ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ #Shadakashari ಅವರ ವರ್ಗಾವಣೆ ದ್ವೇಷದ ರಾಜಕಾರಣದಿಂದ ಪ್ರೇರಿತವಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ #BYRaghavendra ಟೀಕಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ಷಡಾಕ್ಷರಿ ಆಗಲಿ ಮತ್ತೊಬ್ಬರು ಆಗಲಿ ಸರ್ಕಾರ ಬಂದಾಗ ಅಧಿಕಾರಿಗಳು ಬದಲಾಗುತ್ತಾರೆ. ಒಳ್ಳೆಯ ಅಧಿಕಾರಿಗಳಿಂದ ಒಳ್ಳೆಯ ಕೆಲಸ ತೆಗೆದುಕೊಳ್ಳಬೇಕು. ಈ ರೀತಿ ದ್ವೇಷದ ರಾಜಕಾರಣ ಮಾಡಬಾರದು ಎಂದರು.

ನಾನು ಮತದಾರರಿಗೆ ಉತ್ತರ ಕೊಡುವುದು. ನನಗೆ ಮತ ಕೊಟ್ಟಿರುವವರು ಮತದಾರರು, ನಾನು ಅವರಿಗೆ ನಿಷ್ಠೆ ಇರುವವನು ಎಂದರು.

7ನೆಯ ವೇತನ ಆಯೋಗದ #7thPayCommission ಬಗ್ಗೆ ಚರ್ಚೆ ಮಾಡಬೇಕೋ ಹೊರತು ಅಧಿಕಾರಿಗಳ ವರ್ಗಾವಣೆ ಮಾಡಿದ್ರೆ ಏನು ಆಗಲ್ಲ. ಆಡಳಿತ ವ್ಯವಸ್ಥೆ ತಿದ್ದಿಕೊಳ್ಳಬೇಕು. ಅಧಿಕಾರಿ ವರ್ಗಾವಣೆ ಮಾಡಿದ್ರೆ ಏನು ಪ್ರಯೋಜನ ಆಗಲ್ಲ. ಗ್ಯಾರಂಟಿ ಯೋಜನೆ ಜಾರಿಗೆ ಹಣ ವಿನಿಯೋಗಿಸುತ್ತಿದ್ದಾರೆ ಅಭಿವೃದ್ಧಿಗೆ ಹಣ ಕೊಡ್ತಿಲ್ಲ. ಜನಪರ ಆಡಳಿತ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post