ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಿಂದ ದೂರವಿರುವ ಗೋಪಾಳದಲ್ಲಿರುವ ಆಹಾರ ಇಲಾಖೆಯ ಕಚೇರಿಯನ್ನು #Food Department office ಸೂಡಾ ಆವರಣಕ್ಕೆ ವರ್ಗಾಯಿಸಬೇಕು ಎಂದು ಶಾಂತಾವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಇಂದು ಶಾಸಕ ಎಸ್.ಎನ್. ಚನ್ನಬಸಪ್ಪ #MLA Channabasappa ಅವರಿಗೆ ಮನವಿ ಸಲ್ಲಿಸಿತು.
ಆಹಾರ ಇಲಾಖೆಯ ಕಛೇರಿಯು ನಗರದ ಹೊರಭಾಗದಲ್ಲಿದೆ. ಇದು ದೂರವಿರುವುದರಿಂದ ಹಿರಿಯರು, ನಾಗರೀಕರು, ಮಹಿಳೆಯರು, ಓಡಾಡುವುದು ಕಷ್ಟವಾಗುತ್ತದೆ. ಅದರಲ್ಲೂ ಬಡವರು ಈ ಕಛೇರಿಗೆ ಹೋಗಬೇಕು ಎಂದರೆ ಆಟೋಗಳಿಗೆ ಸುಮಾರು 250 ರೂ.ಗಳನ್ನು ಭರಿಸಬೇಕಾಗುತ್ತದೆ. ಇದು ಕಷ್ಟಸಾಧ್ಯವಾಗುತ್ತದೆ ಎಂದು ಮನವಿದಾರರು ತಿಳಿಸಿದರು.
ಈಗ ಬಿಪಿಎಲ್ ಕಾರ್ಡುಗಳ ಪರಿಷ್ಕರಣೆ ಮಾಡಬೇಕಾಗುತ್ತದೆ. ಹಾಗಾಗಿ ಆಹಾರ ಇಲಾಖೆಗೆ ಓಡಾಡುವವರ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಈ ಕಛೇರಿಗೆ ಅಲೆದಾಡಿ ಬಡಜನರು ಹೈರಾಣಾಗಿದ್ದಾರೆ. ಹೇಗಿದ್ದರೂ ಸೂಡಾ ಕಛೇರಿ ಆವರಣದಲ್ಲಿದ್ದ ಸಬ್ ರಿಜಿಸ್ಟ್ರರ್ ಆಫೀಸ್ ಈಗ ಖಾಲಿಇದೆ. ಈ ಖಾಲಿ ಇರುವ ಕಛೇರಿಗೆ ಅಥವಾ ಜಿಲ್ಲಾಧಿಕಾರಿಗಳ ಪಕ್ಕದಲ್ಲಿರುವ ಹಳೇ ಡಿಸಿ ಕಛೇರಿ ನೆಲಮಹಡಿಗಾದರೂ ವರ್ಗಾಯಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಪ್ರಮುಖರಾದ ಹೆಚ್.ಎಂ. ಸಂಗಯ್ಯ, ಸಂಕ್ರಾನಾಯ್ಕ, ಆಲೀಂಖಾನ್, ಜನಮೇಜಿರಾವ್, ಜೀವನ್‍ಗೌಡ, ಚಿರಾಗ್, ಎಸ್.ಪಿ. ಶಿವಣ್ಣ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 
















