ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಾಧ್ಯಮ ಕ್ಷೇತ್ರದ ಬಹುದೊಡ್ಡ ಸಂಸ್ಥೆ , ಪ್ರತಿಷ್ಠಿತ ಸಿಎನ್‌ಎನ್ ನ್ಯೂಸ್ 18 ಚಾನಲ್ ರಾಜ್ಯದಲ್ಲೇ ಬೆಸ್ಟ್ ಮದರ್ ಆ್ಯಂಡ್ ಚೈಲ್ಡ್ ಕೇರ್ ವಿಭಾಗದಲ್ಲಿ ಗಣನೀಯ ಸೇವೆ ಗುರುತಿಸಿ ಅತ್ಯುತ್ತಮ ಹೆಲ್ತ್ ಕೇರ್ ಅವಾರ್ಡ್ 22 ಅನ್ನು ನಗರದ ಪ್ರತಿಷ್ಠಿತ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ Sarji Hospital ನೀಡಿದೆ.
ರಾಜ್ಯದಲ್ಲೇ ಉತ್ತಮ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಾಗಿ ಆರೋಗ್ಯ ಕ್ಷೇತ್ರದಲ್ಲಿ ಕೊಡ ಮಾಡುವ ಪ್ರಶಸ್ತಿಗೆ ನಗರದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ಆಯ್ಕೆಯಾಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ UP CM Yogi Adithyanath ಅವರ ಆರೋಗ್ಯ ಸಲಹೆಗಾರರಾದ ಮೇಜರ್ ಡಾ. ವಿ. ಪ್ರಸಾದ್, ಬೆಂಗಳೂರು ಜಯದೇವ ಹೃದ್ರಾಯಲಯದ ಮುಖ್ಯಸ್ಥರಾದ ಡಾ.ಮಂಜುನಾಥ್, ಡಾ.ಅಂಜಲಿ ನಿಂಬಾಳ್ಕರ್ ಅವರನ್ನೊಳಗೊಂಡ ತಜ್ಞರ ಸಮಿತಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.
Also read: ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಭೇಟಿ: ವಿಶೇಷ ಪೂಜೆ ಸಲ್ಲಿಕೆ
ಸರ್ಜಿ ತಾಯಿ ಮಕ್ಕಳ ಆಸ್ಪತ್ರೆಯು ಪ್ರತಿ ವರ್ಷ 2 ಲಕ್ಷ ಒಪಿಡಿ, 15 ಸಾವಿರ ಐಪಿಡಿ , 2500 ಸಾವಿರ ಹೆರಿಗೆ ಮಾಡಿಸಿದ ಹೆಗ್ಗಳಿಕೆ ಹೊಂದಿದೆ. ರೋಗಿಗಳಿಗೆ ಎಲ್ಲ ರೀತಿಯ ಸುಸಜ್ಜಿತ ಸೌಲಭ್ಯ ಒದಗಿಸುತ್ತ ಬಂದಿದೆ.
ಸರ್ಜಿ ಆಸ್ಪತ್ರೆಯ ವಿಶೇಷತೆ ಎಂದರೆ ನೆರೆಯ ಹಲವಾರು ಜಿಲ್ಲೆಯ ರೋಗಿಗಳಿಗೆ ಲೆವೆಲ್ ತ್ರೀ (ತರ್ಷರಿಕೇರ್) ಸೇವೆ ನೀಡುತ್ತಾ ಬಂದಿದೆ. ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ಸಿರ್ಸಿ, ಸಿದ್ದಾಪುರ ಹಾಗೂ ಅರಸಿಕೆರೆ ಭಾಗದ ರೋಗಿಗಳಿಗೆ ಕಳೆದ 8 ವರ್ಷಗಳಿಂದ ಉತ್ಕೃಷ್ಠ ಗುಣಮಟ್ಟ ಸೇವೆ ಮತ್ತು ಕಡಿಮೆ ದರದಲ್ಲಿ ಉತ್ತಮ ಸೇವೆಯನ್ನು ನೀಡುತ್ತಿದೆ.
ಹುಟ್ಟಿದ ಮಗುವಿನಿಂದ ಹಿಡಿದು 18 ವರ್ಷದವರೆಗಿನ ಮಕ್ಕಳಿಗೆ ಎಲ್ಲ ತರಹದ ಚಿಕಿತ್ಸೆಯನ್ನು ಒಂದೇ ಸೂರಿನ ನೀಡುತ್ತಿರುವುದು ಆಸ್ಪತ್ರೆಯ ಹೆಗ್ಗಳಿಕೆಯಾಗಿದೆ. ಮಕ್ಕಳ ವಿಭಾಗದ 10 ಮಂದಿ ಮಕ್ಕಳ ತಜ್ಞ ವೈದ್ಯರು, 5 ಮಂದಿ ಪ್ರಸೂತಿ ತಜ್ಞ ವೈದ್ಯರು ಒಂದೇ ಸೂರಿನಡಿ ಲಭ್ಯವಿದ್ದು, ಲಕ್ಷಾಂತರ ರೋಗಿಗಳಿಗೆ ಸೇವೆ ಒದಗಿಸುತ್ತ್ಲಾ ಬಂದಿದ್ದಾರೆ. ಈ ಎಲ್ಲ ಸೇವೆಗಳ ಉತ್ತಮ ಗುಣಮಟ್ಟವನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಭಾನುವಾರ ನಡೆದ ಅದ್ದೂರಿ ಸಮಾರಂಭದಲ್ಲಿ ಸರ್ಜಿ ಗ್ರೂಪ್ ಆಪ್ ಹಾಸ್ಪಿಟಲ್‌ನ ಚೇರ್ಮನ್ ಡಾ. ಧನಂಜಯ ಸರ್ಜಿ ಅವರಿಗೆ ಪ್ರಶಸ್ತಿಯನ್ನು ರಾಜ್ಯ ಸಹಕಾರ ಸಚಿವ ಸೋಮಶೇಖರ್ ಪ್ರದಾನ ಮಾಡಿದರು. ಸಮಾರಂಭದಲ್ಲಿ ರಾಜ್ಯ ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಸಚಿವ ಡಾ.ಸುಧಾಕರ್, ಶಾಸಕರಾದ ದಿನೇಶ್ ಗುಂಡೂರಾವ್, ಎಂಎಲ್‌ಸಿ ಗೋವಿಂದರಾಜು, ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಶಾಸಕರಾದ ರಿಜ್ವಾನ್ ಹರ್ಷದ್ ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post