ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶರಾವತಿ #Sharavathi ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂಬ ವಾದ ಈಗ ಮುಗಿದ ಅಧ್ಯಾಯ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್. ಮಧು ಬಂಗಾರಪ್ಪ #Madhu Bangarappa ಸ್ಪಷ್ಟಪಡಿಸಿದರು.
ಅವರು ಲಿಂಗನಮಕ್ಕಿ ಜಲಾಶಯಕ್ಕೆ #Linganamakki Dam ಪುಷ್ಟವೃಷ್ಟಿ ಮಾಡಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಯಾವ ಕಾರಣಕ್ಕೂ ಈ ನದಿ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ಯೋಜನೆಗೆ ಆಸ್ಪದ ಕೊಡುವುದಿಲ್ಲ. ಇದನ್ನು ಕೇವಲ ವಿದ್ಯುತ್ ಬಳಕೆಗಾಗಿ ಮಾತ್ರ ಉಪಯೋಗಿಸಬೇಕು ಎಂಬ ನಿಯಮವಿದೆ. ಆದರೆ ಜಲಾಶಯದಲ್ಲಿ ಡೆಡ್ ಸ್ಟೋರೇಜ್ ನೀರು ಶೇಖರಣೆಯಾಗುವುದರಿಂದ ಅದನ್ನು ವಿಶೇಷ ಪ್ರಕರಣವಾಗಿ ಕುಡಿಯುವ ನೀರಿಗೆ ಮಾತ್ರ ಉಪಯೋಗಿಸಲಾಗುತ್ತದೆ. ಅದೂ ಕೇವಲ ಶಿವಮೊಗ್ಗ ಜಿಲ್ಲೆ ಮತ್ತು ನೆರೆಯ ಉತ್ತರ ಕನ್ನಡದ ಸಿದ್ದಾಪುರಕ್ಕೆ ಮಾತ್ರ ಎಂದು ಅವರು ತಿಳಿಸಿದರು.
ಸಿದ್ದಾಪುರದವರೂ ನೀರು ಕೇಳಿದ್ದಾರೆ. ಈಗಾಗಲೇ ತಾಳಗುಪ್ಪ ವರೆಗೆ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಸೊರಬ ತಾಲೂಕಿನ 354 ಗ್ರಾಮಗಳಿಗೆ ಶರಾವತಿಯಿಂದ ಸುಮಾರು 580 ಕೋಟಿ ರೂ. ನೀರು ಕೊಡುವ ಯೋಜನೆ ಇದೆ. ಇವುಗಳ ಹೊರತಾಗಿ ಸುಮಾರು 200 ಕೋಟಿ ರೂ.ವೆಚ್ಚದಲ್ಲಿ ಸೊರಬ ನಗರ, ಆನವಟ್ಟಿ ಮತ್ತು ಶಿರಾಳಕೊಪ್ಪ ಪಟ್ಟಣ ಪಂಚಾಯತಿಗಳಿಗೂ ಕುಡಿಯುವ ನೀರನ್ನು ಹರಿಸುವ ಪ್ರಸ್ತಾಪ ಇದೆ ಎಂದು ಸಚಿವರು ಹೇಳಿದರು.
ಲಿಂಗನಮಕ್ಕಿ ಜಲವಿದ್ಯುದಾಗಾರ ರಾಜ್ಯದಲ್ಲೇ ಅತಿ ಹೆಚ್ಚು ವಿದ್ಯುತ್ ಉತ್ಪಾದಿಸುವ ಘಟಕವಾಗಿದ್ದು, 4 ಸ್ಥಳದಲ್ಲಿ ವಿದ್ಯುತ್ ಉತ್ಪಾದನಾ ಕೇಂದ್ರಗಳಿವೆ. ಇದು ಈ ಭಾಗದ ಜನರ ಆಸ್ತಿ. ಇದು ರಾಜ್ಯದ ವಿದ್ಯುತ್ ಅಭಾವವನ್ನು ನೀಗಿಸಿದೆ ಎಂದರು.
ಸಿದ್ದರಾಮಯ್ಯ ಮುಖ್ಯ ಮಂತ್ರಿಯಾದರೆ ರಾಜ್ಯದಲ್ಲಿ ಬರಗಾಲ ಸಂಭವಿಸುತ್ತದೆ ಎಂದು ವಿರೋಧ ಪಕ್ಷದವರು ಬೊಬ್ಬೆ ಹೊಡೆಯುತ್ತಾರೆ. ಆ ಚಾಳಿಯನ್ನು ಅವರು ಬಿಡಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗಲೇ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದೆ. ಜಲಾಶಯಗಳು ತುಂಬಿ ತುಳುಕುತ್ತವೆ ಎಂದು ಬಿಜೆಪಿಗೆ ಚಾಟಿ ಬೀಸಿದರು.
ಸಾಗರ ಶಾಸಕ ಗೋಪಾಲ ಕೃಷ್ಣ ಬೇಳೂರು ಮಾತನಾಡಿ, 1964ರಲ್ಲಿ ಜಲಾಶಯ ನಿರ್ಮಾಣವಾಯಿತು. ಅಂದಿನಿAದ ಇಲ್ಲಿಯವರೆಗೆ 21 ಬಾರಿ ತುಂಬಿ, ನೀರನ್ನು ನದಿಗೆ ಬಿಡಲಾಗಿದೆ. ತಾವು ಶಾಸಕರಾದ ಮೇಲೆ 2 ಬಾರಿ ಜಲಾಶಯ ತುಂಬಿದ್ದು ಸಂತಸ ತಂದಿದೆ ಎಂದರು.
5 ಕ್ರಸ್ಟ್ ಗೇಟ್‌ಗಳನ್ನು ತೆರೆದು 3,500 ಕ್ಯೂಸೆಕ್ ನೀರನ್ನು ಶರಾವತಿ ನದಿಗೆ ಬಿಡಲಾಯಿತು. ಈ ಸಂದರ್ಭದಲ್ಲಿ ಶಾಸಕಿ ಬಲ್ಕಿಶ್‌ಬಾನು, ರಾಜ್ಯ ಬೋವಿ ನಿಗಮದ ಅಧ್ಯಕ್ಷ ರವಿಕುಮಾರ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post