ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮಲ್ಲಿಗೇನಹಳ್ಳಿಯ ವಾಜಪೇಯಿ ಬಡಾವಣೆಯ ಸಾರ್ವಜನಿಕ ಸ್ಥಳದಲ್ಲಿ ದ್ವಿಚಕ್ರ ಹಾಗೂ ಕಾರು ನಿಲ್ಲಿಸಿಕೊಂಡು ಮಾದಕವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ 6 ಮಂದಿಯನ್ನು ಸಿಇಎನ್ ಠಾಣೆಯ ಪೊಲೀಸರು ಬಂಧಿಸಿ 2 ಕೆಜಿ 450 ಗ್ರಾಂ ತೂಕದ ಒಣ ಗಾಂಜಾ, 73,950 ರೂ. ನಗದು, 6 ಮೊಬೈಲ್, ಮೂರು ಬೈಕ್ ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.
ಶಿವಮೊಗ್ಗದ ಕಾಮಾಕ್ಷಿ ರಸ್ತೆಯ ಮಂಜುನಾಥ (31), ಅಣ್ಣಾ ನಗರದ ವಿಜಯ್‌ಕುಮಾರ್ (23), ವಿನೋಬನಗರದ ಎಸ್. ಸುಮನ್ (25), ಹೊಸನಗರದ ದ್ಯಾವಲಸಾ ರಸ್ತೆ ನಿವಾಸಿ ಎಸ್. ಗಿರೀಶ್ (31), ಚಿಕ್ಕಮಗಳೂರು ಉಪ್ಪಿನಗದ್ದೆ ಕೊಪ್ಪದ ಯು.ಎಂ. ಅಭಿಲಾಷ್ (35) ಹಾಗೂ ಹಣಗೆರೆ ಕಟ್ಟೆಯ ಪವನ್‌ಕುಮಾರ್ (27) ಬಂಧಿತ ಆರೋಪಿಗಳು.
Also read: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗ ನಕಲಿ ಪೋಸ್ಟರ್: ಎಸ್’ಪಿ ಎಚ್ಚರಿಕೆ
ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಇಎನ್ ಪೊಲೀಸ್ ಠಾಣೆಯ ಪಿಎಸ್‌ಐ ಮಂಜುನಾಥ್ ಹಾಗೂ ಸಿಬ್ಬಂದಿ ತಂಡ ದಾಳಿ ನಡೆಸಿ ಗಾಂಜಾ ಮಾರಾಟಗಾರರನ್ನು ಬಂಧಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post