ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ : ನಗರದ ಕಸ್ತೂರಬಾ ಬಾಲಿಕ ಪದವಿಪೂರ್ವ ಕಾಲೇಜಿನಲ್ಲಿ ಸದ್ಭಾವನಾ ದಿನಾಚರಣೆ ಆಚರಿಸಲಾಯಿತು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಪ್ರಾಂಶುಪಾಲ ಬಸವರಾಜ ಮಾತನಾಡಿ, ನಮ್ಮ ನಡುವೆ ಇರುವ ಕೋಮು, ಭಾಷಾ ದಳ್ಳುರಿಗಳು ಶಮನವಾಗಬೇಕಿದೆ. ಎಲ್ಲೆಡೆ ಸೌಹಾರ್ದತೆ ನೆಲೆಸುವಂತೆ ಪ್ರಯತ್ನಿಸಲು ನಾವೆಲ್ಲರು ಪ್ರತಿಜ್ಞೆ ಮಾಡೋಣ. ನಮ್ಮ ಮಕ್ಕಳ ಮನಸ್ಸಿನಲ್ಲಿ ಶಾಂತಿ ಸೌಹಾರ್ದತೆ ಸದಾ ನೆಲೆಸಿರುವಂತೆ ಮಾಡಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಹಿರಿಯ ಉಪನ್ಯಾಸಕರಾದ ಎಸ್.ಆರ್.ವೆಂಟೇಶ್ ಮಾತನಾಡಿದರು. ನಂತರ ಎಲ್ಲರಿಗೂ ಸದ್ಭಾವನಾ ಪ್ರತಿಜ್ಞೆ ಭೋದಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಉಪನ್ಯಾಸಕರಾದ ಬಾಲಕೃಷ್ಣರಾವ್, ಎಂ.ಟಿ. ಹಿರೇಮಠ್, ಬಿ.ವಿ. ಅಶೋಕ್, ಶ್ವೇತ, ಸಿಬ್ಬಂದಿಗಳಾದ ವಿಜಯ, ನಾಗರಾಜ ಉಪಸ್ಥಿತರಿದ್ದರು. ಡಿ.ನಿರಂಜನ್ ಸ್ವಾಗತಿಸಿ, ಫಜುಲ್ಲಾಖಾನ್ ವಂದಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post