ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಾಗರದ ನೈಋತ್ಯ ರೈಲ್ವೆಯ ಹಿರಿಯ ಕಾರ್ಯಪಾಲಕ ಅಭಿಯಂತರರು ಶಿವಮೊಗ್ಗ – ಕುಂಸಿ ರೈಲ್ವೇ ನಿಲ್ದಾಣಗಳ ನಡುವೆ ಬರುವ ರೈಲ್ವೇ ಕ್ರಾಸಿಂಗ್ ಗೇಟ್ ನಂ.49ಕಿ.ಮೀ. ಮತ್ತು ಲೆವೆಲ್ ಕ್ರಾಸಿಂಗ್ ಗೇಟ್ ನಂ.50ಕಿ.ಮೀ., ಹಾಗೂ ಕುಂಸಿ-ಆನಂದಪುರ ಮಧ್ಯೆ ಬರುವ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ನಂ. 79ಕಿ.ಮೀ. ಗಳಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡುವುದಕ್ಕಾಗಿ ಗೇಟ್‌ಗಳನ್ನು ಮುಚ್ಚಲು ಉದ್ದೇಶಿಸಿದ್ದು, ಈ ಮಾರ್ಗಗಗಳಲ್ಲಿ ಸಂಚರಿಸುವವರು ನಿಗಧಿಪಡಿಸಿದ ದಿನಾಂಕಗಳಂದು ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಎಲ್.ಸಿ. ಗೇಟ್ ನಂ.49ರಲ್ಲಿ ಡಿಸೆಂಬರ್ 3ರ ರಾತ್ರಿ 10.30ರಿಂದ ಡಿಸೆಂಬರ್ 4ರ ರಾತ್ರಿ 7ಗಂಟೆಯವರೆಗೆ ಪರಿಶೀಲನೆ ನಡೆಯಲಿದ್ದು, ಈ ಭಾಗದಲ್ಲಿ ಸಂಚರಿಸುವ ವಾಹನಗಳ ಸವಾರರು ಎಲ್.ಸಿ. ಗೇಟ್ 50ರ ಬೊಮ್ಮನಕಟ್ಟೆ ಮತ್ತು ಎಲ್.ಸಿ. ಗೇಟ್ 52ರ ಕಾಶೀಪುರದ ಮೂಲಕ ಉಷಾ ನರ್ಸಿಂಗ್ ಹೋಂ-ಜೈಲ್ ಸರ್ಕಲ್, ವಿನೋಬನಗರ ಪೊಲೀಸ್ ಚೌಕಿ ಮುಖಾಂತರ ಹಾಗೂ ನವುಲೆ-ರಾಗಿಗುಡ್ಡ-ಹೊನ್ನಾಳಿ ರಸ್ತೆ-ಫ್ಲೈಓವರ್ ಮುಖಾಂತರ ಸಂಚರಿಸುವಂತೆ ಅವರು ಸೂಚಿಸಿದ್ದಾರೆ.
ಎಲ್.ಸಿ. ಗೇಟ್ 50ರಲ್ಲಿ ಡಿಸೆಂಬರ್ 6ರಂದು ರಾತ್ರಿ 10.30ರಿಂದ ಡಿಸೆಂಬರ್ 7ರ ರಾತ್ರಿ 7ಗಂಟೆಯವರೆಗೆ ಪರಿಶೀಲನೆ ನಡೆಯಲಿದ್ದು, ಈ ಭಾಗದಲ್ಲಿ ಸಂಚರಿಸುವ ವಾಹನಗಳ ಸವಾರರು ಎಲ್.ಸಿ.ಗೇಟ್ 52ರ ಕಾಶೀಪುರ ಮತ್ತು ಎಲ್.ಸಿ.ಗೇಟ್ ನಂ.49ರ ಸವಳಂಗ ಮಾರ್ಗದ ಮೂಲಕ ಉಷಾ ನರ್ಸಿಂಗ್ ಹೋಂ-ಜೈಲ್ ಸರ್ಕಲ್, ವಿನೋಬನಗರ-ಪೊಲೀಸ್ ಚೌಕಿ ಮುಖಾಂತರ ಹಾಗೂ ಎಲ್.ಸಿ.ಗೇಟ್ 79ರಲ್ಲಿ ಡಿಸೆಂಬರ್ 9ರಂದು ರಾತ್ರಿ 10.30ರಿಂದ ಡಿಸೆಂಬರ್ 10ರ ರಾತ್ರಿ 7ಗಂಟೆಯವರೆಗೆ ಪರಿಶೀಲನೆ ನಡೆಯಲಿದ್ದು, ಈ ಭಾಗದಲ್ಲಿ ಸಂಚರಿಸುವ ವಾಹನಗಳ ಸವಾರರು ಚೋರಡಿ-ಶೆಟ್ಟಿಕೊಪ್ಪ-ಸೂಡೂರು 5ನೇ ಮೈಲಿಕಲ್ಲು-ಆಯನೂರು ಮತ್ತು ಎಲ್.ಸಿ.ಗೇಟ್ 7ರ ಮಾರ್ಗವಾದ ಬಾಲೆಕೊಪ್ಪ-ಚಿಕ್ಕಮರಸ ಮುಖಾಂತರ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post