ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ Second PUC Exam result ಪ್ರಕಟವಾಗಿದ್ದು, ನಗರದ ವಿಕಾಸ ಕಾಲೇಜಿನ ವಿದ್ಯಾರ್ಥಿ ನಿತೀಶ್ ವಿಜ್ಞಾನ ವಿಭಾಗದ ಪಿಸಿಎಂಸಿ ನಾಲ್ಕು ವಿಷಯಗಳಲ್ಲಿ 100ಕ್ಕೆ 100 ಪಡೆದು, 595 ಅಂಕ ಗಳಿಸಿ, ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಉತ್ತಮ ಅಂಕ ಗಳಿಸಲು ಪೂರಕ ವಾತಾವರಣ ಕಲ್ಪಿಸಿಕೊಟ್ಟ ಪೋಷಕರು ಹಾಗೂ ಪ್ರೋತ್ಸಾಹ ನೀಡಿದ ವಿಕಾಸ ಕಾಲೇಜಿನ ಶಿಕ್ಷಕ ವೃಂದದವರಿಗೆ ನಿತೀಶ್ ಧನ್ಯವಾದ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post