No Result
View All Result
MODEL DEMOCRACY AT KRCS
English Articles

Model Democracy At KRCS | Student Council Election Concluded Successfully

by ಕಲ್ಪ ನ್ಯೂಸ್
June 22, 2026
0

Kalpa Media House  |  Shikaripura  | Kumadvathi Residential Central School (KRCS) conducted its Student Council Election for the academic year...

Read moreDetails
Naija Hegde’s Inspiring Rise to Success

From Coast to Glory: Naija Hegde’s Inspiring Rise to Success

June 21, 2026
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ಅಭಿನಯದ ‘ಲವ್ ಮಾಕ್‌ಟೇಲ್ 3’ ಜೂ.21ರಂದು ಜೀ ಕನ್ನಡದಲ್ಲಿ

Darling Krishna, Milana Nagaraj ’s Love Mocktail 3 Premieres This 21st on Zee Kannada

June 19, 2026
ಬೇಸಿಗೆ ದಟ್ಟಣೆ ನಿರ್ವಹಣೆ: ಹುಬ್ಬಳ್ಳಿ–ಗಾಜಿಪುರ ವಿಶೇಷ ರೈಲುಗಳ ಸಂಚಾರ ಅವಧಿ ವಿಸ್ತರಣೆ

Periodicity of Bhubaneswar–Yesvantpur Special Train Extended

June 19, 2026
Blood Donation Camp Successfully Organised at Mysuru Division

Blood Donation Camp Successfully Organised at Mysuru Division

June 16, 2026
  • Advertise With Us
  • Grievances
  • About Us
  • Contact Us
Monday, June 22, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಅಶಕ್ತ ರೋಗಿಗಳ ಸೇವೆಗೆ ಗಾಜನೂರು ಬಳಿ ಕಂಕಣಬದ್ಧವಾಗಿ ನಿಂತಿದೆ ಶರಣ್ಯ

ರಾಜ್ಯಕ್ಕೇ ಮಾದರಿಯಾಗಿದೆ ಡಿಎಸ್’ಎಲ್ ಟ್ರಸ್ಟ್ ಸೇವಾ ಕಾರ್ಯ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
December 1, 2021
in ಶಿವಮೊಗ್ಗ
0
ಅಶಕ್ತ ರೋಗಿಗಳ ಸೇವೆಗೆ ಗಾಜನೂರು ಬಳಿ ಕಂಕಣಬದ್ಧವಾಗಿ ನಿಂತಿದೆ  ಶರಣ್ಯ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಿವಮೊಗ್ಗ  |

ಯಾವ ಪ್ರತಿಫಲಾಪೇಕ್ಷೆ ಇಲ್ಲದೇ ರೋಗಿಗಳ ಸೇವೆಗಾಗಿಯೇ ಕಂಕಣಬದ್ಧವಾಗಿರುವ ಗಾಜನೂರಿನ ಶರಣ್ಯ ಸಂಸ್ಥೆಯು ಮತ್ತಷ್ಟು ಸೇವೆ ನೀಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಿ.ಎಲ್. ಮಂಜುನಾಥ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಂನ್ನುದ್ದೇಶಿಸಿ ಮಾತನಾಡಿ, ಶರಣ್ಯ ಸಂಸ್ಥೆಯು ಕಳೆದ 25 ವರ್ಷಗಳಿಂದ ರೋಗಿಗಳಿಗಾಗಿಯೇ ವಿಶೇಷ ಸೇವೆ ನೀಡುತ್ತಾ ಬಂದಿದೆ. ಕ್ಯಾನ್ಸರ್, ಸಂಪೂರ್ಣ ಪಾರ್ಶ್ವವಾಯು, ಮೆದುಳಿನ ರಕ್ತಸ್ರಾವದಂತಹ ಕಾಯಿಲೆಗಳಿಂದ ಯಾವ ಚಿಕಿತ್ಸೆಗೂ ಗುಣಮುಖರಾಗದೇ ಬಳಲುತ್ತಿರುವವರಿಗೆ ಆಶ್ರಯ ನೀಡಿ ಅವರ ಅಂತಿಮ ದಿನಗಳನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುವ ಈ ಸಂಸ್ಥೆ ರಾಜ್ಯದಲ್ಲಿಯೇ ಎರಡನೇಯದಾಗಿದೆ ಎಂದರು.

ಮೊದ ಮೊದಲು ಕ್ಯಾನ್ಸರ್ ರೋಗಿಗಳಿಗೆ ಮನೆ ಬಾಗಿಲಿಗೆ ಹೋಗಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಗಾಜನೂರಿನ ಅಗ್ರಹಾರದಲ್ಲಿ ಸುಮಾರು 10.5 ಎಕರೆ ಜಾಗ ಖರೀದಿಸಿ ರೋಗಿಗಳ ಸೇವೆಗಾಗಿಯೇ ಎರಡು ವಾರ್ಡ್‌ಗಳನ್ನು ನಿರ್ಮಿಸಿ ಅತಿ ಹೆಚ್ಚು ಉಲ್ಬಣಿಸಿದ ರೋಗಿಗಳನ್ನು ನೋಡಿಕೊಳ್ಳುವ, ಆಶ್ರಯ ನೀಡುವ, ಆರೈಕೆ ಮಾಡುವ ಜವಾಬ್ದಾರಿಯನ್ನು ಹೊತ್ತಿದೆ ಎಂದು ತಿಳಿಸಿದರು.

ಮಾನವೀಯ ಹಿನ್ನಲೆಯಲ್ಲಿ ಶರಣ್ಯ ಸಂಸ್ಥೆ ಈ ಎಲ್ಲಾ ಸೇವೆಯನ್ನು ಉಚಿತವಾಗಿ ನೀಡುತ್ತಿದೆ. ದಾನಿಗಳ ನೆರವಿನಿಂದ ನಡೆಯುತ್ತಿದೆ. ಪ್ರತಿತಿಂಗಳು ಸುಮಾರು 3 ಲಕ್ಷ ರೂ. ಖರ್ಚು ಬರುತ್ತಿದೆ. ಇದುವರೆಗೂ ಹೇಗೋ ಇದನ್ನು ಹೊಂದಿಸಿಕೊಂಡು ಹೋಗುತ್ತಿದ್ದೇವೆ. ರೋಗಿಗಳ ಶುಶ್ರೂಷೆ ಜೊತೆಗೆ ಇದನ್ನು ಮತ್ತಷ್ಟು ಅಭಿವೃದ್ದಿಪಡಿಸಬೇಕಾಗಿದೆ. ಈಗ ಇನ್ನೂ ೨೦ ರೋಗಿಗಳು ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ಹೊಸ ವಾರ್ಡ್‌ವೊಂದನ್ನು ನಿರ್ಮಿಸಲಾಗುತ್ತಿದೆ ಅದರ ಖರ್ಚು ಕೂಡ ನಿಭಾಯಿಸಬೇಕಾಗಿದೆ. ಆದ್ದರಿಂದ ದಾನಿಗಳು ಈ ಸಂಸ್ಥೆಗೆ ಹೆಚ್ಚು ಹೆಚ್ಚು ನೆರವು ನೀಡಬೇಕು ಎಂದರು.

ದಾನಿಗಳು ತಮ್ಮ ದೇಣಿಗೆಯನ್ನು ಡಿಎಸ್‌ಎಲ್ ಟ್ರಸ್ಟ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಖಾತೆ ನಂ. 095431043000018, ಐ.ಎಫ್.ಎಸ್.ಸಿ. ಕೋಡ್ ಯುಬಿಐ ನಂ. 809543 ಕ್ಕೆ ಸಂದಾಯ ಮಾಡಬಹುದು. ಮತ್ತು ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 9945776583ಗೆ ಸಂಪರ್ಕಿಸುವಂತೆ ಕೋರಿದರು.

ಔಷಧಿ ವನ:
ಶರಣ್ಯ ಸಂಸ್ಥೆ ವತಿಯಿಂದ ಸುಮಾರು ಒಂದು ಎಕರೆಗೂ ಹೆಚ್ಚಿನ ಜಾಗದಲ್ಲಿ ಔಷಧಿ ವನ ನಿರ್ಮಿಸಲಾಗಿದೆ. ಆಲ, ಸರ್ಪವರ್ಣಿ, ಬಿಳಿ ಎಕ್ಕೆ, ಅಶ್ವತ್ಥ, ಅರಳಿ, ಬನ್ನಿ, ಗರಿಕೆ, ರಂಜಲು ಹೀಗೆ ಹಲವು ಬಗೆಯ ಸಸ್ಯ, ಗಿಡಗಳನ್ನು ಬೆಳೆಸಲಾಗಿದ್ದು, 12 ರಾಶಿ, 9 ಗ್ರಹ, 27 ನಕ್ಷತ್ರಗಳಿಗೆ ಅನುಗುಣವಾಗಿ ಯಾವ ರಾಶಿಯವರಿಗೆ ಯಾವ ಔಷಧಿ ಗಿಡ ಎಂಬುದನ್ನು ಕೂಡ ಸೂಚಿಸಲಾಗಿದೆ. ಈ ಔಷಧಿಯ ವನದಲ್ಲಿ ಕುಳಿತರೆ ಸಾಕು, ಒಂದು ವಿಶೇಷ ಶಕ್ತಿ ಉಂಟಾಗುತ್ತದೆ. ಪರಿಸರವೂ ಕೂಡ ಸ್ವಚ್ಛವಾಗಿರುತ್ತದೆ. ಈ ಅಮೂಲ್ಯ ಸಸ್ಯಗಳನ್ನು ನಾವು ವಿವಿಧೆಡೆಯಿಂದ ತಂದು ಬೆಳೆಸಿದ್ದೇವೆ ಎಂದು ಹೇಳಿದರು.

ಒಬ್ಬ ರೋಗಿ ಯಾವ ಕಾರಣಕ್ಕೂ ಗುಣವಾಗುವುದಿಲ್ಲ ಎಂದು ವೈದ್ಯರು ತಿಳಿಸಿದ ಮೇಲೆ ಅಂತಹ ರೋಗಿಗೆ ನಿರಂತರವಾದ ವೈದ್ಯಕೀಯ ಆರೈಕೆ ಅವರು ಬದುಕಿರುವ ತನಕ ಬೇಕಾಗುತ್ತದೆ. ಮತ್ತು ಅವರನ್ನು ಮನೆಗಳಲ್ಲಿ ನೋಡಿಕೊಳ್ಳುವುದು ಕಷ್ಟವಾಗುತ್ತದೆ. ರೋಗಿಯ ಕುಟುಂಬದವರಿಗೂ ಸಾಂತ್ವನ ನೀಡುವ ಪರಿಸ್ಥಿತಿ ಬರುತ್ತದೆ. ಈ ಸೇವೆ ಬಡವ, ಬಲ್ಲಿದ, ಜಾತಿ, ಧರ್ಮಗಳನ್ನು ಮೀರಿ ನಿಂತಿದೆ. ಹಾಗಾಗಿ ಪ್ರಾರ್ಥಿಸುವ ತುಟಿಗಳಿಗಿಂತ ಸೇವೆ ಮಾಡುವ ಕೈಗಳೇ ಮುಖ್ಯ ಎನ್ನುವ ಹಿನ್ನಲೆಯಲ್ಲಿ ಈ ಸಂಸ್ಥೆ ಒಂದು ಅದ್ಭುತ ಕೆಲಸ ಮಾಡುತ್ತಿದೆ ಎಂದರು.

ಸಂಸ್ಥೆಯ ಅಧ್ಯಕ್ಷ ಟಿ.ಆರ್. ಅಶ್ವತ್ಥನಾರಾಯಣಶೆಟ್ಟಿ ಮಾತನಾಡಿ, ಇಂತಹ ಮಾನವೀಯ ಅಂತಃಕರಣದ ಸಂಸ್ಥೆಯಲ್ಲಿ ಹಲವರು ಕೆಲಸ ಮಾಡುತ್ತಿದ್ದಾರೆ. ಇವರ ಸೇವೆ ಅಸಾಧಾರಣವಾದುದು ಎಂದು ಬಣ್ಣಿಸಿದರಲ್ಲದೇ, ಸತ್ಯನಾರಾಯಣ ಉಷಾ, ಶಾರದಾ, ಇಂದಿರಾ, ಪ್ರೇಮಾ, ಲಕ್ಷ್ಮಿ, ರಮೇಶ್, ಮುಸ್ತಾಫ್, ಟಿ.ಕೆ. ರಾಮನಾಥ್, ಜಯಶ್ರೀ ಮುಂತಾದ ಸಿಬ್ಬಂದಿಗೆ ಗುಲಾಬಿ ಹೂ ನೀಡಿ ಅಭಿನಂದನೆ ಸಲ್ಲಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶರಣ್ಯ ಸಂಸ್ಥೆಯ ಟ್ರಸ್ಟಿ ರಾಮಚಂದ್ರ ಗುಣಾರಿ, ಸಿಬ್ಬಂದಿಗಳಾದ ರಾಮನಾಥ್, ಅರ್ಜುನ್, ಮಂಜುನಾಥ್ ಸೇರಿದಂತೆ ಹಲವರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: ಶಿವಮೊಗ್ಗ
Share210Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

Science and Indian Scientists not only helped India in gaining Independence, but also sustaining it for 75 years

Next Post

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ 100 ರೂ. ಏರಿಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ 100 ರೂ. ಏರಿಕೆ

ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ 100 ರೂ. ಏರಿಕೆ

Leave a Reply Cancel reply

Your email address will not be published. Required fields are marked *

  • Trending
  • Latest
ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

ಭದ್ರಾವತಿಯ ಆರು ಆರೋಪಿಗಳಿಗೆ 3 & 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ | ನಡೆದಿದ್ದ ಅಪರಾಧವೇನು?

May 5, 2026
ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

ಸೊರಬ | ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಪತ್ತೆ | ಆತ್ಮಹತ್ಯೆ? ಮಾನಸಿಕ ಹಿಂಸೆ ಕಾರಣವೇ?

April 28, 2026
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
New Milestone in Athletics JSW Sports Achievement Recognized

ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು | ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಸಾಧನೆಗೆ ಮನ್ನಣೆ!

June 22, 2026
MODEL DEMOCRACY AT KRCS

Model Democracy At KRCS | Student Council Election Concluded Successfully

June 22, 2026
MODEL DEMOCRACY AT KRCS

ಕುಮದ್ವತಿ ವಸತಿ ಶಾಲೆಯಲ್ಲಿ ಮಾದರಿ ಪ್ರಜಾಪ್ರಭುತ್ವ | ವಿದ್ಯಾರ್ಥಿ ಸಂಘದ ಚುನಾವಣೆ ಯಶಸ್ವಿ

June 22, 2026
ಸೇನಾ ದಾಳಿಯಿಂದ ದೇಶದ ಒಳಗಿನ ಶತ್ರುಗಳಿಗೂ ನಡುಕ ಪ್ರಾರಂಭ | ಕೆ.ಎಸ್. ಈಶ್ವರಪ್ಪ

ಪ್ರಿಯಾಂಕ ಖರ್ಗೆಗೆ ಸಂವಿಧಾನದ ಅರಿವಿಲ್ಲ: ಮಾಜಿ ಡಿಸಿಎಂ ಈಶ್ವರಪ್ಪ

June 22, 2026
B Y Raghavendra Yoga Day

ದೇಹ – ಮನಸ್ಸನ್ನು ಸದೃಢಗೊಳಿಸಲು ಯೋಗ ಸಹಕಾರಿ | ಸಂಸದ ರಾಘವೇಂದ್ರ ಅಭಿಮತ

June 22, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL