ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆಕಾಶ್ ಬೈಜೂಸ್ #Akash Byjus ಏಪ್ರಿಲ್ 2024 ರಲ್ಲಿ ಆರಂಭವಾಗಲಿರುವ ವೈದ್ಯರು ಮತ್ತು ಎಂಜಿನಿಯರ್‍ಗಳಾಗಬೇಕೆಂದು ಹೊತ್ತಿರುವ ಹಲವಾರು ವಿದ್ಯಾರ್ಥಿಗಳ ಕನಸನ್ನು ನನಸು ಮಾಡುವ ಉದ್ದೇಶದಿಂದ ವಿವಿಧ ವಿದ್ಯಾರ್ಥಿ ವೇತನಗಳನ್ನು ಪ್ರಕಟಿಸಿದೆ ಎಂದು ಆಕಾಶ್ ಬೈಜೂಸ್ ನ ಚೀಫ್ ಬ್ಯುಸಿನೆಸ್ ಆಫೀಸರ್ ಅನೂಪ್ ಅಗರ್ವಾಲ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿದ್ಯಾರ್ಥಿ ವೇತನವೆಂದರೆ ಇನ್ ಸ್ಟಂಟ್ ಅಡ್ಮಿಶನ್ ಕಮ್ ಸ್ಕಾಲರ್ ಶಿಪ್ ಟೆಸ್ಟ್ ಆಗಿದೆ. ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಫೌಂಡೇಶನ್ ಕೋರ್ಸ್‍ಗಳ ಪ್ರವೇಶಕ್ಕೆ ಶೇ.90 ರವರೆಗೆ ವಿದ್ಯಾರ್ಥಿವೇತನ ದೊರೆಯಲಿದೆ. ಇದಲ್ಲದೇ, ಆಕಾಶ್ ಬೈಜೂಸ್ ಹುತಾತ್ಮರಾದ ಯೋಧರು, ಸೇನಾ ಸಿಬ್ಬಂದಿ ಮತ್ತು ಭಯೋತ್ಪಾದಕ ದಾಳಿಗೆ ತುತ್ತಾದವರ ಮಕ್ಕಳಿಗೆ ವಿಶೇಷ ರಿಯಾಯ್ತಿಯನ್ನು ನೀಡುತ್ತಿದೆ ಎಂದರು.

ಇನ್ ಸ್ಟಂಟ್ ಅಡ್ಮಿಶನ್ ಕಮ್ ಸ್ಕಾಲರ್ ಶಿಪ್ ಟೆಸ್ಟ್ 60 ನಿಮಿಷಗಳ ಪರೀಕ್ಷೆಯಾಗಿದ್ದು, ನಿಗದಿತ ದಿನಗಳಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯೊಳಗೆ ಪರೀಕ್ಷೆಯನ್ನು ಬರೆಯಲು ಅವಕಾಶವಿದೆ. 8 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ವೈದ್ಯಕೀಯ ಅಥವಾ ಎಂಜಿನಿಯರಿಂಗ್ ನಲ್ಲಿ ತಮ್ಮ ವೃತ್ತಿಜೀವನದ ಸಾಮಥ್ರ್ಯವನ್ನು ಪ್ರದರ್ಶಿಸಲು NEET ಒಂದು ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ ಎಂದು ಹೇಳಿದರು.

Also read: ಚೊಂಬು ಚಿತ್ರದ ಜಾಹಿರಾತು ಪ್ರದರ್ಶಿಸಿ ಬಿಜೆಪಿ ವಿರುದ್ಧ ಸುರ್ಜೇವಾಲಾ ಟೀಕೆ
ಆಕಾಶ್ ಬೈಜೂಸ್ ನ ಡಿಜಿಟಲ್ ಪ್ರೋಗ್ರಾಂನ ವಿದ್ಯಾರ್ಥಿಗಳು ಜೆಇಇ ಮೇನ್ಸ್ 2024 (ಸೆಶನ್ -01)ರಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಗಣಿತದಲ್ಲಿ 100 ಅಂಕಗಳೊಂದಿಗೆ ರೀತಂ ಬ್ಯಾನರ್ಜಿ ಒಟ್ಟಾರೆ ಶೇ.99.96 ಅಂಕ ಪಡೆಯುವುದರೊಂದಿಗೆ ಈ ವಿಭಾಗದಲ್ಲಿ ಟಾಪರ್ ಆಗಿದ್ದಾರೆ.

ಗೋಷ್ಠಿಯಲ್ಲಿ ಹರೀಶ್ ಟ,ಸ್, ಬ್ರಾಂಚ್ ಮೆನೇಜರ್, ವರುಣ ಸೋನಿ, ನಿತೀನ್ ಆರ್, ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post