ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಮುಖ್ಯಮಂತ್ರಿ ಸಿದ್ದರಾಮಯ್ಯ #CM Siddaramaiah ಅವರು ಆರೋಪ ಮುಕ್ತರಾಗಲಿ ಆದರೆ ನ್ಯಾಯಾಂಗಕ್ಕೂ ಗೌರವ ಕೊಡಲಿ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರ ಕುರಿತಂತೆ ಹೈಕೋರ್ಟ್ ನೀಡಿದ ತೀರ್ಪು ಬಹಳ ಮಹತ್ವ ಪಡೆದುಕೊಂಡಿದೆ. ವೈಯುಕ್ತಿಕವಾಗಿ ಅವರ ಬಗ್ಗೆ ನಾನು ಏನು ಹೇಳುವುದಿಲ್ಲ. ಆದರೆ, ಈ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಅತಿ ದೊಡ್ಡ ಗೌರವವಿದೆ. ಈ ಗೌರವವನ್ನು ಮುಖ್ಯಮಂತ್ರಿಗಳು ನೀಡಬೇಕು. ಕೋರ್ಟಿನ ತೀರ್ಪನ್ನೇ ತಪ್ಪು ಎಂದು ಹೇಳಬಾರದು ಎಂದರು.
ಈ ಹಿಂದೆಯೇ ನಾನು ಸಿದ್ದರಾಮಯ್ಯ ಅವರ ಕುರಿತಂತೆ ಅವರು ಆರೋಪ ಮುಕ್ತರಾಗಲಿ ಎಂದು ಹೇಳಿದ್ದೆ, ಅದೇನೇ ಇರಲಿ ಅವರು ಹೈಕೋರ್ಟ್ ತೀರ್ಪಿಗೆ ಗೌರವ ಕೊಡಬೇಕು. ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಇದ್ದೇ ಇದೆ. ಕೋರ್ಟ್‍ಗಳ ತೀರ್ಪನ್ನೇ ತಪ್ಪು ಎನ್ನುವುದಾದರೆ ನ್ಯಾಯಂಗಕ್ಕೆ ಅರ್ಥವಾದರೂ ಏನಿದೆ? ಕೇಂದ್ರದ ಕಾಂಗ್ರೆಸ್ ನಾಯಕರು ಹಾಗೂ ರಾಜ್ಯದ ಕಾಂಗ್ರೆಸ್ ನಾಯಕರು ನ್ಯಾಯಾಂಗದ ಬಗ್ಗೆ ಮಾತನಾಡುವುತ್ತಿರುವುದು ಶೋಭೆ ತರುವಂತದಲ್ಲ ಎಂದರು.
Also read: ಸೆ.27-29 | “ಭಗವದ್ಗೀತೆಯ ವಿಶ್ವರೂಪ ದರ್ಶನ” ದಿವ್ಯಸತ್ಸಂಗ | ಶಬರೀಶ್ ಕಣ್ಣನ್
ತಮ್ಮ ಬೆಂಗಳೂರಿನ ಮನೆಯಲ್ಲಿ ಕೆಲವು ಬಿಜೆಪಿ ಮುಖಂಡರು ಮಾತನಾಡಿದ್ದರಲ್ಲ ಎಂಬ ಪತ್ರಕತ್ರರ ಪ್ರಶ್ನೆಗೆ ಸಹಜವಾಗಿಯೇ ಉತ್ತರಿಸಿದ ಅವರು, ಏಕೆ ನಾವು ಯಾರೋಂದಿಗೂ ಮಾತನಾಡಬಾರದ, ಮನೆಯಲ್ಲಿ ಚಹಾ ಸೇವಿಸಬಾರದ, ಅಂತಹ ಮಹತ್ವದ ವಿಷಯವೇನು ಮಾತನಾಡಿಲ್ಲ, ಯತ್ನಾಳ್, ರಮೇಶ್ ಜಾರಕಿಹೊಳಿ, ರಾಜು ಗೌಡರು ಬಂದಿದ್ದರು. ಇದು ಸೌಹಾರ್ದ ಭೇಟಿ ಅಷ್ಟೇ ಎಂದರು.
ಮುಂದಿನ ಮುಖ್ಯಮಂತ್ರಿ ಈಶ್ವರಪ್ಪನವರೇ ಎಂದು ಯತ್ನಾಳ್ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇತ್ತೀಚೆಗೆ ಯತ್ನಾಳ್ ಅವರು ಆಕಸ್ಮಿಕವಾಗಿ ನನಗೆ ಜಮಖಂಡಿಯಲ್ಲಿ ಸಿಕ್ಕಿದ್ದರು. ಪರಸ್ಪರ ಕುಶಲ ವಿಚಾರಿಸಿದೆವು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ನಮ್ಮಿಬ್ಬರ ಬಗ್ಗೆ ಒಳ್ಳೆಯ ಮಾತನಾಡಿ, ರಾಯಣ್ಣ ಹಾಗೂ ಚೆನ್ನಮ್ಮ ಅವರ ರಕ್ತ ತಮ್ಮ ಮೈಯಲ್ಲಿ ಹರಿಯುತ್ತಿದೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಯತ್ನಾಳ್ ಅವರು ಈ ಮಾತನಾಡಿದ್ದಾರೆ ಎಂದರು.
ಸಿಎಂ ಅವರ ಪತ್ನಿ ಪಾರ್ವತಮ್ಮ ಅವರ ಬಗ್ಗೆ ಮಾತನಾಡಿದ ಈಶ್ವರಪ್ಪನವರು ಅವರು ಸಾತ್ವಿಕ ಹೆಣ್ಣು ಮಗಳು, ನಾನು ಸಚಿವನಾಗಿದ್ದಾಗ ಅವರ ಮನೆಯ ಪಕ್ಕದಲ್ಲಿಯೇ ಇದ್ದೆ. ನನ್ನ ಪತ್ನಿ ಅವರನ್ನು ಕುಂಕುಮಕ್ಕೆ ಕರೆಯಲು ಹೇಳಿದ್ದಳು, ನಾನು ಆಗ ಸಿದ್ದರಾಮಯ್ಯ ಅವರಿಗೂ ಈ ವಿಷಯ ತಿಳಿಸಿದ್ದೆ. ಅವರ ಪತ್ನಿ ಮನೆಯಿಂದ ಹೊರಗೆ ಬಂದವರಲ್ಲ. ಯಾವುದೂ ಕಾರಣಗಳಿಗೆ ಅವರ ಪತ್ನಿಯ ಹೆಸರನ್ನು ಬಳಸಿಕೊಂಡಿರಬಹುದು. ಅವರಿಗೆ ಅನ್ಯಾಯವಾಗಬಾರದು ಎಂದರು.
ರಾಯಣ್ಣ ಚೆನ್ನಮ್ಮ ಬ್ರಿಗೇಡ್ (ಆರ್‍ಸಿಬಿ)ಗೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಇದನ್ನು ಮುಂದುವರೆಸುವ ಮತ್ತು ಅದಕ್ಕೊಂದು ಶಕ್ತಿ ಕೊಡುವ ಕೆಲಸದ ಬಗ್ಗೆಯೂ ನಾವು ಚಿಂತಿಸುತ್ತಿದ್ದೇವೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post