ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೀಪಾವಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆಯು ವಿಶೇಷ ರೈಲುಗಳಳನ್ನು ನಿಯೋಜಿಸಿದ್ದು, ಯಶವಂತಪುರ-ಹುಬ್ಬಳ್ಳಿ, ಯಶವಂತಪುರ-ಬೆಳಗಾವಿ ಮತ್ತು ಯಶವಂತಪುರ-ಶಿವಮೊಗ್ಗಕ್ಕೆ ಈ ವಿಶೇಷ ರೈಲುಗಳು ಸಂಚರಿಸಲಿವೆ.
ವಿಶೇಷ ರೈಲುಗಳ ಮಾಹಿತಿ ಹೀಗಿದೆ:
ರೈಲು ಸಂಖ್ಯೆ 06507 ಯಶವಂತಪುರ – ಶಿವಮೊಗ್ಗ ಟೌನ್ ವಿಶೇಷ ಎಕ್ಸ್‌ಪ್ರೆಸ್ (ಏಕೈಕ ಸೇವೆ) ಸಂಚರಿಸುತ್ತಿದೆ.
ರೈಲು ಸಂಖ್ಯೆ 06507 ಯಶವಂತಪುರ – ಶಿವಮೊಗ್ಗ ಟೌನ್ ವಿಶೇಷ ಎಕ್ಸ್‌ಪ್ರೆಸ್ ಅಕ್ಟೋಬರ್ 22 ರಂದು ಯಶವಂತಪುರ ನಿಲ್ದಾಣದಿಂದ ಬೆಳಿಗ್ಗೆ 10:30 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 03:30 ಕ್ಕೆ ಶಿವಮೊಗ್ಗ ಟೌನ್ ನಿಲ್ದಾಣ ತಲುಪಲಿದೆ.
ಈ ರೈಲು ತುಮಕೂರು (11:14/11:15 AM), ಅರಸೀಕೆರೆ (12:33/12:34 PM), ಬೀರೂರು (01:23/01:25 PM) ಮತ್ತು ಭದ್ರಾವತಿ (02:18/02:20 PM) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸುತ್ತದೆ.
Also read: ಅ.22 ರಂದು ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ: 600 ಮಹಿಳೆಯರಿಂದ ಸಮೂಹ ಗಾಯನ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post