ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪೊಲೀಸರಿಗೆ ನಾಗರಿಕರು ಸಹಕಾರ ನೀಡಿದರೆ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಸರ್ಜಿ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಹೇಳಿದರು.
ನಗರದ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಡಿಎಆರ್ ಸಭಾಂಗಣದಲ್ಲಿ ಭಾನುವಾರ ಮಧ್ಯಾಹ್ನ ನಿವೃತ್ತರಾಗಿ 10 ವರ್ಷ ಪೂರೈಸಿದ 60 ಪೊಲೀಸ್ ಅಧಿಕಾರಿಗಳನ್ನು ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಸರ್ಜಿ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ನಾವು ನಿಮಗೆ ಚಿರಋಣಿ ವಿಶೇಷ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿ ಅವರು ಮಾತನಾಡಿದರು. ಹಬ್ಬ ಹರಿದಿನ ಎನ್ನದೇ, ಮಳೆ, ಛಳಿ ಗಾಳಿ ಎನ್ನದೇ ಹಗಲಿರುಳು ಸೇವೆ ಸಲ್ಲಿಸುವ ಪೊಲೀಸ್ ಇಲಾಖೆ ಕಾರ್ಯ ಶ್ಲಾಘನೀಯವಾದುದು ಊಟದಿಂದ ಶರೀರಕ್ಕೆ, ಪಾಠದಿಂದ ಮೆದುಳಿಗೆ, ಆಟದಿಂದ ಮನಸರಸಿಗೆ ತೃಪ್ತಿ ಸಿಕ್ಕರೆ, ಆತ್ಮಕ್ಕೆ ನಿಸ್ವಾರ್ಥ ಸೇವೆಯಿಂದ ಮಾತ್ರ ತೃಪ್ತಿ ಸಿಗುತ್ತದೆ ಎಂದು ಹೇಳಿದರು.

ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ಸೇವೆಯಲ್ಲಿ ಸಲ್ಲಿಸಿ ನಿವೃತ್ತಿಯನ್ನು ಪ್ರತಿಯೊಬ್ಬರೂ ನಿತ್ಯ ವ್ಯಾಯಾಮ, ವಾಕಿಂಗ್ ಇಲ್ಲವೇ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭ ಸಂಘದ ಗೌರವಾಧ್ಯಕ್ಷ ಹೆಚ್.ಮಂಜಪ್ಪ, ಕಾರ್ಯ್ಧ್ಯಕ್ಷರಾದ ಜೆ.ಪಿ.ಚಿಕ್ಕೇಗೌಡ, ಉಪಾಧ್ಯಕ್ಷರಾದ ಹೆಚ್.ಇ. ಮಂಜಪ್ಪ, ಕಾರ್ಯದರ್ಶಿ ಎಸ್.ಜಿ.ನಾಯಕ್, ಸಹಕಾರ್ಯದರ್ಶಿ ರಾಮಕೃಷ್ಣ ಮತ್ತಿತರರು ಭಾಗವಹಿಸಿದ್ದರು.

 
	    	




 Loading ...
 Loading ... 
							



 
                
Discussion about this post