ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀಗಂಧ ಸಾಂಸ್ಕøತಿಕ ಸಂಸ್ಥೆಯು ಶ್ರೀಶನೈಶ್ವರ ಸ್ವಾಮಿ ದೇವಸ್ಥಾನ ಸಮಿತಿ ಟ್ರಸ್ಟ್, ಭಜನಾ ಪರಿಷತ್, ಶಿವಮೊಗ್ಗ ನಗರದ ಎಲ್ಲಾ ಭಜನಾ ಮಂಡಳಿಗಳ ಒಕ್ಕಟದ ಸಹಕಾರದೊಂದಿಗೆ ಸೆ.27,28 ಮತ್ತು 29ರಂದು ಪ್ರತಿದಿನ ಸಂಜೆ 6ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ “ಭಗವದ್ಗೀತೆಯ ವಿಶ್ವರೂಪ ದರ್ಶನ” #Bhagawathgeethe ದಿವ್ಯಸತ್ಸಂಗ, ಪ್ರವಚನ ಹಾಗೂ ಸಾಮೂಹಿಕ ಧ್ಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಜನಾ ಪರಿಷತ್ ಕಾರ್ಯದರ್ಶಿ ಶಬರೀಶ್ ಕಣ್ಣನ್ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ಶ್ರೀಧರ ಶ್ರೀಗುಡ್ಡ ಹಾಗೂ ಆತ್ಮಸಂಶೋಧನಾ ಕೇಂದ್ರದ ಸಂಸ್ಥಾಪಕರು, ಆಧ್ಯಾತ್ಮ ಚಿಂತಕರಾದ ಪೂಜ್ಯ ಗುರುಮಾತಾ ಅಮ್ಮ ಅವರು ಗೀತಾ ಸೂಕ್ಷ್ಮ ದರ್ಶನ, ನಿತ್ಯ ಜೀವನದಲ್ಲಿ ಗೀತಾನುಷ್ಠಾನದ ಬಗ್ಗೆ ಪ್ರವರ್ಚನ ನೀಡಲಿದ್ದಾರೆ ಎಂದರು.

Also read: ಸವಳಂಗ ರಸ್ತೆ ಫ್ಲೈಓವರ್ ದುಸ್ಥಿತಿ | ಇದು ಕೇವಲ ತೇಪೆ ಕೆಲಸ ಅಷ್ಟೆ | ಸಾರ್ವಜನಿಕರ ಆಕ್ರೋಶ
ಶ್ರೀಚಕ್ರ ಆರಾಧನೆಯನ್ನು ಅತಿಸುಲಭ ಹಾಗೂ ಸರಳ ರೀತಿಯಲ್ಲಿ ತಮ್ಮ ಶಿಷ್ಯರಿಗೆ ಭೋಧಿಸುತ್ತ ಬಂದಿರುವ ಗುರುಮಾತ ಅಮ್ಮನವರು ಶ್ರೀಲಲಿತಾ ಸಹಸ್ರಾನಾಮ, ಶ್ರೀಲಲಿತಾ ತ್ರಿಶತಿ, ಸೌಂದರ್ಯ ಲಹರಿಗಳಂತಹ ಕ್ಲಿಷ್ಟ ಸರ್ವಗಳಿಗೂ ಸೂಕ್ಷ್ಮಾರ್ಥವನ್ನು ಆಸಕ್ತರಿಗೆ ಮನಮುಟ್ಟುವಂತೆ ನೂರಾರು ಶಿಬಿರಗಳಲ್ಲಿ ತಿಳಿಸುತ್ತಾ ಬಂದಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಭದ್ರಾವತಿ ಕ್ಷೇತ್ರದ ಶಾಸಕರು ಹಾಗೂ ಕೆ.ಆರ್.ಐ.ಡಿ.ಎಲ್‍ನ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ್ ಅವರನ್ನು ಸನ್ಮಾನಿಸಲಾಗುವುದು. ಅಧ್ಯಕ್ಷತೆಯನ್ನು ಶ್ರೀಗಂಧ ಸಂಸ್ಥೆಯ ಅಧ್ಯಕ್ಷರು ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಗಂಧ ಸಂಸ್ಥೆಯ ಪ್ರಮುಖರಾದ ಸುವರ್ಣ ಶಂಕರ್, ಈ.ವಿಶ್ವಾಸ್, ಬಾಲು, ಮೋಹನ್‍ರಾವ್ ಜಾದವ್, ಮಮತಾ ಪ್ರಸಾದ್, ಸುಧೀಂದ್ರ ಕಟ್ಟೆ, ನಾಗರಾಜ್, ರಾಜಣ್ಣ, ಮಾಲಾ ರಾಮಪ್ಪ, ಶಶಿಕಲಾ ಪ್ರಶಾಂತ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post