ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ರಂಗಾಯಣದ Shivamogga Rangayana ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನನ್ನ ಅವಧಿಯಲ್ಲಿ ಪಾರದರ್ಶಕವಾಗಿ, ಪ್ರಾಮಾಣಿಕವಾಗಿ ನನ್ನ ಜವಾಬ್ದಾರಿ ನಿರ್ವಹಿಸಿದ್ದು, ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ Sandesh Jawali ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಕರ್ನಾಟಕ ಸರ್ಕಾರ 27-12-2019ರಂದು ನನ್ನನ್ನು ಮುಂದಿನ ಆದೇಶದವರೆಗೆ ಅನ್ವಯವಾಗುವಂತೆ ಶಿವಮೊಗ್ಗ ರಂಗಾಯಣದ ನಿರ್ದೇಶಕನನ್ನಾಗಿ ನೇಮಕ ಮಾಡಿ, ಆದೇಶ ಹೊರಡಿಸಿತ್ತು. ಅದರಂತೆ ನಾನು ಮೂರು ವರ್ಷ ಮೂರು ತಿಂಗಳು ಕಾಲ ಈ ಹುದ್ದೆಯಲ್ಲಿ ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ತೀರ್ಥಹಳ್ಳಿಯಂತಹ ಗ್ರಾಮೀಣ ಭಾಗದಲ್ಲಿ ಕಳೆದ ಮೂರು ದಶಕಗಳಿಂದ ರಂಗಭೂಮಿ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡ ನನಗೆ ಸಂಘಟನೆಯ ಹಿರಿಯರು ಅನಿರೀಕ್ಷಿತವಾಗಿ ಈ ಜವಾಬ್ದಾರಿಯನ್ನು ನೀಡಿದರು.

ನನ್ನ ಅವಧಿಯಲ್ಲಿ ಶಿವಮೊಗ್ಗ ರಂಗಾಯಣದಲ್ಲಿ ವಾರಾಂತ್ಯ ನಾಟಕಗಳ ಪ್ರದರ್ಶನ ಬಹುಮುಖಿ ರಾಷ್ಟ್ರೀಯ ಉತ್ಸವಗಳ ಆಯೋಜನೆ, ಚಿಣ್ಣರೊಂದಿಗೆ ಶಿವಮೊಗ್ಗ ರಂಗಾಯಣ,- ಬೇಸಿಗೆ ಶಿಬಿರಗಳು, ಯುವ ಹವ್ಯಾಸಿ ಕಲಾವಿದರಿಗಾಗಿ 3 ತಿಂಗಳ ರಂಗ ಶಿಕ್ಷಣ ಸರ್ಟಿಫಿಕೇಟ್ ಕೋರ್ಸ್, ಯುವಜನತೆಯನ್ನು ರಂಗಭೂಮಿಯೆಡೆಗೆ ಸೆಳೆಯುವ ಪ್ರಯತ್ನವಾಗಿ ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾಲೇಜು ರಂಗೋತ್ಸವ, ಕೋವಿಡ್‌ನ ಸಂದರ್ಭದಲ್ಲಿಯೂ ವಿರಮಿಸದೆ ಆನ್‌ಲೈನ್ ಕಾರ್ಯಕ್ರಗಳ ಆಯೋಜನೆ, ಜೀವನ್ಮುಖಿ ಮಹಿಳಾ ರಂಗೋತ್ಸವ, ವಿಶ್ವ ರಂಗಭೂಮಿ ದಿನಾಚರಣೆ, ರಂಗಾಯಣ ರೆಪೆರ್ಟರಿಯ ನಾಟಕಗಳ ಪ್ರದರ್ಶನ, ಮತ್ತು ರಾಜ್ಯಾದ್ಯಂತ ರಂಗತೇರು-ರಂಗಪಯಣದ ಹೆಸರಿನಲ್ಲಿ ತಿರುಗಾಟ, ಹೊರರಾಜ್ಯ ವಿಶೇಷವಾಗಿ ದೆಹಲಿಯಲ್ಲಿ ಶಿವಮೊಗ್ಗ ರಂಗಾಯಣದ ನಾಟಕಗಳ ಪ್ರದರ್ಶನ, ರಂಗಭೂಮಿ ಕುರಿತಂತೆ ವಿಚಾರ ಸಂಕಿರಣಗಳು, ಸರ್ಕಾರದ ಸರ್ವರಿಗೂ ಸಂವಿಧಾನ ಯೋಜನೆಯಡಿ ವಿ ದ ಪೀಪಲ್ ಆಫ್ ಇಂಡಿಯಾ ನಾಟಕದ ಸುಮಾರು 60 ಕಡೆಗಳಲ್ಲಿ ಯಶಸ್ವೀ ಪ್ರದರ್ಶನ ನಡೆಸಿದೆ. ಅಷ್ಟೇ ಅಲ್ಲದೆ ರಂಗಾಯಣದ ಆವರಣದಲ್ಲಿ ಭಿತ್ತಿಚಿತ್ರಗಳು, ಸಿಮೆಂಟ್ ಶಿಲ್ಪಗಳ ಅನಾವರಣ, ಭವನದ ಸಮೀಪ ಬಯಲು ರಂಗಮಂದಿರದ ಕಾಮಗಾರಿ. ಇವಿಷ್ಟು ನನ್ನ ಅವಧಿಯಲ್ಲಿ ನಡೆದಿದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post