ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ/ಶಿವಮೊಗ್ಗ |
ಬಹಳಷ್ಟು ಜನರು ಇಷ್ಟು ಪಟ್ಟು ಸೇವಿಸುವ ಪನ್ನೀರ್ ಹಾಗೂ ಟೂಟಿ-ಫ್ರೂಟಿಯನ್ನು #TootieFruity ಮನೆಯಲ್ಲೇ ಮಾಡಿಕೊಳ್ಳುವ ಸರಳ ವಿಧಾನವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ತಿಳಿಸಿಕೊಟ್ಟರು.
ಶಿಕಾರಿಪುರ #Shikaripura ತಾಲೂಕಿನ ನೆಲವಾಗಿಲು ಗ್ರಾಮದಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಗುಂಪು ಚರ್ಚೆಯಲ್ಲಿ ಗ್ರಾಮಸ್ಥರಿಗೆ ತಿಳಿಸಿಕೊಟ್ಟರು.
Also Read>> ಕಲಾವಿದರ ಕೈಚಳಕ | 10 ಚಿತ್ರ | ವೃದ್ಧಿಸಿದ ಬೆಂಗಳೂರಿನ ಸೌಂದರ್ಯ | ಏನೆಲ್ಲಾ ಕಥೆ ಹೇಳುತ್ತಿವೆ ನೋಡಿ
ಪನ್ನೀರ್ ತಯಾರಿಕೆ ಹೇಗೆ?
ಪನ್ನೀರ್ #Paneer ಒಂದು ಹಾಲಿನ ಮೌಲ್ಯವರ್ಧನೆಯಾಗಿದೆ. ಇದನ್ನು ತಯಾರಿಸಲು ಹಾಲನ್ನು ಕುದಿಸಿ ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಅಥವಾ ವಿನೇಗರ್ ಹಾಕಿ ಕುದಿಸಬೇಕು. ತದನಂತರ ಹಾಲು ಒಡೆಯುತ್ತದೆ.ಹಾಲು ಒಡೆದ ನಂತರ ಅದನ್ನು ಸೋಸಿ ನೀರಿನ ಅಂಶ ಹೋಗುವವರೆಗೂ ಕಾಟನ್ ಬಟ್ಟೆಯಿಂದ ಹಿಂಡಬೇಕು. ನಂತರ ಫ್ರೀಜರ್’ನಲ್ಲಿ ಶೇಕರಿಸಿಡಬೇಕು. ಪನ್ನೀರ್ ಪ್ರೋಟೀನ್ ಮತ್ತು ಆರೋಗ್ಯಕರ ಫ್ಯಾಟ್ಸ್’ಗಳಿಂದ ತುಂಬಿದೆ. ಪ್ರಮುಖವಾಗಿ ಇದರ ಮೌಲ್ಯ ಒಂದು ಕೆಜಿಗೆ ಸುಮಾರು 400 ರೂಪಾಯಿಗಳು. ಆದರೆ ಮನೆಯಲ್ಲೇ 1 ಲೀಟರ್ ಹಾಲಿಗೆ 200 ಗ್ರಾಂ ಪನ್ನೀರ್ ತಯಾರಿಸಬಹುದು ಎಂಬುದನ್ನು ಪದ್ಧತಿ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಟ್ಟರು.
ಟೂಟಿ ಫ್ರೂಟಿ ತಯಾರಿಕೆ ಹೇಗೆ?
ಟೂಟಿ ಫ್ರೂಟಿ ಎಂದರೆ ಪರಂಗಿ ಕಾಯಿಂದ ಮಾಡುವ ಒಂದು ಸಿಹಿ ತಿನಿಸು. ಇದನ್ನು ಮಾಡಲು ಪರಂಗಿ ಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಬಿಸಿ ನೀರಲ್ಲಿ ಕಾಯಿಸಿ ತದನಂತರ ಸಕ್ಕರೆಯ ಪಾಕದಲ್ಲಿ ಕುದಿಸಿ ಆರಿಸಬೇಕು. ತದನಂತರ ನಮಗೆ ಯಾವ ಬಣ್ಣದಲ್ಲಿ ಬೇಕೋ ಆ ಅಡುಗೆ ಬಣ್ಣವನ್ನು ಹಾಕಬಹುದು ಎಂದು ತೋರಿಸಿಕೊಟ್ಟರು. ಇದು ಅಂಗಡಿಯಲ್ಲಿ 1ಕೆಜಿಗೆ ಸುಮಾರು 90 ರೂ.ಗಳು ಎಂಬುದನ್ನು ಕೂಡ ವಿದ್ಯಾರ್ಥಿಗಳು ಮನವರಿಕೆ ಮಾಡಿ ಕೊಟ್ಟರು.Also Read>> ಪತ್ರಕರ್ತರ ಸಹಕಾರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ
ನೆಲವಾಗಿಲಿನ ಜನರು ಈ ಎರಡು ಪದಾರ್ಥವನ್ನು ಮೆಚ್ಚಿದರು ಹಾಗೂ ಮಹಿಳೆಯರು ಮನೆಯಲ್ಲೇ ಮಾಡಿ ವಾಣಿಜ್ಯೋದ್ಯಮಿಯಾಗಬಹುದು. ಇದು ಲಾಭದಾಯಕವಾಗಿದ್ದು, ಸ್ವಚ್ಛತೆಯಿಂದ ಮಾಡುವುದರಿಂದ ಆರೋಗ್ಯಕರವಾಗಿದೆ ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post