ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿಮಾನ ನಿಲ್ದಾಣದಲ್ಲಿ ನ್ಯಾವಿಗೇಷನ್ ಉಪಕರಣ ಡಿವಿಆರ್ ಉಪಕರಣ ಅಳವಡಿಕೆಗಾಗಿ ರಾಜ್ಯ ಸರ್ಕಾರ 6.5 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ.
ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಪ್ರಕಟಿಸಿದ್ದು, ನ್ಯಾವಿಗೇಶನ್ ಉಪಕರಣ ಡಿವಿಆರ್ ಅಳವಡಿಕೆಗಾಗಿ ರಾಜ್ಯ ಸರ್ಕಾರ 6.5 ಕೋಟಿ ರೂ. ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಇಲ್ಲದೇ ಬಹಳಷ್ಟು ಸಮಸ್ಯೆ ಉಂಟಾಗಿತ್ತು. ನೈಟ್ ಲ್ಯಾಂಡಿಂಗ್’ಗಾಗಿ ಅವಶ್ಯವಿರುವ ಡಿವಿಆರ್ ಅವಳವಡಿಕೆ ವಿಳಂಬವಾದ ಪರಿಣಾಮ ಈ ಸಮಸ್ಯೆ ಉಂಟಾಗುತ್ತಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಅಸಹಕಾರ ತೋರಿದೆ. ವಿಮಾನ ನಿಲ್ದಾಣದ ಪಾಲುದಾರಿಕೆಯನ್ನು ರಾಜ್ಯ ಸರ್ಕಾರಕ್ಕೆ ವಹಿಸಿ ತಪ್ಪು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ನ್ಯಾವಿಗೇಷನ್ ಉಪಕರಣ ಡಿವಿಆರ್ ಅಳವಡಿಕೆಗಾಗಿ ಅನುದಾನ ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ಈ ವಿಚಾರ ಶಿವಮೊಗ್ಗದ ವಿಮಾನ ಪ್ರಯಾಣಿಕರಿಗೆ ಸಂತಸ ತಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post