ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾವುದೇ ಅಪೇಕ್ಷೆಯಿಲ್ಲದೆ ಶಿಕ್ಷಕರು ನಿಮಗೆ ವಿದ್ಯಾಭ್ಯಾಸ ನೀಡುತ್ತಿದ್ದಾರೆ. ಶಿಕ್ಷಕರ ಮಾರ್ಗದರ್ಶನವನ್ನು ಅಳವಡಿಸಿಕೊಂಡು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಬದುಕಿದಾಗ ಮಾತ್ರ ನೀವು ಕಲಿತ ಶಾಲೆ ಮತ್ತು ಶಿಕ್ಷಕರಿಗೆ ನಿಜವಾದ ಗೌರವ ನೀಡಿದಂತೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಜಿಲ್ಲಾ ಕಾರ್ಯವಾಹ ಚೇತನ್ ಕುಮಾರ್ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಕೋಟೆ ರಸ್ತೆಯಲ್ಲಿರುವ ವಾಸವಿ ಪಬ್ಲಿಕ್ ಶಾಲೆಯಲ್ಲಿ ಗುರು ಪೌರ್ಣಿಮೆಯನ್ನು #Guru Poornime ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ನಾವು ಮನುಷ್ಯರಾಗಿ ಅದರಲ್ಲೂ ಭಾರತೀಯರಾಗಿ ಜನಿಸಿರುವುದು ನಮ್ಮೆಲ್ಲರವ ಪುಣ್ಯ. ಏಕೆಂದರೆ ಹಿಂದೂ ಧರ್ಮದಲ್ಲಿ ವರ್ಷಪೂರ್ತಿ ಹಬ್ಬಗಳನ್ನು ಆಚರಿಸುವ ಅವಕಾಶವಿದೆ. ಮನುಷ್ಯ ಸೃಷ್ಟಿಯ ನಂತರ ಮಾನವ ಸಂಬಂಧಗಳನ್ನು ಸೃಷ್ಟಿಸಿಕೊಂಡನು ಅವುಗಳ ಪೈಕಿ ಗುರು ಶಿಷ್ಯ ಸಂಬಂಧ ಸಹ ಅತಿ ಶ್ರೇಷ್ಠ ಸಂಬಂಧಗಳಲ್ಲಿ ಒಂದು ಈ ಸಂಬಂಧಗಳಿಂದ ಭಗವಂತನು ಸಹ ಸಂತುಷ್ಟನಾಗಿದ್ದಾನೆ ಎಂದರು.
ಮಹರ್ಷಿ ವ್ಯಾಸರ ಜನ್ಮವನ್ನು ಈ ಗುರು ಪೌರ್ಣಿಮೆ ನೆನಪಿಸುತ್ತದೆ. ಶ್ರೀರಾಮ, ಕೃಷ್ಣರಿಂದ ಆರಂಭವಾಗಿ ರಾಮಕೃಷ್ಣ ಪರಮ ಹಂಸ, ಸ್ವಾಮಿ ವಿವೇಕಾನಂದ, ಶಿವಾಜಿ ಮಹಾರಾಜರು, ಹಕ್ಕಬುಕ್ಕರು ಇಂತಹ ಅನೇಕ ಮಹಾನ್ ವ್ಯಕ್ತಿಗಳ ಹಿಂದೆ ಗುರುಗಳು ಇದ್ದಾರೆ. ವಾಸವಿ ಶಾಲೆಯು ಗುರು ಪೌರ್ಣಿಮೆಯ ಮಹತ್ವವನ್ನು ವಿದ್ಯಾರ್ಥಿಗಳಲ್ಲಿ ಪರಿಚಯಿಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದ್ಯಾರ್ಭದಲ್ಲಿ ಶಾಲೆ ಹಿರಿಯ ಶಿಕ್ಷಕರಾದ ನಾಗರಾಜ್ ಹಾಗು ಸಂಸ್ಕೃತ ಶಿಕ್ಷಕರಾದ ರಾಜೇಂದ್ರರವರಿಗೆ ವಿದ್ಯಾರ್ಥಿಗಳು ಸನ್ಮಾನಿಸಿ ಆಶೀರ್ವಾದ ಪಡೆದರು. ಕಾರ್ಯಕ್ರಮದಲ್ಲಿ ಶಾಲೆಯ ಅಧ್ಯಕ್ಷ ಶಾಮ ಸುಂದರ್, ಕಾರ್ಯದರ್ಶಿ ಎಸ್.ಕೆ. ಶೇಷಾಚಲ, ಪ್ರಾಂಶುಪಾಲ ಬಿ.ಸಿ. ಮನು ಹಾಗು ಶಿಕ್ಷಕವೃಂದ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post