ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಜ್ಯದ 262 ಸರ್ಕಾರಿ ಶಾಲೆಗಳಲ್ಲಿ ಎಲ್’ಕೆಜಿ ಹಾಗೂ ಯುಕೆಜಿ LKG-UKG ತರಗತಿಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಸಿದ್ದತೆ ನಡೆಸಿದ್ದು, ಈಗಾಗಲೇ ಪರ ವಿರೋಧಗಳು ವ್ಯಕ್ತವಾಗಿವೆ.
ಸಮಗ್ರ ಶಿಕ್ಷಣ ಕರ್ನಾಟಕ ನಿರ್ದೇಶನಾಲಯ ಸೂಚನೆ ಹಿನ್ನೆಲೆ ಜಿಲ್ಲೆಯಲ್ಲೂ ಒಟ್ಟು 50 ಶಾಲೆಗಳಲ್ಲಿ ಎಲ್’ಕೆಜಿ, ಯುಕೆಜಿ ಆರಂಭಕ್ಕೆ ಪೂರ್ವಸಿದ್ದತೆ ಮಾಡಿಕೊಳ್ಳಲಾಗಿದೆ.
ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಎಲ್’ಕೆಜಿ, ಯುಕೆಜಿ ಆರಂಭಿಸುವಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಸೆಪ್ಟೆಂಬರ್ ತಿಂಗಳಿಂದಲೇ ತರಗತಿ ಆರಂಭಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಶಾಲೆಯಲ್ಲಿ ಎಲ್’ಕೆಜಿ ವಿಭಾಗದಲ್ಲಿ 4 ರಿಂದ 5 ವರ್ಷದೊಳಗಿನ ಮಕ್ಕಳನ್ನು ಮಾತ್ರ ದಾಖಲಿಸುವಂತೆ ಸರ್ಕಾರ ಸೂಚಿಸಿದೆ.
Also read: ಕೋವಿಡ್ ಲಸಿಕೆಯಿಂದ ಹೆಚ್ಚಾಯ್ತಾ ಹೃದಯಾಘಾತ: ವರದಿ ಹೇಳಿದ ಸತ್ಯವೇನು?
ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನದವರೆಗೆ ಮಾತ್ರ ನಡೆಸಲಾಗುತ್ತದೆ.
ಶಿವಮೊಗ್ಗದಲ್ಲಿ ಎಷ್ಟು ಶಾಲೆಗಳು?
ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 50 ಸರ್ಕಾರಿ ಶಾಲೆಗಳಲ್ಲಿ ಎಲ್’ಕೆಜಿ ಹಾಗೂ ಯುಕೆಜಿ ತರಗತಿಗಳನ್ನು ಆರಂಭಿಸಲು ಸಿದ್ದತೆ ನಡೆದಿದೆ.
ಶಿಕಾರಿಪುರದಲ್ಲಿ 2 ಶಾಲೆಗಳು, ತೀರ್ಥಹಳ್ಳಿಯಲ್ಲಿ 6, ಶಿವಮೊಗ್ಗದಲ್ಲಿ 13, ಸಾಗರದಲ್ಲಿ 10, ಹೊಸನಗರದಲ್ಲಿ 4 ಹಾಗೂ ಭದ್ರಾವತಿಯಲ್ಲಿ 15 ಶಾಲೆಗಳಲ್ಲಿ ಆರಂಭಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















