಕೇಟ್ ನೀಡಲಾಗುವುದಿಲ್ಲ. ಎಲ್ಲವೂ ಆನ್ ಲೈನ್ ಮೂಲಕ ಟಿಕೆಟ್ ಪಡೆದು ಪ್ರಯಾಣಿಸಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post