ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಂತರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಡಾ. ಸತ್ಯನಾರಾಯಣ ಭಟ್ ಅವರು ರಚಿಸಿರುವ ಆಯುರ್ವೇದ ಪಿತಾಮಹ ಶ್ರೀ ಎಡತೊರೆ ಪಾರ್ಥನಾರಾಯಣ ಪಂಡಿತರ ಜೀವನ ಚರಿತ್ರೆಯ ಗ್ರಂಥ ಸೆ.೨೦ರಂದು ಲೋಕಾರ್ಪಣೆಯಾಗಲಿದೆ.
ಆಯುರ್ವೇದ ಅಕಾಡೆಮಿ ಬೆಂಗಳೂರು, ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಬೋಧನಾ ಆಸ್ಪತ್ರೆ ಶಿವಮೊಗ್ಗ ಇವರ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಇದೇ ಸಂದರ್ಭದಲ್ಲಿ ದಂತ ವೈದ್ಯ ಡಾ. ವಿವೇಕ್ ಅವರಿಂದ ನೋವು, ರಕ್ತಸ್ರಾವರಹಿತ ಹಲ್ಲು ಕೀಳುವ ಜಲಂಧರ ಯೋಗ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಸ.ಆ. ವೈ ಕಾಲೇಜಿನ ಪ್ರಾಂಶುಪಾಲರಾದ ಡಾ. ವೀಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಶಾಸಕ ಚನ್ನಬಸಪ್ಪ, ಎಮ್‌ಎಲ್‌ಸಿ ಡಿ.ಎಸ್. ಅರುಣ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಆಯುರ್ವೇದ ಅಕಾಡೆಮಿಯ ಅಶ್ವಿನೀ ಕುಮಾರ್ ಪಂಡಿತ್ ಗ್ರಂಥಕರ್ತ ಡಾ. ಸತ್ಯನಾರಾಯಣ ಭಟ್ಟರು ಉಪಸ್ಥಿತರಿರುವರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 




















