ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಖ್ಯಾತ ಕೈಗಾರಿಕೋದ್ಯಮಿಗಳು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಸ್.ರುದ್ರೇಗೌಡರಿಗೆ ಇದೇ ಜ.27 ರಂದು ಅಮೃತಮಯಿ ಶೀರ್ಷಿಕೆಯಡಿ ಅಭಿನಂದನಾ ಕಾರ್ಯಕ್ರಮ ಹಾಗೂ ಅವರ ಬದುಕು-ಸಾಧನೆ ಕುರಿತ ದಿ ಐರನ್ ಮ್ಯಾನ್ ಪುಸ್ತಕ ಬಿಡುಗಡೆ ಸಮಾರಂಭವನ್ನು ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಶನ್ ಹಾಲ್ ಪಕ್ಕದ ಮೈದಾನದಲ್ಲಿ ಸಂಜೆ 5:30ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಗೌರವಾಧ್ಯಕ್ಷರು ಹಾಗೂ ಸಂಸದ ಬಿ.ವೈ. ರಾಘವೇಂದ್ರ MP Raghavendra ತಿಳಿಸಿದರು.
ಅವರು ನಗರದ ಮಥುರಾ ಪ್ಯಾರಡೈಸ್‌ನಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ರಾಜ್ಯ ಕಂಡಂತಹ ಅಪರೂಪದ ಮೌಲ್ಯಾಧಾರಿತ ರಾಜಕಾರಣಿ, ಶ್ರಮಿಕರ ಉದ್ಯೋಗದಾತರಾಗಿ, ಕೈಗಾರಿಕಾ ಕ್ಷೇತ್ರದ ರೂವಾರಿಗಳಾಗಿ, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಜೀವ ತುಂಬಿದವರು ಎಸ್. ರುದ್ರೇಗೌಡರು. S Rudregowda ಅವರಿಗೆ ಅಭಿನಂದನೆ ಹಮ್ಮಿಕೊಳ್ಳಲಾಗಿದೆ.

ಅಭಿನಂದನಾ ಸಮಿತಿಯ ಅಧ್ಯಕ್ಷರು ಹಾಗೂ ನಂಜಪ್ಪ ಗ್ರೂಫ್ ಆಫ್ ಹಾಸ್ಪಿಟಲ್‌ನ ಮ್ಯಾನೇಜಿಂಗ್ ಟ್ರಸ್ಟಿ ಡಿ.ಜಿ. ಬೆನಕಪ್ಪ ಮಾತನಾಡಿ, ಕಾರ್ಯಕ್ರಮದ ಪೂರ್ವಭಾವಿಯಾಗಿ ಸಾಕಷ್ಟು ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ವಿವಿಧ ವಿಚಾರ ಗೋಷ್ಠಿಗಳು ನಡೆಯಲಿವೆ, ಪಕ್ಕದ ಮೈದಾನದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ, ಈಗಾಗಲೇ ಅಭಿಮಾನಿಗಳು, ಹಿತೈಷಿಗಳು, ಬಂಧುಗಳು, ಎಲ್ಲ ಸಮಾಜದ ಗಣ್ಯರು, ಎಲ್ಲರಿಗೂ ಆಹ್ವಾನ ಪತ್ರಿಕೆಯನ್ನು ನೀಡಿ ಆಮಂತ್ರಿಸಲಾಗಿದೆ. ಒಂದು ವೇಳೆ ಆಹ್ವಾನ ಪತ್ರಿಕೆ ತಲುಪದವರು ಇದನ್ನೇ ವೈಯಕ್ತಿಕ ಆಹ್ವಾನವೆಂದು ತಿಳಿದು ನಮ್ಮ ಹೆಮ್ಮೆಯ ಈ ಸಂಭ್ರಮದಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು. ಆಗಮಿಸುವ ಸರ್ವರಿಗೂ ಮಧ್ಯಾಹ್ನ ಹಾಗೂ ರಾತ್ರಿ ಊಟ ಮತ್ತು ಉಪಾಹಾರದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಮೌಲ್ಯಾಧಾರಿತ ರಾಜಕಾರಣ ಕುರಿತು, ಬೆಂಗಳೂರು ಅದಮ್ಯ ಚೇತನ ಫೌಂಡೇಷನ್‌ನ ಶ್ರೀಮತಿ ತೇಜ್ವಸಿನಿ ಅನಂತಕುಮಾರ್ ಅವರು ಪರಿಸರ ಪ್ರಜ್ಞೆಯೇ ಸಮಾಜ ಸೇವೆ ಕುರಿತು ಹಾಗೂ ಕಿರ್ಲೋಸ್ಕರ್ ಫೆರುಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮ್ಯಾನೇಜ್‌ಮೆಂಟ್ ಆಂಡ್ ಟೆಕ್ನಿಕಲ್ ಅಡ್ವೈಜರ್ ಬಿ.ಎಸ್.ಗೋವಿಂದ್ ಅವರು ಸಾಧನೆಗೊಂದು ಗುರಿ ವಿಷಯ ಕುರಿತು ವಿಚಾರ ಗೋಷ್ಟಿ ನಡೆಸಿಕೊಡಲಿದ್ದಾರೆ. ವಿಚಾರಗೋಷ್ಟಿಯ ಅಧ್ಯಕ್ಷತೆಯನ್ನು ಬೆಂಗಳೂರು ರಮಣಶ್ರೀ ಫೌಂಡೇಷನ್‌ನ ಅಧ್ಯಕ್ಷರಾದ ನಾಡೋಜ ಎಸ್.ಷಡಕ್ಷರಿ ಅವರು ವಹಿಸಲಿದ್ದಾರೆ.

ಈ ವಿಚಾರಗೋಷ್ಟಿಗಳನ್ನು ಯುವ ಜನಾಂಗದ ಭವಿಷ್ಯಕ್ಕೆ ಮಾರ್ಗದರ್ಶಿಯಾಗಿರುವಂತೆ ರೂಪಿಸಲಾಗಿದೆ. ಯುವ ಸಮೂಹದಲ್ಲಿ ಹೊಸ ಬದಲಾವಣೆ ತರುವ, ಪರಿಸರಾಸಕ್ತರು, ಹೊಸದಾಗಿ ಯಾವುದೇ ಉದ್ಯಮವನ್ನು ಆರಂಭಿಸಬೇಕು ಎಂಬ ಚಿಂತನೆ ಹೊಂದಿದವರು, ಈಗಾಗಲೇ ಸಣ್ಣ ಉದ್ಯಮಗಳನ್ನು ನಡೆಸುತ್ತಿರುವವರು, ಪದವಿ ವಿದ್ಯಾಭ್ಯಾಸ ಮಾಡುತ್ತಿರುವವರು, ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಆಲೋಚನೆ ಇಟ್ಟುಕೊಂಡವರು, ಈಗಾಗಲೇ ವಿವಿಧ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳಾಗಿ ಹಾಗೂ ಎಚ್‌ಆರ್ ಆಗಿ ಕೆಲಸ ಮಾಡುತ್ತಿರುವವರು ಈ ವಿಚಾರ ಗೋಷ್ಠಿಗಳಿಗೆ ಭಾಗವಹಿಸಲು ಅರ್ಹರು. ಭಾಗವಹಿಸಬಹುದು, 850 ಜನರಿಗೆ ಈಗಾಗಲೇ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. 20 ಯುವಕರು ಎಸ್.ರುದ್ರೇಗೌಡರು ಬೆಳೆದು ಬಂದ ದಾರಿ ಬಗ್ಗೆ ಸಮಾಲೋಚನೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವವರು ಕಾರು ಹಾಗೂ ದ್ವಿಚಕ್ರ ವಾಹನ ಪಾರ್ಕಿಂಗ್ ಮಾಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ, ಅಲ್ಲದೇ ಪೋಲೀಸ್ ಇಲಾಖೆ ಸಿಬ್ಬಂದಿ ಭದ್ರತೆ ಸೇರಿದಂತೆ ಸುಗಮ ಸಂಚಾರ ವ್ಯವಸ್ಥೆಗೆ ಸಹಕರಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಮಿತಿಯ ಪ್ರಮುಖರಾದ ಎಸ್.ಎಸ್. ಜ್ಯೋತಿಪ್ರಕಾಶ್, ಸಮಾಜ ಹಿರಿಯ ಮುಖಂಡರಾ ಎನ್.ಜೆ. ರಾಜಶೇಖರ್, ತಮ್ಮಡಿಹಳ್ಳಿ ನಗಾರಾಜ್, ಬಳ್ಳೆಕೆರೆ ಸಂತೋಷ್, ಉದ್ಯಮಿ ಬಾಳೆಕಾಯಿ ಮೋಹನ್ ಮತ್ತಿತರರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post