ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಸದ್ಗುರು ಪೈಲ್ಸ್ ಕ್ಲಿನಿಕ್’ನಲ್ಲಿ ಜುಪಿಟರ್ ಅಕಾಡೆಮಿ ವತಿಯಿಂದ ಮೂರು ದಿನಗಳ ಕಾಲ ಆರ್ಯುವೇದ ವೈದ್ಯರಿಗಾಗಿ ಆಯೋಜಿಸಲಾಗಿದ್ದ ಪ್ರಾಕ್ಟೋ ಪ್ರಾಕ್ಟೀಸಸ್ 2024 – ಮೂಲವ್ಯಾಧಿ ಶಸ್ತ್ರಚಿಕಿತ್ಸಾ ತರಬೇತಿ ಕಾರ್ಯಾಗಾರ ಯಶಸ್ವಿಯಾಯಿತು.
ಆಯುರ್ವೇದದ ಖ್ಯಾತ ಶಸ್ತçಚಿಕಿತ್ಸಾ ತಜ್ಞರಾದ ಡಾ. ಎಚ್.ಎಸ್. ಸತೀಶ್ ಹಾಗೂ ಡಾ. ರಂಜನಿ ಬಿದರಳ್ಳಿಯವರು ತರಬೇತುದಾರರಾಗಿ 20 ಶಸ್ತ್ರಚಿಕಿತ್ಸೆಗಳನ್ನು 3 ದಿನದ ಶಿಬಿರದಲ್ಲಿ ಶಿಬಿರಾರ್ಥಿಗಳಿಂದ ನೆರವೇರಿಸಿದರು.
ಕರ್ನಾಟಕದ ವಿವಿಧ ಭಾಗಗಳಿಂದ 8 ವೈದ್ಯರು ಉತ್ಸಾಹದಿಂದ ಭಾಗವಹಿಸಿ ಕ್ಷಾರಕರ್ಮ, ಕ್ರಯೋಸರ್ಜರಿ ಮುಂತಾದ ರೀತಿಯ ಮೂಲವ್ಯಾಧಿ ಚಿಕಿತ್ಸೆಗಳ ತರಬೇತಿ ಪಡೆದರು.
Also read: ಬೆಂಗಳೂರು | ಜಯನಗರ ಶ್ರೀಗುರುರಾಯರ ಮಠದಲ್ಲಿ ಆರಾಧನೆಗೆ ವಿದ್ಯುಕ್ತ ಚಾಲನೆ
ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಶಾಸಕ ಚನ್ನಬಸಪ್ಪ ಮಾತನಾಡಿ, ಈ ಪ್ರಯತ್ನ ಮೊಟ್ಟಮೊದಲ ಬಾರಿಗೆ ಶಿವಮೊಗ್ಗದಲ್ಲಿ ನಡೆದಿದ್ದು ನಮಗೆಲ್ಲ ಹೆಮ್ಮೆಯ ವಿಷಯವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಕಾರ್ಯಕ್ರಮಕ್ಕೆ ತಮ್ಮ ಸಂಪೂರ್ಣ ಬೆಂಬಲ ಇರುವುದಾಗಿ ತಿಳಿಸಿದರು.
ಟಿಎಂಎಇ ಕಾಲೇಜಿನ ಉಪ ಪ್ರಾಂಶುಪಾಲರಾದ ಡಾ. ಸದಾನಂದ ಜೋಶಿ, ಸದ್ಗುರು ಫೌಂಡೇಶನ್ ನ ಅಧ್ಯಕ್ಷರಾದ ನಾಗರಾಜ್, ಆಯುರ್ವೇದ ತಜ್ಞೆ. ಚಿತ್ರಲೇಖ ವಿ. ಕೃಷ್ಣ ಹಾಗೂ ಹಲವು ಆಯುರ್ವೇದ ವೈದ್ಯರು, ಆಯುರ್ವೇದ ಔಷಧಿ ಕಂಪನಿಗಳ ಸಿಬ್ಬಂದಿಗಳು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post