ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿಮ್ಮ ಮನೆ ಹೊರಭಾಗದಲ್ಲಿ ಚಪ್ಪಲಿಗಳನ್ನು ಬಿಡುತ್ತೀರಾ? ಹಾಗಾದರೆ ಈ ಸುದ್ದಿಯನ್ನೊಮ್ಮೆ ಪೂರ್ಣ ಓದಿ…
ಹೌದು… ನಗರದ ಪ್ರತಿಷ್ಠಿತ ಗೋಪಾಲಗೌಡ ಬಡಾವಣೆಯಲ್ಲಿ ಮನೆ ಮುಂಭಾಗದಲ್ಲಿ ಬಿಟ್ಟ ಚಪ್ಪಲಿಗಳು ರಾತ್ರಿ ವೇಳೆ ಕಳ್ಳತನವಾಗುತ್ತಿದ್ದು, ಇದರ ದೃಶ್ಯಗಳು ಸಿಸಿಟಿವಿಯಲ್ಲಿ ಸೆರಯಾಗಿವೆ.
ಬಡಾವಣೆಯ ನಿವಾಸಿ ಜಿತೇಂದ್ರ ಗೌಡ ಎನ್ನುವವರ ಕಾಂಪೌಂಡ್ ಒಳಗೆ ಮನೆ ಮುಂಭಾಗದಲ್ಲಿ ಹಾಗೂ ಬಾಡಿಗೆದಾರರ ಮನೆಯ ಮುಂಭಾಗ ಬಿಡಲಾಗಿದ್ದ ಎಲ್ಲ ಚಪ್ಪಲಿಗಳು ಕಳ್ಳತನವಾಗಿದೆ.
Also read: ಕಾಸರಗೋಡು ಕನ್ನಡತನವೇ ಮೇಳೈಸಿರುವ ಸಪ್ತ ಭಾಷಾ ಸಂಗಮದ ಕನ್ನಡದ ಬೀಡು: ಕೆ.ವಿ. ಪ್ರಭಾಕರ್
ಮುಸುಕು ಧರಿಸಿದ ವ್ಯಕ್ತಿಯೊಬ್ಬ ಕಾಂಪೌಂಡ್ ಒಳಗೆ ಬಂದು ಎಲ್ಲ ಚಪ್ಪಲಿಗಳನ್ನು ಕಳ್ಳತನ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರಯಾಗಿದೆ.
ಈ ರೀತಿ ರಾತ್ರಿ ವೇಳೆ ಚಪ್ಪಲಿ ಕಳ್ಳತನವಾಗುತ್ತಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸ್ ಇಲಾಖೆ ಕಳ್ಳನನ್ನು ಪತ್ತೆ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post