ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಬೆಂಗಳೂರು, ಮೈಸೂರು ಸೇರಿದಂತೆ ಮೆಟ್ರೋ ನಗರಗಳಲ್ಲಿ ಜಾರಿಯಲ್ಲಿರುವ ರ್ಯಾಪಿಡೋ ಬೈಕ್ ವ್ಯವಸ್ಥೆ ಶಿವಮೊಗ್ಗಕ್ಕೂ ಸಹ ಕಾಲಿಟ್ಟಿದ್ದು, ಇದಕ್ಕೆ ಆಟೋ ಚಾಲಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ದುರ್ಗಿಗುಡಿಯಲ್ಲಿ ಇಂದು ವ್ಯಕ್ತಿಯೊಬ್ಬರು ಆಪ್ ಮೂಲಕ ರ್ಯಾಪಿಡೋ ಬೈಕ್ #Rapido Bike ಬುಕ್ ಮಾಡಿದ್ದರು. ಇದರಂತೆ ಬಂದ ರ್ಯಾಪಿಡೋ ಬೈಕ್ ಚಾಲಕನನ್ನು ಆಟೋ ಚಾಲಕರು ತಡೆದಿದ್ದು, ಕೆಲವು ಕಾಲ ವಾಗ್ವಾದ ನಡೆಯಿತು.
ಶಿವಮೊಗ್ಗದಲ್ಲಿ ರ್ಯಾಪಿಡೋ ಬೈಕ್ ಆರಂಭವಾಗಿರುವ ಕುರಿತಾಗಿ ಆಕ್ರೋಶ ವ್ಯಕ್ತಪಡಿಸಿದ ಆಟೋ ಚಾಲಕರು, ಶಿವಮೊಗ್ಗ ನಗರದಲ್ಲಿನ ವ್ಯಾಪ್ತಿ ಕೇವಲ 10 ಕಿಲೋ ಮೀಟರ್ ಇದೆ ಅಷ್ಟೆ. ಆದರೂ ಆರ್’ಟಿಒ ಕಡೆಯಿಂದ ನಮಗೆ ಮಿತಿ ಹೇರಲಾಗಿದೆ. ಪ್ರತಿನಿತ್ಯ 500-600 ರೂಪಾಯಿ ಬಾಡಿಗೆ ಮಾಡುವುದು ನಮಗೆ ಕಷ್ಟವಾಗಿದೆ ಎಂದು ಅಳಲು ತೋಡಿಕೊಂಡರು.
Also read: ಪರಿಸರ ಉಳಿದರೆ ಮಾತ್ರ ಮನುಕುಲದ ಉಳಿವು ಸಾಧ್ಯ: ಬಸವರಾಜ್
ಶಿವಮೊಗ್ಗದಲ್ಲಿ ಈಗಾಗಲೇ ವೈಟ್ ಬೋರ್ಡ್ ಬೈಕ್’ಗಳಲ್ಲಿ ಬಾಡಿಗೆ ಮಾಡುತ್ತಿದ್ದಾರೆ. ಇವರಿಗೆಲ್ಲಾ ಅನುಮತಿ ಕೊಟ್ಟವರಾರು ಎಂದು ತಿಳಿದಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲೂ ಸಹ ಇದೇ ರೀತಿಯ ಸಮಸ್ಯೆಯಾಗಿದೆ. ಬಾಡಿಗೆ ಇಲ್ಲದೇ ಆಟೋ ಚಾಲಕರು ಆರ್’ಟಿಒ ಕಚೇರಿ ಮುಂದೆ ವಾಹನ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲೂ ಸಹ ಇದೇ ಪರಿಸ್ಥಿತಿ ಬಂದರೂ ಆಶ್ಚರ್ಯ ಪಡಬೇಕಿಲ್ಲ ಎಂದರು.
ಸಾಲ ಸೋಲ ಮಾಡಿ ಆಟೋ ಕೊಂಡುಕೊAಡು ಬಾಡಿಗೆ ಇಲ್ಲದೇ ಒದ್ದಾಡುತ್ತಿದ್ದೇವೆ. ಸಾಲ ತೀರಿಸಲು ಆಗದೇ ಸಮಸ್ಯೆ ಎದುರಿಸುತ್ತಿದ್ದೇವೆ. ಇಂತಹ ಸಂದರ್ಭದಲ್ಲಿ ಇದು ನಮಗೆ ಹೊಸ ಸಮಸ್ಯೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಇದನ್ನು ತಡೆಯದೇ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post