ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ/ಶಿಕಾರಿಪುರ |
ಲೋಕಸಭಾ ಚುನಾವಣೆಯ #Lok Sabha Election ಸ್ವತಂತ್ರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ #K S Eshwarappa ಅವರ ರಾಷ್ಟ್ರ ಭಕ್ತರ ಬಳಗದ ಶಿಕಾರಿಪುರ ಕಚೇರಿ ಮುಂಭಾಗದಲ್ಲಿ ವಾಮಾಚಾರ ನಡೆಸಲಾಗಿದೆ.
ಶಿಕಾರಿಪುರದಲ್ಲಿರುವ ರಾಷ್ಟ್ರ ಭಕ್ತರ ಕಚೇರಿ ಮುಂಭಾಗದ ಬಾಗಿಲಿನ ಮುಂದೆ ಅರಿಶಿನ, ಕುಂಕುಮ, ನಿಂಬೆಹಣ್ಣು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿದ್ದು, ವಾಮಾಚಾರ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಕಳೆದ ರಾತ್ರಿ ವಾಮಾಚಾರ ನಡೆಸಿರುವ ಸಂಶಯ ವ್ಯಕ್ತವಾಗಿದ್ದು, ಇದು ಹೊಸ ವಿವಾದವನ್ನು ಸೃಷ್ಠಿಸಿದೆ.

ಜನರಿಂದ ತಿರಸ್ಕಾರಗೊಳ್ಳುವ ಭೀತಿಯಿಂದ ಯಡಿಯೂರಪ್ಪ ಕುಟುಂಬ ವಾಮಾಚಾರದಂತ ಅಸಹ್ಯ ಕೃತ್ಯ ನಡೆಸಿರಬಹುದು. ಧರ್ಮ ಮತ್ತು ದೇವರು ನನ್ನ ಜೊತೆಯಿದ್ದು, ವಾಮಾಚಾರ ಮಾಡುವ ಯಡಿಯೂರಪ್ಪನವರ ವಿರುದ್ಧ ನನ್ನ ಗೆಲುವು ನಿಶ್ಚಿತ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news















Discussion about this post