ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ ಯುವಕನಿಗೆ ಶಿವಮೊಗ್ಗದ ನ್ಯಾಯಾಲಯ 15,500 ರು. ದಂಡ ವಿಧಿಸಿದೆ.
ನಗರದ ಕಾಮಾಕ್ಷಿ ಬೀದಿಯ ಯುವಕನೊಬ್ಬ ಶಿವಮೊಗ್ಗದ ರಸ್ತೆಯಲ್ಲಿ ಬೈಕ್ ವೀಲಿಂಗ್ ಮಾಡಿದ್ದ. ಇದರ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದ. ವೀಲಿಂಗ್ ಮಾಡುವ ವಿಡಿಯೋ ಚಿತ್ರೀಕರಿಸಲು ಮತ್ತೊಂದು ಬೈಕ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ 5 ಸಾವಿರ ರು. ದಂಡ ವಿಧಿಸಲಾಗಿದೆ.

Also read: ನಕಲಿ ವೈದ್ಯರಿಗೆ ಶಾಕ್ : ನಗರದ 25 ಕ್ಲಿನಿಕ್‌ಗಳ ಮೇಲೆ ದಾಳಿ
ವಿಚಾರಣೆ ನಡಸಿದ 5ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ವೀಲಿಂಗ್ ಮಾಡಿದ ಬೈಕ್ ಸವಾರ ಮತ್ತು ಹಿಂಬದಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಗಿದ್ದ ಬೈಕ್ ಸವಾರನಿಗೆ ದಂಡ ವಿಧಿಸಿದೆ. ವೀಲಿಂಗ್ ಮಾಡಿದ್ದ ಬೈಕ್ ಸವಾರ ರೇಸಿಂಗ್, ಡಿ.ಎಲ್. ರಹಿತ ಚಾಲನೆ, ನಿರ್ಲಕ್ಷ್ಯದ ಚಾಲನೆ, ಬೈಕ್‌ನಲ್ಲಿ ಸೈಡ್ ಮಿರರ್‌ಗಳಿಲ್ಲದಿರುವುದಕ್ಕೆ 15,500 ರೂ. ದಂಡ ವಿಧಿಸಲಾಗಿದೆ.









Discussion about this post