ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹಿಂದೂ ಹರ್ಷನ Hindu Harsha ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಎನ್. ಚನ್ನಬಸಪ್ಪ SNChannabasappa ಹೇಳಿದ್ದಾರೆ.
ಅವರು ಇಂದು ನಗರದ ಕುಂಬಾರ ಕೇರಿಯ ದಿ. ಹರ್ಷ ಹಿಂದೂ ಮನೆಗೆ ಭೇಟಿ ನೀಡಿ ಬೆಂಬಲ ಯಾಚಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ವೈಚಾರಿಕ ನೆಲೆಗಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಹರ್ಷ ರಾಷ್ಟ್ರ ಕಟ್ಟುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅನೇಕ ಯುವಕರಿಗೆ ಹರ್ಷ ಸ್ಪೂರ್ತಿಯಾಗಿದ್ದ. ಸದಾ ಹಿಂದುತ್ವದ ಬಗ್ಗೆ ಕೆಲಸ ಮಾಡುತ್ತಿದ್ದ ಹರ್ಷ ನೂರಾರು ಯುವಕರಿಗೆ ಶಕ್ತಿ ತುಂಬಿದ್ದ. ಹಿಂದುತ್ವ ಎನ್ನುವುದು ಒಂದು ಜೀವನ ಪದ್ಧತಿ. ಹರ್ಷ ಅದನ್ನು ಪಾಲಿಸಿಕೊಂಡು ಬಂದಿದ್ದ. ಆತನ ಕುಟುಂಬ ಸದಾ ದೇಶಕ್ಕೆ ಒಳ್ಳೆಯದಾಗಲಿ ಎಂದೇ ಯೋಚಿಸುತ್ತಿದ್ದರು ಎಂದರು.
Also read: ರಂಜಾನ್ ಹಿನ್ನೆಲೆ ಮಂತ್ರಾಲಯ ರಾಯರ ಮಠಕ್ಕೆ ನೂರಾರು ಮುಸಲ್ಮಾನರ ಭೇಟಿ: ಶ್ರೀಗಳಿಂದ ಪರಿಮಳ ಪ್ರಸಾದ ವಿತರಣೆ
ರಾಷ್ಟ್ರ ಕಾರ್ಯ ಎನ್ನುವುದು ಈಶ್ವರೀ ಕಾರ್ಯವಾಗಿದ್ದು, ಹಿಂದುತ್ವ ಎನ್ನುವುದು ಕೂಡ ನಮ್ಮ ದೇಶದ ರಾಷ್ಟ್ರೀಯತೆ. ಹರ್ಷನ ಕುಟುಂಬ ನಾನು ಅಭ್ಯರ್ಥಿಯಾಗಿದ್ದಕ್ಕೆ ತುಂಬಾ ಸಂತೋಷ, ಬೆಂಬಲ ವ್ಯಕ್ತಪಡಿಸಿದೆ. ನಾವು ಕೂಡ ಸದಾ ಆ ಕಟುಂಬದೊಂದಿಗೆ ಇರುತ್ತೇವೆ ಎಂದರು.
ಹರ್ಷನ ಅಕ್ಕ ಅಶ್ವಿನಿ ಮಾತನಾಡಿ, ಬಿಜೆಪಿ ಚನ್ನಬಸಪ್ಪನವರಿಗೆ ಟಿಕೆಟ್ ನೀಡಿರುವುದು ನಮ್ಮ ಕುಟುಂಬಕ್ಕೆ ಹರ್ಷ ತಂದಿದೆ. ನಾವೆಲ್ಲರೂ ಬಿಜೆಪಿಗೆ ಜೀವ ಪಣಕ್ಕಿಟ್ಟು ಕೆಲಸ ಮಾಡುತ್ತೇವೆ. ನನ್ನ ತಮ್ಮನಿಗೆ ಬಂದ ಸಾವು ಯಾವ ಯುವಕನಿಗೂ ಬರಬಾರದು. ಎಲ್ಲಾ ಕಡೆ ಕೋಮು ಸಂಘರ್ಷಗಳು ನಡೆಯದೇ ಶಾಂತಿ ನೆಲೆಸಬೇಕೆಂಬುದೇ ನನ್ನ ಆಶಯ ಎಂದರು.
ಮನೆಗೆ ಆಗಮಿಸಿದ ಚನ್ನಬಸಪ್ಪನವರಿಗೆ ಹರ್ಷನ ಕುಟುಂಬ ಆರತಿ ಬೆಳಗಿ, ಶಾಲು ಹಾರ ಹಾಕಿ ಗೆದ್ದು ಬನ್ನಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿಯ ಯುವ ಮುಖಂಡರು ಮತ್ತು ಹರ್ಷನ ಕುಟುಂಬದ ಸದಸ್ಯರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post