ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರೋಗ್ಯ ಹಾಗೂ ಶಿಕ್ಷಣ ಒಂದು ನಾಣ್ಯೆ ಎರಡು ಮುಖಗಳಾಗಿದ್ದು, ಪ್ರತಿ ಮಕ್ಕಳು #Children ತಮ್ಮ ಆರೋಗ್ಯವನ್ನು ಪ್ರೀತಿಸುವಂತೆ ಅವರನ್ನು ಬೆಳೆಸಬೇಕು ಎಂದು ಸುಬ್ಬಯ್ಯ ವೈದ್ಯಕೀಯ ಕಾಲೇಜಿನ ಮಕ್ಕಳ ವಿಭಾಗದ ಹಿರಿಯ ತಜ್ಞ ಡಾ.ಮಂಜುನಾಥ್ ಸಲಹೆ ನೀಡಿದರು.
ದುರ್ಗಿಗುಡಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗಾಗಿ ಸುಬ್ಬಯ್ಯ ವೈದ್ಯಕೀಯ ಕಾಲೇಜು ವತಿಯಿಂದ ಆಯೋಜಿಸಲಾಗಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರದಲ್ಲಿ #HealthCamp ಅವರು ಮಾತನಾಡಿದರು.
ಆರೋಗ್ಯ ಮತ್ತು ಶಿಕ್ಷಣ #Education ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ ಮಕ್ಕಳು ಆರೋಗ್ಯವನ್ನು ಪ್ರೀತಿಸಬೇಕು. ಅದೇ ರೀತಿ ಮಕ್ಕಳನ್ನು ಪ್ರತಿ ಪೋಷಕರೂ ಬೆಳೆಸಬೇಕು. ಪರಿಸರ ಸ್ವಚ್ಛವಾಗಿಡಬೇಕು ಹಾಗೂ ಸುದ್ಧವಾದ ನೀರು, ಆಹಾರ, ಗಾಳಿಯನ್ನು ಸೇವಿಸುತ್ತಾ ಬಂದರೆ ಸಧೃಡ ಆರೋಗ್ಯವಂತರಾಗಿರಲು ಸಾಧ್ಯ ಎಂದು ಹೇಳಿದರು.
ಪ್ರಮುಖವಾಗಿ ರೋಗ ಬಂದ ನಂತರ ಪರಿಹಾರ ಮಾಡುವುದು ದೊಡ್ಡದಲ್ಲ. ಬದಲಾಗಿ ರೋಗ ಬಾರದಂತೆ ತಡೆಯುವುದು, ರೋಗಗಳಿಗೆ ದೇಹ ಒಡ್ಡುಕೊಳ್ಳದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತಾಗಿ ಕಟ್ಟಕಡೆಯ ವ್ಯಕ್ತಿಗೂ ತಿಳುವಳಿಕೆ ನೀಡುವುದು ಜವಾಬ್ದಾರಿಯುವ ವೈದ್ಯರ ಕರ್ತವ್ಯವಾಗಿದೆ ಎಂದರು.
ಸರ್ಕಾರಿ ಶಾಲಾ #GovernmentSchool ಮಕ್ಕಳ ಆರೋಗ್ಯ ಕಾಪಾಡುವುದು ನಮ್ಮ ಸಂಸ್ಥೆಯ ಧ್ಯೇಯೋದ್ಧೇಶ ಹಾಗೂ ಸಾಮಾಜಿಕ ಬಾಧ್ಯತೆಯ ಭಾಗವಾಗಿದೆ. ಹೀಗಾಗಿ, ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳ ಆರೋಗ್ಯ ಕಾಪಾಡುವ ಉದ್ದೇಶದಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಇಂತಹ ಶಿಬಿರಗಳನ್ನು ನಡೆಸುವ ಧ್ಯೇಯವನ್ನು ಹೊಂದಿದ್ದೇವೆ ಎಂದರು.
ಶಿಬಿರದಲ್ಲಿ ಸುಮಾರು 980ಕ್ಕೂ ಅಧಿಕ ಮಕ್ಕಳಿಗೆ ತಪಾಸಣೆ ನಡೆಸಲಾಯಿತು. ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ಮಕ್ಕಳ ರಕ್ತದ ಗುಂಪು ಪರೀಕ್ಷೆ ಮಾಡಿ, ತಿಳಿಸಲಾಯಿತು.
ಹೆಚ್ಚಿನ ತಪಾಸಣೆ ಹಾಗೂ ಚಿಕಿತ್ಸೆ ಅವಶ್ಯಕತೆಯಿರುವ ಮಕ್ಕಳಿಗೆ ಆಸ್ಪತ್ರೆಗೆ ಶಿಫಾರಸ್ಸು ಮಾಡಲಾಯಿತು. ಈ ರೀತಿ ಶಿಫಾರಸ್ಸು ಮಾಡಲಾಗಿರುವ ಮಕ್ಕಳಿಗೆ ಸುಬ್ಬಯ್ಯ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಉಚಿತ ಸಲಹೆ, ರಿಯಾಯ್ತಿ ದರದಲ್ಲಿ ತಪಾಸಣೆ ಹಾಗೂ ಚಿಕಿತ್ಸೆ ನಡೆಸಲಾಗುತ್ತದೆ.
ಮಕ್ಕಳ ಚಿಕಿತ್ಸಾ ವಿಭಾಗದ ಡಾ.ಮೋನಿಷಾ, ಡಾ.ಲತಾ, ಡಾ.ಶ್ರೀಜಾ, ಡಾ.ಪ್ರಜ್ವಲ್, ನೇತ್ರ ತಜ್ಞರಾದ ಡಾ.ಮೇರಿ, ಇಎನ್’ಟಿ ತಜ್ಞರಾದ ಡಾ.ಆದಿತ್ಯ ಬಿರಾದಾರ್, ಮನೋ ವೈದ್ಯಕೀಯ ವಿಭಾಗದ ಡಾ.ಎಂ.ಆರ್. ರಾಗಶ್ರೀ, ದುರ್ಗಿಗುಡಿ ಶಾಲೆಯ ಮುಖ್ಯಶಿಕ್ಷಕಿ ಭಾರತಿ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post