ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಮುಖ್ಯ ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆ ಕಾಮಗಾರಿಗಳು ನಡೆಯುವ ವೇಳೆ ಸುಗಮ ಸಂಚಾರಕ್ಕೆ ಸಂಬಂಧಪಟ್ಟ ಇಲಾಖೆ ಬದಲಿ ವ್ಯವಸ್ಥೆ ಮಾಡಿಕೊಡಲಿ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.
ಅಂಬೇಡ್ಕರ್ ಸರ್ಕಲ್ (ಜೈಲ್ ರಸ್ತೆ) ಯಿಂದ ದುರ್ಗಿಗುಡಿ ಶನೇಶ್ವರ ದೇವಸ್ಥಾನದವರೆಗೆ ರಸ್ತೆಗೆ ಟಾರ್ ಕಾಮಗಾರಿಗೆ ಸಿದ್ಧತೆ ನಡೆಯುತ್ತಿದೆ. ಇದಕ್ಕೆ ರಸ್ತೆ ಕಾರ್ಮಿಕರು ಬೇಕಾಬಿಟ್ಟಿ ರಸ್ತೆ ತಡೆ ಮಾಡುತ್ತಾರೆ. ಶನೇಶ್ವರ ದೇವಸ್ಥಾನ ಬಳಿ ಮುಖ್ಯ ರಸ್ತೆಗೆ ತಡೆ ಬೇಲಿ ಹಾಕಿ ಕೆಲವು ಗಂಟೆಗಳ ನಂತರ ಇದ್ದಕ್ಕಿದ್ದಂತೆ ತೆರವು ಮಾಡಿದರು. ಅಲ್ಲಿಯವರೆಗೆ ವಾಹನ ಸವಾರರು ಅನಾವಶ್ಯಕ ತೊಂದರೆ ಅನುಭವಿಸುವಂತಾಯಿರು.
ಐಯ್ಯಂಗಾರ್ ಬೇಕರಿ ಬಳಿ ರಸ್ತೆಗೆ ಕಬ್ಬಿಣದ ಟ್ರಾಫಿಕ್ ನೋ ಎಂಟ್ರಿ, ನೋ ಪಾರ್ಕಿಂಗ್ ಬೋರ್ಡ್‌ಗಳನ್ನೇ ರಸ್ತೆಗೆ ಅಡ್ಡ ಇಟ್ಟಿರುವುದು ಅಪಾಯಕಾರಿ ಮಾತ್ರವಲ್ಲ ಇಲಾಖೆಯನ್ನು ಅಪಹಾಸ್ಯ ಮಾಡುವಂತಿದೆ. ಅಭಿವೃದ್ಧಿ ಕಾಮಗಾರಿಗಳು ನಡೆಯುವಾಗ ಸಾರ್ವಜನಿಕರು ಸಹಕರಿಸಬೇಕು. ಒಂದಿಷ್ಟು ತೊಂದರೆಯನ್ನು ಅನುಭವಿಸಬೇಕು ನಿಜ. ಆದರೆ ಅದಕ್ಕೆ ಪೂರಕವಾಗಿ ಬದಲಿ ಸಂಚಾರದ ಬಗ್ಗೆಯೂ ಸಂಬಂಧಪಟ್ಟ ಇಲಾಖೆ ಗಮನಹರಿಸಬೇಕು.
ಮುಖ್ಯ ರಸ್ತೆಗಳಲ್ಲಿ ಕಾಮಗಾರಿ ನಡೆಸುವ ಮೊದಲು ಸಂಬಂಧಪಟ್ಟವರು ಟ್ರಾಫಿಕ್ ಇಲಾಖೆ ಗಮನಕ್ಕೆ ತಂದು ಬದಲಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಗಮನಹರಿಸುವರೆ? ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ವರದಿ: ತ್ಯಾಗರಾಜ ಮಿತ್ಯಾಂತ, ಶಿವಮೊಗ್ಗ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post