ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾವುದೇ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳದೆ ಹಾವು ಹಿಡಿಯಲು ಹೋದ ಯುವಕ ನಾಗರಹಾವು ಕಚ್ಚಿರುವ ಘಟನೆ ಸಾಗರದಲ್ಲಿ ನಡೆದಿದೆ.
ರೊನಾಲ್ಡ್ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಾಗರದ ಶ್ರೀಧರ ನಗರದ ಮನೆಯೊಂದರಲ್ಲಿ ನಾಗರಹಾವು ಸೇರಿಕೊಂಡಿತ್ತು. ಇದರ ಮಾಹಿತಿ ಪಡೆದ ಈತ ತಾನು ಹಾವು ಹಿಡಿಯುವುದಾಗಿ ಹೋಗಿದ್ದನು. ಹಾವಿಗೆ ಕೈ ಹಾಕಿದಾಗ ಅದು ಕುಟುಕಿದೆ. ಕೂಡಲೇ ಈತ ಕುಟುಕಿದ ಜಾಗವನ್ನು ಬ್ಲೇಡಿನಿಂದ ಕೊಯ್ದುಕೊಂಡು ವಿಷ ಏರದಂತೆ ಮಾಡಿಕೊಂಡಿದ್ದನು. ಮನೆ ಮಾಲೀಕರು ಸಾಗರ ಆಸ್ಪತ್ರೆಗೆ ಸೇರಿಸಿ ಆನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕಳುಹಿಸಿದ್ದಾರೆ.
Also read: 1000 ಕೋಟಿ ಗಡಿದಾಟಿ ದಾಖಲೆ ಸೃಷಿಸಿದ ಕೆಜಿಎಫ್ 2
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post