ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ವಿಶೇಷಚೇತನ ಮಕ್ಕಳ ಮುಖದಲ್ಲಿ ನಗು ಮೂಡಿಸಲು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು SAIL-VISL ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಮತ್ತು ಭವಿಷ್ಯದಲ್ಲಿ ಹೆಚ್ಚು ಸಾಮಾಜಿಕವಾಗಿ ಪ್ರಯೋಜನಕಾರಿಯಾದ CSR ಚಟುವಟಿಕೆಗಳನ್ನು ಯೋಜಿಸಲಾಗುವುದು ಎಂದು ಅನುಪ್ ಕುಮಾರ್ ಹೇಳಿದರು.
SAIL-VISL CSR ಚಟುವಟಿಕೆಗಳ ಅಡಿಯಲ್ಲಿ ಭದ್ರಾವತಿಯ ಸರ್ಕಾರಿ ಶಾಲೆಗಳು ಮತ್ತು ತರಂಗ ಕಿವುಡ ಮತ್ತು ಮೂಕ ಶಾಲೆಯ ೨೩ ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿಶೇಷ ಸಹಾಯ ಸಾಧನಗಳನ್ನು ಮಕ್ಕಳ ದಿನಾಚರಣೆಯಂದು VISL ಭದ್ರಾ ಅತಿಥಿಗೃಹದಲ್ಲಿ ಹಸ್ತಾಂತರಿಸಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಅನುಪ್ ಕುಮಾರ್, ಕಾರ್ಯಪಾಲಕ ನಿರ್ದೇಶಕ, ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕ (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ), ಶೋಭಾ ಶಿವಶಂಕರನ್, ಮಹಾಪ್ರಬಂಧಕಿ (ಹಣಕಾಸು ಮತ್ತು ಲೆಕ್ಖ), ಡಾ. ಸುಜೀತ್ ಕುಮಾರ್, ಹೆಚ್ಚುವರಿ ಮುಖ್ಯ ವೈಧ್ಯಾಧಿಕಾರಿಗಳು, ಡಾ. ಎಸ್.ಎನ್. ಸುರೇಶ್, ಉಪಾಧ್ಯಕ್ಷರು VISL ಅಧಿಕಾರಿಗಳ ಸಂಘ, ಎಮ್.ಎಲ್. ಯೋಗೀಶ, ಕಿರಿಯ ಪ್ರಬಂಧಕ (HR & HR-L & D) ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಭದ್ರಾವತಿ, ತೀರ್ಥಪ್ಪ, ಕ್ಷೇತ್ರ ಸಂಪನ್ಮೂಲ ಸಂಯೋಜಕ ಮತ್ತು ದಯಾನಂದ ಶಿಕ್ಷಣ ಸಂಯೋಜಕ, ಭದ್ರಾವತಿ ಸೇರಿದಂತೆ ಗಣ್ಯರು ವಿಶೇಷಚೇತನ ಮಕ್ಕಳಿಗೆ ಶ್ರವಣ ಸಾಧನಗಳು, ವೀಲ್‌ಚೇರ್‌ಗಳು, MR ಕಿಟ್‌ಗಳು, VP ಚೇರ್‌ಗಳು, ರೋಲೇಟರ್‌ಗಳನ್ನು ಹಸ್ತಾಂತರಿಸಿದರು.

ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕ (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮವನ್ನು SAIL-VISLನ CSR ಅಪೆಕ್ಷ್ ಸಮಿತಿಯು ಸಂಯೋಜಿಸಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post