ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸ್ಕೌಟ್ಸ್-ಗೈಡ್ಸ್ ಸಂಸ್ಥೆಯು Scouts Guides ಮಕ್ಕಳಿಗೆ ಶಿಸ್ತನ್ನು ಕಲಿಸುತ್ತದೆ. ಅಲ್ಲದೆ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ತೆಗೆಯುವುದು ಈ ಸಂಸ್ಥೆಯ ಮುಖ್ಯ ಪಾತ್ರವಾಗಿದೆ ಎಂದು ನೂತನ ಉಪನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ಅಭಿಪ್ರಾಯಪಟ್ಟರು
ಜಿಲ್ಲಾ ಸ್ಕೌಟ್ ಭವನದಲ್ಲಿ ನಡೆದ ಸ್ಕೌಟ್ಸ್, ಗೈಡ್ಸ್ಗಳ “ಜಿಲ್ಲಾ ಪುರಸ್ಕಾರ” ಪರೀಕ್ಷಾ ಶಿಬಿರದಲ್ಲಿ ಹುಕುಂಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿ, ಮಾತನಾಡಿದರು.
2 ದಿನಗಳ ಕಾಲ ನಡೆಯುವ ಜಿಲ್ಲಾ ಪುರಸ್ಕಾರ ಪರೀಕ್ಷಾ ಶಿಬಿರವನ್ನು ತಾವು ಜಿಲ್ಲಾ ಮಟ್ಟದಲ್ಲಿ ಹಮ್ಮಿಕೊಂಡು ಜಿಲ್ಲಾದ್ಯಂತದ ಮಕ್ಕಳು ಇಲ್ಲಿ ಸೇರಿರುವುದು ಒಂದು ವಿಶೇಷವೆ ಸರಿ. ಅಲ್ಲದೆ ಈ ಮಕ್ಕಳು ಜಿಲ್ಲಾಧಿಕಾರಿಯವರ ಸಹಿ ಇರುವ ಪ್ರಮಾಣಪತ್ರವನ್ನು ತೆಗೆದುಕೊಳ್ಳುತ್ತಿದ್ದು, ಇಲ್ಲಿಂದ ಇವರು ರಾಜ್ಯಪಾಲರ ಪ್ರಶಸ್ತಿಗೆ ಅರ್ಹರಾಗುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ರಾಜ್ಯಪಾಲರ ಪ್ರಶಸ್ತಿಯನ್ನು ಪಡೆದುಕೊಕೊಳ್ಳಬೇಕು. ಈ ಪರೀಕ್ಷಾ ಶಿಬಿರವು ನಿಮಗೆ ಶುಭವಾಗಲಿ ಎಂದು ಹಾರೈಸಿದರು.
ರಾಜ್ಯ ಮಟ್ಟದ ವಿದ್ಯಾ ಇಲಾಖೆಯವರು 2 ಸಲ ಕಾರ್ಯಾಗಾರ ಮಾಡಿದಾಗ ದಾವಣಗೆರೆ ಡಿಡಿಪಿಐ ಇದ್ದಾಗ ಇಲ್ಲಿಗೆ ಭಾಗವಹಿಸಿದ್ದೆ. ಶಿವಮೊಗ್ಗ ಜಿಲ್ಲಾ ಸಂಸ್ಥೆಯು ಯಾವುದೆ ಕಾರ್ಯಕ್ರಮವನ್ನು ತುಂಬಾ ಶಿಸ್ತಿನಿಂದ ಹಾಗೂ ಅಚ್ಚುಕಟ್ಟಾಗಿ ನಡೆಸಿಕೊಡುತ್ತಿರಾ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
Also read: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಪ್ರತಿಭಟನೆ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಸ್ಕೌಟ್ ಆಯುಕ್ತ ಕೆ.ಪಿ. ಬಿಂದುಕುಮಾರ್ ಮಾತನಾಡಿ, ಕೋವಿಡ್ ಬಂದಾಗಿನಿಂದ ಇಲ್ಲಿಯವರೆಗೆ ಎಸ್.ಎಸ್.ಎಲ್.ಸಿ ಮಕ್ಕಳಿಗೆ ಮಾಸ್ಕ್ ವಿತರಣೆ ಹಾಗೂ ಪ್ರತಿ ಸೆಂಟರಿನಲ್ಲಿ ನಮ್ಮ ಸ್ವಯಂ ಸೇವಕರು ಸೇವೆಯನ್ನು ಸಲ್ಲಿಸಿರುತ್ತಾರೆ, ಅಲ್ಲದೆ ಶಿಕ್ಷಣ ಇಲಾಖೆಯವರ ಮತ್ತು ನಮ್ಮ ಸಂಬಂಧ ತುಂಬಾ ಅನ್ಯೋನ್ಯವಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಗೆ ತಾವು ಇನ್ನು ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಸಹಕಾರ ನೀಡಬೇಕೆಂದು ತಿಳಿಸುತ್ತಾ, ಶಿವಮೊಗ್ಗ ಜಿಲ್ಲೆಗೆ ನೂತನವಾಗಿ ಅಧಿಕಾರ ತೆಗೆದುಕೊಂಡ ಉಪನಿರ್ದೇಶಕರವರಿಗೆ ಶಿವಮೊಗ್ಗ ಜಿಲ್ಲಾ ಸಂಸ್ಥೆ ವತಿಯಿಂದ ಗೌರವಿಸಿ ಬರಮಾಡಿಕೊಳ್ಳಲಾಯಿತು.
ರಾಜ್ಯ ಸಹಾಯಕ ಸಂಘಟನಾ ಆಯುಕ್ತರಾದ ಭಾರತಿ ಡಾಯಸ ಕ್ಯಾಂಪಿನ ಉಸ್ತುವಾರಿ ವಹಿಸಿ ಕಾರ್ಯಕ್ರಮದ ನಿರೂಪಣೆಯನ್ನು ನಿರ್ವಹಿಸಿದರು. ಜಿಲಾ ಕಾರ್ಯದರ್ಶಿ ಪರಮೇಶ್ವರ ಸ್ವಾಗತಿಸಿದರು. ಜಿಲ್ಲಾ ಖಜಾಂಚಿ ಚೂಡಾಮಣಿ ಇ ಪವಾರ್ ವಂದನಾರ್ಪಣೆ ನೇರವೇರಿಸಿದರು.
ವೈ.ಆರ್. ವೀರೇಶಪ್ಪ, ಶಿಬಿರದ ನಾಯಕರಾದ ಹೆಚ್. ಶಿವಶಂಕರ್, ಸಿ.ಎಸ್. ಕಾತ್ಯಾಯಿನಿ, ಪಿ.ಆರ್.ಒ ವಿಜಯಕುಮಾರ, ಡಿಟಿಸಿ ಎಂ. ಗಣಪತಿ, ಸಹಾಯಕರಾಗಿ ಸಿ.ಎಂ. ಪರಮೇಶ್ವರ್, ಜ್ಯೋತಿ, ನಾಗರಾಜ್, ಗೀತಾ ಚಿಕ್ಕಮಠ, ಪ್ರಮೀಳಾ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿಗಳು, 6 ತಾಲ್ಲೂಕಿನ 207 ಸ್ಕೌಟ್ಸ್ ಗೈಡ್ಸ್‌ಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post