ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದಲ್ಲಿ ಬಿಸಿಲಿನ ತಾಪಮಾನ ದಿನೇ-ದಿನೇ ಹೆಚ್ಚುತ್ತಿರುವ ಕಾರಣ ಜನಸಾಮಾನ್ಯರು ಪರದಾಡುವಂತಾಗಿದೆ. ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹೆಲ್ಮೆಟ್ ಧರಿಸುವುದರಿಂದ ಅಲರ್ಜಿ ಸೇರಿದಂತೆ ನಾನಾ ಸಮಸ್ಯೆಗಳು ಹೆಚ್ಚಾಗುತ್ತಿವೆ ಆದ್ದರಿಂದ ಹೆಲ್ಮೆಟ್ ಧಾರಣೆಗೆ ವಿನಾಯ್ತಿ ನೀಡಬೇಕು ಎಂದು ರಾಜ್ಯ ನಾಗರೀಕ ರಕ್ಷಣಾ ಸಮಿತಿ ವತಿಯಿಂದ ಇಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಮಾಡಲಾಯಿತು.
ದೂರ ಪ್ರಯಾಣ ಮಾಡುವ ಸ್ಥಳಗಳಲ್ಲಿ ಹೆಲ್ಮೆಟ್ ಪರಿಶೀಲನೆ ಮುಂದುವರಿಸಿ, ನಗರ ವ್ಯಾಪ್ತಿಗಳಲ್ಲಿ ಹೆಲ್ಮೆಟ್ ಧಾರಣೆಗೆ ವಿನಾಯ್ತಿ ನೀಡಬೇಕು. ಬದಲಾಗಿ ವೇಗ ಮಿತಿಯನ್ನು ಪರಿಶೀಲಿಸಲು ಸೂಚಿಸಬೇಕು ವಿನಂತಿಸಲಾಯಿತು.

ಈ ಸಂದರ್ಭದಲ್ಲಿ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ರಾಘವೇಂದ್ರ, ಗೌರವಾಧ್ಯಕ್ಷ ಲಕ್ಷ್ಮೀಕಾಂತ, ಉಪಾಧ್ಯಕ್ಷ ಕೆ. ಶೇಖರ್, ಸಹ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ಹಾಗೂ ಶಂಭುಲಿಂಗ, ಸಂಘಟನಾ ಕಾರ್ಯದರ್ಶಿ ಹರೀಶ್, ರಾಜ್ಯ ಸಂಚಾಲಕ ಮಲ್ಲೇಶಪ್ಪ ಹಾಗೂ ಪ್ರಮುಖರಾದ ಕುಬೇರ ಹಾಗೂ ಷಣ್ಮುಖ ಅವರು ಉಪಸ್ಥಿತರಿದ್ದರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















