ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ವೃತ್ತಿನಿರತ ಮಹಿಳಾ ಬ್ಯೂಟಿಷಿಯನ್‌ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಸಹಾಯಧನ, ಆಹಾರದ ಕಿಟ್, ವ್ಯಾಕ್ಸಿನೇಷನ್, ಕಾರ್ಮಿಕರ ಕಾರ್ಡ್ ಸೌಲಭ್ಯ ದೊರಕಿಸಿಕೊಡುವಂತೆ ಶಿವಮೊಗ್ಗ ಬ್ಯೂಟಿಷಿಯನ್ಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಆರೋಗ್ಯಾಧಿಕಾರಿಗಳು ಹಾಗೂ ಕಾರ್ಮಿಕ ಅಧಿಕಾರಿಗಳಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಾಗವೇಣಿ (ವಾಣಿ), ಎ.ಎಸ್. ಅಪರ್ಣಾ, ಟಿ.ಆರ್. ಭಾಗ್ಯಾ,ಎಸ್.ಆರ್. ಸುಷ್ಮಾ, ಜಿ. ಗಂಗಾ, ಗೀತಾ, ಪದ್ಮಾ, ನಿಮಿತಾ ಮತ್ತಿತರರು ಇದ್ದರು.
ವೃತ್ತಿನಿರತ ಬ್ಯೂಟಿಷಿಯನ್ಸ್ ಗಮನಕ್ಕೆ:
ಕೋವಿಡ್ ಲಸಿಕೆಯನ್ನು ವೃತ್ತಿನಿರತ ಬ್ಯೂಟಿಷಿಯನ್ಸ್‌ಗೆ ಆದ್ಯತೆಯ ಮೇರೆಗೆ ನೀಡುವಂತೆ ಶಿವಮೊಗ್ಗ ಬ್ಯೂಟಿಷಿಯನ್ಸ್ ಅಸೋಸಿಯೇಷನ್ ವತಿಯಿಂದ ಜಿಲ್ಲಾ ಆರೋಗ್ಯಾಧಿಕಾರಿ ರಾಜೇಶ್ ಸುರಗೀಹಳ್ಳಿ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಕರಾತ್ಮಕವಾಗಿ ಸ್ಪಂದಿಸಿದ ಅವರು ಇದನ್ನು ಆದ್ಯತೆಯಾಗಿ ಪರಿಗಣಿಸುವ ಭರವಸೆ ನೀಡಿದರು. ಇದಕ್ಕಾಗಿ ಡಿಹೆಚ್‌ಒ ಅವರನ್ನು ಅಸೋಸಿಯೇಷನ್ ಅಭಿನಂದಿಸಿದೆ.
ವೃತ್ತಿನಿರತ ಮಹಿಳಾ ಬ್ಯೂಟಿಷಿಯನ್‌ಗಳು ಅಸೋಸಿಯೇಷನ್ ಸದಸ್ಯತ್ವ ಪಡೆದುಕೊಳ್ಳಲು ಹಾಗೂ ಲಸಿಕೆ ಸಂಬಂಧಿ ಮಾಹಿತಿಗೆ ನಾಗವೇಣಿ (ವಾಣಿ) (ಮೊ: 9035617337), ಅಪರ್ಣಾ (7899296852)ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post