ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಶಿಕಾರಿಪುರ ಪಟ್ಟಣದ ಕಾನೇರ ಕೇರಿಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂಪ್ಪ ಅವರ ನಿವಾಸಕ್ಕೆ ಇಂದು ರಂಭಾಪುರಿ ಭೇಟಿ ನೀಡಿದ ಸಂದರ್ಭದಲ್ಲಿ ಸಂಸದ ಬಿ.ವೈ. ರಾಘವೇಂದ್ರ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ಕುಟುಂಬ ಸಮೇತ ಶ್ರೀಗಳ ಪಾದಪೂಜೆ ನೆರವೇರಿಸಿದರು.
ಯಡಿಯೂರಪ್ಪ ಕುಟುಂಬ ಮೊದಲಿನಿಂದಲೂ ಸಹ ರಂಭಾಪುರಿ ಮಠದ ಭಕ್ತರಾಗಿದ್ದು, ಪಾದಪೂಜೆಯ ನಂತರ ಯಡಿಯೂರಪ್ಪನವರ ಕುಟುಂಬದವರಿಗೆ ಶ್ರೀಗಳು ಆಶೀರ್ವಾದ ಮಾಡಿದರು.
ಪ್ರಸಕ್ತ ರಾಜಕೀಯ ಏರುಪೇರಿನಲ್ಲಿ ರಂಭಾಪುರಿ ಶ್ರೀಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿರುವುದು ಹಲವು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post