ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೋಬೋಟಿಕ್ ಮೊಣಕಾಲು ಬದಲಿ ಶಸ್ತ್ರ ಚಿಕಿತ್ಸಾ ವಿಧಾನವು ಇತ್ತೀಚಿನ ದಿನಗಳಲ್ಲಿ ಮೂಳೆ ಚಿಕಿತ್ಸೆಯ ಕಾರ್ಯವಿಧಾನದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದ್ದು, ಈ ಚಿಕಿತ್ಸೆಗೆ ಒಳಗಾಗುವ ರೋಗಿಗಳು ಶಸ್ತ್ರಚಿಕಿತ್ಸೆಯ ನಂತರ ನೋವನ್ನು ಕಡಿಮೆ ಅನುಭವಿಸುತ್ತಾರೆ ಎಂದು ಬೆಂಗಳೂರಿನ ಬನ್ನೇರುಘಟ್ಟರಸ್ತೆಯ ಅಫೋಲೋ ಆಸ್ಪತ್ರೆಯ #Apolo Hospital ರೋಬೋಟಿಕ್ ಜಾಯಿಂಟ್ ರಿಪ್ಲೇಸ್‍ಮೆಂಟ್‍ನಲ್ಲಿ #Robotic Joint Replacement ಪರಿಣತಿ ಹೊಂದಿರುವ ಮೂಳೆ ಶಸ್ತ್ರ ಚಿಕಿತ್ಸಕ ಡಾ.ಕೆ.ಟಿ. ರಾಜಶೇಖರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ರೋಬೋಟಿಕ್ಸ್ ಕ್ಷೇತ್ರದಲ್ಲಿನ ಪ್ರಗತಿಯು ಮೊಣಕಾಲು ಬದಲಾವಣೆಯಲ್ಲಿ ಗಣನೀಯ ಸಹಾಯ ಮಾಡಿದೆ. ಈ ಶಸ್ತ್ರ ಚಿಕಿತ್ಸೆಯು ಅದರ ನಿಖರತೆ ಹಾಗೂ ದಕ್ಷಣೆಯಿಂದಾಗಿ ಶಸ್ತ್ರ ಚಿಕಿತ್ಸೆಯ ನಂತರದ ಆರೈಕೆಯ ಅವಶ್ಯಕತೆಗಳನ್ನು ಕಡಿಮೆ ಮಾಡಿದ್ದೇವೆ ಎಂದರು.
Also read: ಬೇಲೂರು-ಚಿಕ್ಕಮಗಳೂರು ಚತುಷ್ಪಥ ಹೆದ್ದಾರಿ, ಚಳ್ಳಕೆರೆ ವ್ಯಾಪ್ತಿಯ ಹೈವೇ ಅಭಿವೃದ್ಧಿಗೆ ಕೇಂದ್ರಕ್ಕೆ ಮನವಿ

ಒಂದೇ ಸಾರಿ ಎರಡು ಮೊಣಕಾಲಿನ ಶಸ್ತ್ರ ಚಿಕಿತ್ಸೆ ದೀರ್ಘಕಾಲದ ಬೆಡ್‍ರೆಸ್ಟ್ ಮತ್ತು ಸೊಂಕಿನ ಅಪಾಯವನ್ನು ಮಾಡಬಹುದು. ರೋಗಿಗಳ ತಮ್ಮ ವೈಯುಕ್ತಿಕ ಆರೋಗ್ಯ ಸ್ಥಿತಿ ಮತ್ತು ಆಧ್ಯತೆಗಳ ಆಧಾರದ ಮೇಲೆ ಉತ್ತಮ ಕ್ರಮ ನಿರ್ಧರಿಸಲು ಅರ್ಹ ಮೂಳೆ ಶಸ್ತ್ರಚಿಕಿತ್ಸಕರೊಂದಿಗೆ ತಮ್ಮ ಆಯ್ಕೆಗಳನ್ನು ಚರ್ಚಿಸಬಹುದು. ನಮ್ಮ ಆಸ್ಪತ್ರೆಯಲ್ಲಿ ಈ ಚಿಕಿತ್ಸೆ ಲಭ್ಯವಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೌರಿಶಂಕರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post