ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಂತ್ರಿಕ ಕಾರಣದ ಹಿನ್ನೆಲೆಯಲ್ಲಿ ಕಡೂರು ಮಾರ್ಗವಾಗಿ ಸಂಚರಿಸುವ ಶಿವಮೊಗ್ಗ ಬೆಂಗಳೂರು ನಡುವಿನ ರೈಲುಗಳ ಸಂಚಾರ ಸಮಯದಲ್ಲಿ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ರೈಲ್ವೆ ಇಲಾಖೆ ಪ್ರಕಟಣೆ ಹೊರಡಿಸಿದ್ದು, ಕಡೂರು ರೈಲ್ವೆ ನಿಲ್ದಾಣದಲ್ಲಿ ಡ್ಯುವೆಲ್ ವಿಡಿಯು ಸಿಸ್ಟಂ ಅಳವಡಿಕೆ ಮಾಡಲಾಗುತ್ತಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳ ಸಂಚಾರ ಸಮಯದಲ್ಲಿ ಡಿಸೆಂಬರ್ 5 ಹಾಗೂ 6ರಂದು ವ್ಯತ್ಯಯ ಉಂಟಾಗಲಿದೆ.
ಶಿವಮೊಗ್ಗ – ಚಿಕ್ಕಮಗಳೂರು ಪ್ಯಾಸೆಂಜರ್ ರೈಲು ಡಿ.6ರಂದು ಬೀರೂರುವರೆಗೆ ಮಾತ್ರ ಸಂಚರಿಸಲಿದ್ದು, ಬೀರೂರು – ಚಿಕ್ಕಮಗಳೂರು ನಡುವೆ ರೈಲು ಸಂಚರಿಸುವುದಿಲ್ಲ.
Also read: ಗಮನಿಸಿ! ಡಿ.4ರ ಭಾನುವಾರ ಶಿವಮೊಗ್ಗದ ಬಹುತೇಕ ಭಾಗಗಳಲ್ಲಿ ಕರೆಂಟ್ ಇರಲ್ಲ
16535 ಸಂಖ್ಯೆಯ ತುಮಕೂರ-ಶಿವಮೊಗ್ಗ ಎಕ್ಸ್’ಪ್ರೆಸ್ ರೈಲು ಮಾರ್ಗ ಮಧ್ಯೆ 30 ನಿಮಿಷ ತಡವಾಗಿ ಸಂಚರಿಸಲಿದೆ. ಬೆಂಗಳೂರು-ಶಿವಮೊಗ್ಗ ಜನ ಶತಾಬ್ದಿ ರೈಲು ಡಿ.6ರಂದು ಸಮಯವನ್ನು 120 ನಿಮಿಷ ತಡವಾಗಿ ಹೊರಡಲಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post