ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕುವೆಂಪು ವಿಶ್ವವಿದ್ಯಾಲಯದ Kuvempu University 2021-22 ನೇ ಸಾಲಿನ ಪದವಿ ಪರೀಕ್ಷೆಗಳಲ್ಲಿ ನಗರದ ಎನ್’ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿಗೆ ಏಳು ರ‍್ಯಾಂಕ್’ಗಳು ಲಭಿಸಿದೆ.
ಬಿಬಿಎ ವಿಭಾಗದಲ್ಲಿ ಪ್ರೀತಿ ಜಾನ್ (2 ನೆಯ ರ‍್ಯಾಂಕ್), ಸ್ಯಾಂಡ್ರ ಡಿಸೋಜ (3 ನೆಯ ರ‍್ಯಾಂಕ್), ಸಾಕ್ಷಿ ಜೈನ್ (5 ನೆಯ ರ‍್ಯಾಂಕ್), ಪ್ರೀತಿ.ಎನ್.ಪಿ (6 ನೆಯ ರ‍್ಯಾಂಕ್) ಪಡೆದಿದ್ದಾರೆ.
ಇನ್ನು, ಬಿ.ಕಾಂ ವಿಭಾಗದಲ್ಲಿ ಸಂಜನಾ.ಎಚ್.ವಿ (8 ನೆಯ ರ‍್ಯಾಂಕ್), ನೆಲ್ಸನ್ ಎಂ.ಎಸ್. (9 ನೆಯ ರ‍್ಯಾಂಕ್), ವರುಣ್.ಎಸ್ (9 ನೆಯ ರ‍್ಯಾಂಕ್) ಪಡೆದಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ರಾಷ್ಟ್ರೀಯ ಶಿಕ್ಷಣ ಸಮಿತಿ ಆಡಳಿತ ಮಂಡಳಿ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಈ ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ ರಾಷ್ಟ್ರೀಯ ಶಿಕ್ಷಣಸಮಿತಿ ಆಡಳಿತ ಮಂಡಳಿ ಸದಸ್ಯರನ್ನು ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post