ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕರ್ನಾಟಕ ಯೋಗಾಸನಾ ಸ್ಪೋರ್ಟ್್ಸ ಅಸೋಸಿಯೇಷನ್ ವತಿಯಿಂದ ಆಗಸ್ಟ್ ೧೧ರಂದು ಸಾಗರದ ವನಶ್ರೀ ವಸತಿ ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಯೋಗಪಟುಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಅಸೋಸಿಯೇಷನ್‌ನ ಮುಖಂಡ ಬಿ.ಆರ್. ಮಹೇಂದ್ರ ತಿಳಿಸಿದರು.
ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆಯ್ಕೆ ಪ್ರಕ್ರಿಯೆ ೫ ವಿಭಾಗಗಳಲ್ಲಿ ನಡೆಯಲಿದೆ. ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.
ಇದರಲ್ಲಿ ಆಯ್ಕೆಯಾದವರನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು, ರಾಜ್ಯ ಮಟ್ಟದಲ್ಲಿ ಆಯ್ಕೆಯಾದವರನ್ನು ಅಸ್ಸಾಂನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು. ಅದರಲ್ಲಿ ವಿಜೇತರಾದವರನ್ನು ಖೇಲೋ ಇಂಡಿಯಾ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು ಇದರಲ್ಲಿ ವಿಜೇತರಾದವರಿಗೆ ೧೦ ಲಕ್ಷ ರೂ.ಬಹುಮಾನವಿರುತ್ತದೆ ಎಂದು ಹೇಳಿದರು.
ಆಗಸ್ಟ್ 11ರಂದು ಬೆಳಿಗ್ಗೆ 8 ಗಂಟೆಯಿಂದ ಯೋಗಾಸನಾ ಕ್ರೀಡಾ ಸ್ಪರ್ಧೆ ಆರಂಭವಾಗಲಿದ್ದು, ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಮೂಲಗಳಿಂದ ಯೋಗಪಟುಗಳು ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ಸ್ಪರ್ಧೆಯನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಉದ್ಘಾಟಿಸಲಿದ್ದಾರೆ. ಶಾಸಕ ಬೇಳೂರು ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ವನಶ್ರೀ ವಿದ್ಯಾ ಸಂಸ್ಥೆಯ ಹೆಚ್.ಪಿ.ಮಂಜಪ್ಪ, ಅನ್ನಪೂರ್ಣ ಸತೀಶ್, ವಾಣಿಶ್ರೀ, ಉಪಸ್ಥಿತರಿದ್ದರು.
Also read: ಶಿವಮೊಗ್ಗ | ಬಿಜೆಪಿ-ಜೆಡಿಎಸ್ ಮೈಸೂರು ಪಾದಯಾತ್ರೆ ಅಹಿಂದ ಸಂಘಟನೆ ಪ್ರತಿಭಟನೆ
ಸಬ್ ಜ್ಯೂನಿಯರ್ ವಿಭಾಗ : 10ರಿಂದ 14 ವಯೋಮಾನದವರಿಗೆ
ಜ್ಯೂನಿಯರ್: 14ರಿಂದ 18, ಸೀನಿಯರ್ : 18ರಿಂದ ಮೇಲ್ಪಟ್ಟವರಿಗೆ ಮಾರ್ಷಲ್ 36ರಿಂದ 45, ವೆರ‍್ನಲ್ 45ರಿಂದ 55 ವಯೋಮಾನದವರಿಗೆ ನಡೆಯಲಿದ್ದು, ಎಲ್ಲಾ ಸ್ಪರ್ಧೆಗಳು ಪುರುರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆಯಲಿದೆ. ಎಲ್ಲಾ ವಿಭಾಗದಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳಿರುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post